ವಿಜಯಪುರ: ಲ್ಯಾಪಟಾಪ್ ಮರಳಿಸಿ ಪ್ರಾಮಾಣಿಕತೆ ಮೆರೆದ ಸರ್ಕಾರಿ ಬಸ್‌ ಚಾಲಕ, ನಿರ್ವಾಹಕ

KannadaprabhaNewsNetwork |  
Published : Aug 12, 2024, 01:36 AM ISTUpdated : Aug 12, 2024, 07:59 AM IST
ಲ್ಯಾಪಟಾಪ್ ಮರಳಿಸಿ ಪ್ರಾಮಾಣಿಕತೆ ಮೆರೆದ ಸರ್ಕಾರಿ ಬಸ್‌ ಚಾಲಕ, ನಿರ್ವಾಹಕ. | Kannada Prabha

ಸಾರಾಂಶ

 ಮರೆತು ಬಸ್‌ನಲ್ಲಿ ಬಿಟ್ಟುಹೋಗಿದ್ದ ಲ್ಯಾಪಟಾಪ್‌ನ್ನು ಪ್ರಯಾಣಿಕನಿಗೆ ವಾಪಸ್‌ ನೀಡುವ ಮೂಲಕ ಬಸ್ ಚಾಲಕ ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಕರ್ತವ್ಯದ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ವಿಜಯಪುರ: ಮರೆತು ಬಸ್‌ನಲ್ಲಿ ಬಿಟ್ಟುಹೋಗಿದ್ದ ಲ್ಯಾಪಟಾಪ್‌ನ್ನು ಪ್ರಯಾಣಿಕನಿಗೆ ವಾಪಸ್‌ ನೀಡುವ ಮೂಲಕ ಬಸ್ ಚಾಲಕ ಶೇಖರ ಬೋಗಂ ಹಾಗೂ ನಿರ್ವಾಹಕ ಗುಂಡೂರಾವ ರಾಠೋಡ ಕರ್ತವ್ಯದ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ. 

ವಿಜಯಪುರದಿಂದ ಮುಳಸಾವಳಗಿಗೆ ಹೊರಟಿದ್ದ ವಿಜಯಪುರ ಘಟಕ-1ರ ಬಸ್ ಸಂಖ್ಯೆ ಕೆಎ28 ಎಫ್-1703ರಲ್ಲಿ ಪ್ರಯಾಣಿಕ ನೂರಲಿಶಾ ಮಕಾಂದಾರ ತನ್ನ ₹50 ಸಾವಿರ ಮೌಲ್ಯದ ಲ್ಯಾಪಟಾಪ್ ಬಿಟ್ಟು ಮುಳಸಾವಳಗಿಯಲ್ಲಿ ಇಳಿದು ಹೋಗಿದ್ದರು.

 ಈ ವೇಳೆ ಇದನ್ನು ಗಮನಿಸಿದ ಬಸ್‌ನ ಚಾಲಕ ಹಾಗೂ ನಿರ್ವಾಹಕ ಸೇರಿ ಪ್ರಯಾಣಿಕನನ್ನು ಕರೆದು ಆತನಿಗೆ ಲ್ಯಾಪಟಾಪ್ ಮರಳಿಸಿದ್ದಾರೆ. ಇವರ ಕಾರ್ಯಕ್ಕೆ ಲ್ಯಾಪಟಾಪ್ ಕಳೆದುಕೊಂಡಿದ್ದ ಪ್ರಯಾಣಿಕ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ