ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರ್ಕಾರ ಬದ್ಧ: ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌

KannadaprabhaNewsNetwork |  
Published : Apr 07, 2026, 01:45 AM IST
6ಜಿಪಿಟಿ1ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ (ಓಂಕಾರ ವಲಯ) ಬಳಿ 7.83 ಕೋಟಿ ವೆಚ್ಚದಲ್ಲಿ 4.67 ಕಿ.ಮಿ ರೇಲ್ವೇ ಬ್ಯಾರಿಕೇಡ್‌ ಕಾಮಗಾರಿಗೆ ಶಾಸಕ ಗಣೇಶ್‌ ಪ್ರಸಾದ್‌ ಅವರು ಶಂಕು ಸ್ಥಾಪನೆ ಮಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಇಂದು ಶಂಕು ಸ್ಥಾಪನೆಯಾದ 4.67 ಕಿ.ಮಿ ಜೊತೆಗೆ ಹೆಚ್ಚುವರಿಯಾಗಿ ಓಂಕಾರ ವಲಯಕ್ಕೆ 4 ಕಿ.ಮಿ ಹಾಗೂ ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ 5.33 ಕಿ.ಮಿ ರೇಲ್ವೇ ಬ್ಯಾರಿಕೇಡ್‌ ರಾಜ್ಯ ಸರ್ಕಾರ ಮಂಜೂರು ಮಾಡಿದೆ.

ಮುಖ್ಯಾಂಶ

ಮಂಚಹಳ್ಳಿ ಬಳಿ 7.83 ಕೋಟಿ ವೆಚ್ಚದ 4.67 ಕಿ.ಮಿ ರೇಲ್ವೇ ಬ್ಯಾರಿಕೇಡ್‌ಗೆ ಶಂಕು|

ಓಂಕಾರಕ್ಕೆ ಮತ್ತೆ 4 ಕಿ.ಮಿ,, ಜಿ.ಎಸ್.ಬೆಟ್ಟಕ್ಕೆ 5.33 ಕಿ.ಮಿ ರೇಲ್ವೇ ಬ್ಯಾರಿಕೇಡ್ ಮಂಜೂರು

---------------ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ನಾನು ಬದ್ಧನಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರೈತರಿಗೆ ಅಭಯ ನೀಡಿದರು.

ತಾಲೂಕಿನ ಮಂಚಹಳ್ಳಿ ಗ್ರಾಮದ (ಓಂಕಾರ ವಲಯ) ಬಳಿ 7.83 ಕೋಟಿ ವೆಚ್ಚದಲ್ಲಿ 4.67 ಕಿ.ಮಿ ರೇಲ್ವೇ ಬ್ಯಾರಿಕೇಡ್‌ ಕಾಮಗಾರಿಗೆ ಶಂಕು ಸ್ಥಾಪನೆ ಬಳಿಕ ಮಾತನಾಡಿ ರಾಜ್ಯ ಸರ್ಕಾರ ಇಂದು ಶಂಕು ಸ್ಥಾಪನೆಯಾದ 4.67 ಕಿ.ಮಿ ಜೊತೆಗೆ ಹೆಚ್ಚುವರಿಯಾಗಿ ಓಂಕಾರ ವಲಯಕ್ಕೆ 4 ಕಿ.ಮಿ ಹಾಗೂ ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ 5.33 ಕಿ.ಮಿ ರೇಲ್ವೇ ಬ್ಯಾರಿಕೇಡ್‌ ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು.

14 ಕಿ.ಮಿ ರೇಲ್ವೇ ಬ್ಯಾರಿಕೇಡ್‌ಗೆ ಒಟ್ಟು 24 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, 4 ಮತ್ತು 5.33 ಕಿ.ಮಿ ರೇಲ್ವೇ ಬ್ಯಾರಿಕೇಡ್‌ಗೆ ಟೆಂಡರ್‌ ಹಂತದಲ್ಲಿದೆ. ಈ ಕಾಮಗಾರಿ ಮುಕ್ತಾಯಗೊಂಡರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುರುಬರಹುಂಡಿ, ಮಂಚಹಳ್ಳಿ, ಆಲತ್ತೂರು, ಸವಕನಹಳ್ಳಿ ಹಾಗೂ ದೇಶಿಪುರ ಸುತ್ತ ಮುತ್ತ ಕಾಡಾನೆಗಳ ಹಾವಳಿ ತಪ್ಪಲಿದೆ ಎಂದು ಹೇಳಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ವ್ಯಾಪ್ತಿ ಕಾಡಂಚಿನ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಇರುವ ಗ್ರಾಮಗಳ ಬಳಿ ರೇಲ್ವೇ ಬ್ಯಾರಿಕೇಡ್‌ಗೆ ಇನ್ನೂ ಹೆಚ್ಚಿನ ಅನುದಾನ ನೀಡಲು ಅರಣ್ಯ ಸಚಿವರಾದ ಈಶ್ವರ್‌ ಬಿ. ಖಂಡ್ರೆ ಒಪ್ಪಿಗೆ ಸೂಚಿಸಿದ್ದಾರೆ. ರೇಲ್ವೇ ಬ್ಯಾರಿಕೇಡ್‌ ಕಾಮಗಾರಿ ಮುಗಿಯುವ ತನಕ ಈ ಭಾಗದ ರೈತರು ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್‌ ಮಾತನಾಡಿ ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಸಲ್ಲಿಸಿದ್ದ ಡಿಪಿಆರ್‌ಗೆ ಶಾಸಕರಾದ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ರಾಜ್ಯ ಸರ್ಕಾರದಿಂದ ಅನುದಾನ ತರುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಆಲತ್ತೂರು ಜಯರಾಂ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ಎಪಿಎಂಸಿ ಅಧ್ಯಕ್ಷ ಆರ್.ಎಸ್. ನಾಗರಾಜು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ. ಮಡಿವಾಳಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾಪತಿ, ಕೋಟೆಕೆರೆ ಫ್ಯಾಕ್ಸ್‌ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಬಿ.ಸಿ. ಮಹದೇವಸ್ವಾಮಿ, ಎಸಿಎಫ್‌‌ ಕೆ.ಸುರೇಶ್‌, ಆರ್‌ಎಫ್ಒ ಹನುಮಂತಪ್ಪ ಸೇರಿ ಹಲವರಿದ್ದರು.------ಕೋಟ್‌-----

ಸಫಾರಿನೇ ಬೇರೆ, ಕಾಡು ಪ್ರಾಣಿಗಳ ಹಾವಳಿನೇ ಬೇರೆ!

ಹುಲಿ ಹಾಗೂ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿತ್ತು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾದ ಬಳಿಕ ಸಫಾರಿ ನಿಲ್ಲಿಸಲಾಗಿತ್ತು ಆದರೆ ಸಫಾರಿನೇ ಬೇರೆ, ಕಾಡು ಪ್ರಾಣಿಗಳ ಹಾವಳಿನೇ ಬೇರೆ ಎಂದು ತಜ್ಞರು ಸಮಿತಿ ಹೇಳಿದೆ.

-ಎಚ್.ಎಂ.ಗಣೇಶ್‌ ಪ್ರಸಾದ್‌,ಶಾಸಕ-------ಬಾಕ್ಸ----------

ಒಂಟಿಯಾನೆ ಸೆರೆಗೆ ಶಾಸಕ ಗಣೇಶ್‌ ಸೂಚನೆಓಂಕಾರ ವಲಯದ ಮಂಚಹಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಡ್ಡಾಡುವ ಒಂಟಿ ಆನೆ ಸೆರೆಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದರು.

ರೇಲ್ವೇ ಬ್ಯಾರಿಕೇಡ್‌ ಗುದ್ದಲಿ ಪೂಜೆ ಸಮಾರಂಭದಲ್ಲಿ ರೈತರು ಒಂಟಿ ಆನೆ ಜನ ಹಾಗೂ ಫಸಲಿಗೆ ಬಾರಿ ತೊಂದರೆ ಕೊಡುತ್ತಿದೆ ಎಂದು ಶಾಸಕರ ಬಳಿ ದೂರಿದಾಗ ಶಾಸಕರು ತಮ್ಮ ಭಾಷಣದಲ್ಲಿ ಒಂಟಿ ಆನೆ ಸೆರೆ ಆಗಲಿದೆ ಎಂದು ರೈತರಿಗೆ ಭರವಸೆ ನೀಡಿದರು.

ಕಾಡು ಪ್ರಾಣಿಗಳ ಹಿಡಿಯುವ ಸಮಯದಲ್ಲಿ ರೈತರು ಹಾಗೂ ಸಾರ್ವಜನಿಕರು ಕೂಗಾಟ, ತಳ್ಳಾಟ, ಆಕ್ರೋಶ ವ್ಯಕ್ತಪಡಿಸುವುದರಿಂದ ಕಾರ್ಯಾಚರಣೆಗೆ ತೊಂದರೆ ಆಗುತ್ತದೆ. ಪ್ರಾಣಿಗಳು ಕಂಡಾಕ್ಷಣ ಹಿಡಿಯಲು ಆಗುವುದಿಲ್ಲ ಎಂದು ಹೇಳಿದರು.

ಹುಲಿ ಕಂಡ ತಕ್ಷಣ ಹುಲಿ ಹಿಡಿಯಲು ಆಗಲ್ಲ. ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆ ಕೇಂದ್ರ ಕಚೇರಿ ಅನುಮತಿ ಕೊಟ್ಟರೆ ಮಾತ್ರ ಇಲ್ಲಿನ ಅಧಿಕಾರಿಗಳು ಸೆರೆಗೆ ಮುಂದಾಗುತ್ತಾರೆ. ಪ್ರಕ್ರಿಯೆ ಮುಗಿಯುವವರೆಗೆ ರೈತರು ಹಾಗೂ ಸಾರ್ವಜನಿಕರು ತಾಳ್ಮೆಯಿಂದಿದ್ದು ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ತಿ‍ಳಿಸಿದರು.-----------------

6ಜಿಪಿಟಿ1

ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ (ಓಂಕಾರ ವಲಯ) ಬಳಿ 7.83 ಕೋಟಿ ವೆಚ್ಚದಲ್ಲಿ 4.67 ಕಿ.ಮಿ ರೇಲ್ವೇ ಬ್ಯಾರಿಕೇಡ್‌ ಕಾಮಗಾರಿಗೆ ಶಾಸಕ ಗಣೇಶ್‌ ಪ್ರಸಾದ್‌ ಅವರು ಶಂಕು ಸ್ಥಾಪನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಶಾಸಕ ಸುರೇಶ್‌ಗೌಡರಿಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ
ಬೊಮ್ಮೇನಹಳ್ಳಿ ಸುತ್ತಮುತ್ತ ಬೀಡುಬಿಟ್ಟ ಕಾಡಾನೆ ಹಿಂಡು