ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರನ್ನು ಸರ್ಕಾರ ದಿಢೀರನೆ ಕೋಲಾರಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದು, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರನ್ನು ಆ ಹುದ್ದೆಯಲ್ಲಿ ಇರುವಾಗಲೇ ವರ್ಗಾವಣೆ ಮಾಡಲಾಗಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದಶಿಯಾಗಿದ್ದ ಬಳಿಕ, ಅದನ್ನು ತೊರೆದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾದರು. ಆದರೆ, ತಮ್ಮ ವಿಶ್ವಾಸ ಮತ್ತು ಸಂಬಂಧವನ್ನು ಯಡಿಯೂರಪ್ಪ ಕುಟುಂಬದ ಜೊತೆ ಹಾಗೆಯೇ ಉಳಿಸಿಕೊಂಡಿದ್ದರು. ಬಹುಶಃ ಇದು ಕೆಲವರ ಕೆಂಗಣ್ಣಿಗೆ ಗುರಿ ಆಗಿರಬಹುದು ಎಂಬ ಶಂಕೆ ನೌಕರರ ವಲಯದಲ್ಲಿದೆ.
ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ ಅವರು ಸರ್ಕಾರಿ ನೌಕರರ ವಿರುದ್ಧ ತಮ್ಮ ನಡೆ ಮುಂದುವರಿಸಿದಾಗ ಅವರನ್ನು ಷಡಾಕ್ಷರಿ ಎದುರು ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಸಾಕಷ್ಟು ಜಟಾಪಟಿಯೂ ನಡೆದಿತ್ತು. ಕುಮಾರ್ ಬಂಗಾರಪ್ಪ ಅವರು ನೇರವಾಗಿ ಷಡಾಕ್ಷರಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದರು. ಇದಕ್ಕೆ ಷಡಾಕ್ಷರಿ ಕೂಡ ತಮ್ಮ ಮಿತಿಯಲ್ಲಿ ಕೌಂಟರ್ ನೀಡಿದ್ದರು. ಇದರ ಪರಿಣಾಮ ಸೊರಬ ವಿಧಾನಸಭಾ ಚುನಾವಣೆಯ ಮೇಲೆ ಬಿದ್ದಿತ್ತು. ಸರ್ಕಾರಿ ನೌಕರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮತವನ್ನು ಮಧು ಬಂಗಾರಪ್ಪ ಪರ ಚಲಾಯಿಸಿದ್ದು ಫಲಿತಾಂಶದ ವಿಶ್ಲೇಷಣೆ ವೇಳೆ ಹೊರಬಿದ್ದಿತ್ತು.ಹೊಸ ಸರ್ಕಾರ ಕೆಂಗಣ್ಣು:
ಆರೋಪಗಳ ಹಿನ್ನೆಲೆ ವರ್ಗಾವಣೆ?:
ಮುಖ್ಯವಾಗಿ ಲೋಕಸಭಾ ಚುನಾವಣೆ ಈ ವರ್ಗಾವಣೆಯ ಹಿಂದೆ ಕೆಲಸ ಮಾಡಿದೆ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ಖಚಿತ. ಇತ್ತ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್ ಅವರನ್ನು ಸ್ಪರ್ಧೆಗೆ ಇಳಿಸುವುದು ಮಧು ಬಂಗಾರಪ್ಪ ಇರಾದೆಯಾಗಿದೆ. ಒಂದು ಪಕ್ಷ ಇವೆಲ್ಲವೂ ಅಂದುಕೊಂಡಂತೆ. ಆದರೆ, ಷಡಾಕ್ಷರಿ ಅವರು ರಾಜ್ಯ ನೌಕರರ ಸಂಘದ ಅಧ್ಯಕ್ಷರಾಗಿಯೂ ಬಿ.ವೈ. ರಾಘವೇಂದ್ರ ಪರ ಕೆಲಸ ಮಾಡಬಹುದು ಎಂಬ ಆತಂಕ ಈ ವರ್ಗಾವಣೆ ಹಿಂದೆ ಇದೆಯೇ ಎಂಬ ವಿಚಾರವೂ ಚರ್ಚೆಯಲ್ಲಿ ಕೇಳಿಬರುತ್ತಿದೆ.
- - - ಕೋಟ್ಸ್ ಷಡಾಕ್ಷರಿ ಆಗಲಿ, ಮತ್ತೊಬ್ಬರು ಆಗಲಿ ಸರ್ಕಾರ ಬಂದಾಗ ಅಧಿಕಾರಿಗಳು ಬದಲಾಗುತ್ತಾರೆ. ಒಳ್ಳೆಯ ಅಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ರಾಜಕೀಯ ಕಾರಣಕ್ಕೆ ಈ ರೀತಿಯ ವರ್ಗಾವಣೆ ಮಾಡುವುದು ಸರಿಯಲ್ಲ
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರನ್ನು ವರ್ಗಾಯಿಸಲಾಗಿದೆ. ಆದರೆ, ಯಾವ ಕಾರಣಕ್ಕೆ ವರ್ಗಾಯಿಸಲಾಗಿದೆ ಎಂದು ಗೊತ್ತಿಲ್ಲ. ನನ್ನ ವರ್ಗಾವಣೆಗೆ ಯಾರು ಒತ್ತಡ ಹೇರಿದ್ದರೋ, ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಆದರೆ ನನ್ನ ಮೇಲೆ ಬಂದಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಜಿಲ್ಲಾಧಿಕಾರಿ ಅವರೇ ವರದಿ ನೀಡಿದ ಬಳಿಕವೂ ಅದೇ ಕಾರಣ ಮುಂದಿರಿಸಿರುವುದು ಎಷ್ಟು ಸರಿ?
- - - -08ಕೆಪಿಎಸ್ಎಂಜಿ11: ಸಿ.ಎಸ್. ಷಡಾಕ್ಷರಿ