ಕನ್ನಡಪ್ರಭ ವಾರ್ತೆ ಕೆ.ಆರ್. ನಗರ2025-26ನೇ ಸಾಲೀನ ಎಸ್ಸೆಸ್ಸೆಲ್ಸಿಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ 2,658 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,449 ಮಂದಿ ಉತ್ತೀರ್ಣರಾಗಿದ್ದು. ಶೇ. 92.13 ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ ಹೇಳಿದರು. ಪಟ್ಟಣದ ಬಿಇಓ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳಲ್ಲಿ 15 ಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಬನ್ನಿಮಂಟಪ್ಪ, ಬಿ.ಎಸ್. ಮಾದಪ್ಪ, ಲಯನ್ಸ್ ಪ್ರೌಢಶಾಲೆ, (ಇಂಗ್ಲೀಷ್ ಮತ್ತು ಕನ್ನಡ ವಿಭಾಗ), ಕನಕ ಪಬ್ಲಿಕ್ ಶಾಲೆ, ಬಿಜಿಎಸ್ ಪ್ರೌಢಶಾಲೆ, ಎಸ್‌ಎನ್‌ಎಸ್ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಡಿ.ಕೆ.ಕೊಪ್ಪಲು, ಸಂತಅಂತೋಣಿ ಶಾಲೆ ದೊಡ್ಡೆಕೊಪ್ಪಲು, ಗುರುಕುಲ ಹೈ ಕಾಳೇನಹಳ್ಳಿ, ಸಾಲಿಗ್ರಾಮ ತಾಲೂಕಿನ ಹನಸೋಗೆಯ ಸರ್ಕಾರಿ ಪ್ರೌಢಶಾಲೆ, ಹೆಬ್ಸೂರಿನ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆ, ಅರಕರೆ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಸಿಇಟಿ ಶಾಲೆ ಮಿರ್ಲೆ, ಸಾ.ರಾ. ವಿದ್ಯಾ ಸಂಸ್ಥೆಗಳ ಈ ಸಾಧನೆ ಮಾಡಲು ಕಾರಣರಾದ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು. ಸರ್ಕಾರಿ ಶಾಲೆಗಳು ಶೇ. 90.5, ಅನುದಾನಿತ ಶಾಲೆಗಳು ಶೇ. 88.4, ಅನುದಾನ ರಹಿತ ಶಾಲೆಗಳು ಶೇ. 97.72 ರಷ್ಟು ಫಲಿತಾಂಶ ಪಡೆದಿದ್ದು, 529 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 944 ಮಂದಿ ಪ್ರಥಮ ಸ್ಥಾನಗಳಿಸಿದ್ದಾರೆ. ಬಿ.ಎಸ್. ಮಾದಪ್ಪ ಪ್ರೌಢಶಾಲೆಯ ಡಿ.ಜಿ. ವಿನುತ 625/623 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಎರಡನೇಯವಳಾಗಿದ್ದಾಳೆ. 31 ಮಕ್ಕಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ ಬಿಇಓ ಆರ್. ಕೃಷ್ಣಪ್ಪ ತೇರ್ಗಡೆಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.------------