ಬಡವರಿಗೆ ಸರ್ಕಾರಿ ಆಸ್ಪತ್ರೆಗಳು ವರದಾನ: ಸುರೇಶ ನಾರಾಯಣ

KannadaprabhaNewsNetwork |  
Published : Jun 21, 2025, 12:49 AM IST
ಟೋಲ್ ಪ್ಲಾಜಾ ವತಿಯಿಂದ ಬಂಕಾಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 40 ಕುರ್ಚಿಗಳನ್ನು ದೇಣಿಗೆ ನೀಡಲಾಯಿತು. | Kannada Prabha

ಸಾರಾಂಶ

ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ.

ಶಿಗ್ಗಾಂವಿ: ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ ಬಹುದೊಡ್ಡ ಸಂಪತ್ತಾಗಿದ್ದು, ಸರ್ಕಾರಿ ಆಸ್ಪತ್ರೆ ಬಡವರಿಗೆ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ವರದಾನವಾಗಿ ಪರಿಣಮಿಸಿದೆ ಎಂದು ತಾಲೂಕಿನ ಬಂಕಾಪುರ ಪಟ್ಟಣದ ಟೋಲ್ ಪ್ಲಾಜಾದ ಪ್ರೊಜೆಕ್ಟ್ ಮ್ಯಾನೇಜರ್ ಸುರೇಶ ನಾರಾಯಣ ತಿಳಿಸಿದರು.ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಲದಕಟ್ಟಿಯವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಟೋಲ್ ಪ್ಲಾಜಾ ವತಿಯಿಂದ ರೋಗಿಗಳಿಗೆ ಹಾಗೂ ಸಿಬ್ಬಂದಿಗೆ ಉಚಿತ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿ, ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಬಡವರಿಗೆ ಸರ್ಕಾರಿ ಆಸ್ಪತ್ರೆಗಳೆ ಪುನರಜನ್ಮ ನೀಡುವ ಆರೋಗ್ಯ ಕೇಂದ್ರಗಳಾಗಿವೆ. ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸೇವೆ ಪಡೆಯಲು ಬರುವ ರೋಗಿಗಳಿಗೆ ಅನುಕೂಲವಾಗುವ ಸದುದ್ದೇಶದಿಂದ ನಮ್ಮ ಟೋಲ್ ಪ್ಲಾಜಾ ಆಶ್ರಯದಲ್ಲಿ ೪೦ ಕುರ್ಚಿಗಳನ್ನು ಹಾಗೂ ಸಿಬ್ಬಂದಿಗಳಿಗೆ ೧೦ ಕುಷನ್ ಚೇರ್‌ಗಳು ಸೇರಿದಂತೆ ಒಟ್ಟು ೫೦ ಚೇರ್‌ಗಳನ್ನು ನೀಡಲಾಗಿದೆ ಎಂದರು.ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮನೋಜ್‌ಕುಮಾರ ಮಾತನಾಡಿ, ಟೋಲ್ ಪ್ಲಾಜಾದವರು ನಮ್ಮ ಆಸ್ಪತ್ರೆಗೆ ೪೦ ಚೇರ್‌ಗಳನ್ನು ನೀಡಿರುವುದು, ಬಡ ರೋಗಿಗಳು ಸರತಿಯಲ್ಲಿ ಕುಳಿತುಕೊಂಡೇ ಆರೋಗ್ಯೆ ಸೇವೆ ಪಡೆಯಲು ಸಹಕಾರಿಯಾಗಿದೆ ಎಂದರು.ಪ್ಲಾಜಾ ಮ್ಯಾನೇಜರ್ ವೆಂಕಣ್ಣ ಬಾಬು, ಟೋಲ್ ಮ್ಯಾನೇಜರ್‌ ಸಂತೋಷಕುಮಾರ, ರಾಜು ಬಲಾ, ಮಂಘಲಸಿಂಗ್‌, ಸುರೇಶ, ದ್ಯಾಮಪ್ಪ, ಡಾ. ವಸ್ತ್ರದಮಠ, ಡಾ. ಸಲಿಂ ಇಳಕಲ್, ಡಾ. ಚಂದ್ರಶೇಖರ ಚಿಂದಡಿ, ಡಾ. ಶರಣ, ಗೀತಾ ಪಾಟೀಲ ಆಶ್ಮಾಭಾನು, ನೇತ್ರಾ, ಭುವನೇಶ್ವರಿ ಸೇರಿದಂತೆ ಇತರರು ಇದ್ದರು.ಫಸಲ್ ಬಿಮಾ ಯೋಜನೆ: ಕಂತು ತುಂಬಲು ಸೂಚನೆ

ರಾಣಿಬೆನ್ನೂರು: ತಾಲೂಕಿನ ರಾಣಿಬೆನ್ನೂರು, ಮೆಡ್ಲೇರಿ ಮತ್ತು ಕುಪ್ಪೇಲೂರು ಹೋಬಳಿಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಟೊಮೇಟೊ, ಈರುಳ್ಳಿ(ನೀರಾವರಿ) ಮತ್ತು ಈರುಳ್ಳಿ(ಮಳೆಯಾಶ್ರಿತ) ಬೆಳೆಗಳಿಗೆ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.ಈರುಳ್ಳಿ(ನೀರಾವರಿ) ಮತ್ತು ಈರುಳ್ಳಿ(ಮಳೆಯಾಶ್ರಿತ) ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜು. 17 ಕೊನೆಯ ದಿನವಾಗಿದೆ.

ಟೊಮೇಟೊ ಬೆಳೆಗೆ ಜು. 31 ಕೊನೆಯ ದಿನವಾಗಿದೆ. ಯೋಜನೆಯ ಮಾರ್ಗಸೂಚಿಗಳನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆ ಅಡಿಯಲ್ಲಿ ಒಳಪಡಿಸಲಾಗುವುದು. ನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆಪಡದೇ ಇದ್ದಲ್ಲಿ ಆ ಕುರಿತು ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂಥ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳಲು ಫ್ರುಟ್ಸ್ ಐಡಿ(ಎಫ್ಐಡಿ) ಹೊಂದಿರುವುದು ಕಡ್ಡಾಯವಾಗಿದೆ. ಈ ಯೋಜನೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಬ್ಯಾಂಕ್/ ಗ್ರಾಮ ಒನ್ ಕೇಂದ್ರ /ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈತರು ಬೆಳೆವಿಮೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಣಿಬೆನ್ನೂರು ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಬೆಂಗಳೂರು ನಗರದ ಅಭಿವೃದ್ಧಿಗೆ 1.35 ಲಕ್ಷ ಕೋಟಿ ರು. ಯೋಜನೆ
ಒಂದೇ ದಿನ ಮೆಟ್ರೋದಲ್ಲಿ 11 ಲಕ್ಷ ಜನ ಪ್ರಯಾಣ - ಹೊಸ ದಾಖಲೆ ಸೃಷ್ಟಿ