ಸರ್ಕಾರಿ ವಸತಿ ನಿಲಯ, ವಸತಿ ಶಾಲೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

KannadaprabhaNewsNetwork |  
Published : Jul 30, 2024, 12:31 AM IST
26ಕೆಪಿಎಲ್24 ಕೊಪ್ಪಳ ನಗರದ ಜಿಲ್ಲಾಡಳಿತ ಭವನದ ಎದುರು  ವಸತಿ ನಿಲಯಗಳ ಹೊರಗುತ್ತಿಗೆ ನೌಕರರು ಶುಕ್ರವಾರ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ವಸತಿ ನಿಲಯ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಕೊಪ್ಪಳ

ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ವಸತಿ ನಿಲಯ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘ ಕರ್ನಾಟಕ ರಾಜ್ಯ ಕ್ರೈಸ್ ವಸತಿ ಶಾಲೆಗಳ ಡಿ ಗ್ರೂಪ್ ನೌಕರರ ಸಂಘ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಸಂಪನ್ಮೂಲ ನೌಕರರ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.

ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕಳೆದ ೧೧ ವರ್ಷದಿಂದ ಒಂದೇ ಏಜೆನ್ಸಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದು ಕೊಪ್ಪಳ ಜಿಲ್ಲಾ ಸಾರ್ವಜನಿಕ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಹಕಾರ ಸಂಘ ನಿ., ಕೊಪ್ಪಳದ ಪ್ರಸ್ತುತ ಅದರ ಸದಸ್ಯರಾಗಿ ಹಾಸ್ಟೆಲ್ ಹೊರಗುತ್ತಿಗೆ ನೌಕರರು ನೆಮ್ಮದಿಯಿಂದ ಸೇವಾ ಭದ್ರತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಸ್ತುತ ಏಜೆನ್ಸಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ಪ್ರತಿ ವರ್ಷ ಟೆಂಡರ್ ಕರೆಯುವ ಮುಖಾಂತರ ೧೧೦೦ ಕುಟುಂಬಗಳು ಆತಂಕದಲ್ಲಿರುವಂತೆ ಮಾಡಿದೆ. ಸಹಕಾರ ಸಂಘ ರಚನೆಯ ಆನಂತರ ಜಿಲ್ಲೆಯಲ್ಲಿ ೩ ಇಲಾಖೆಯ ಕಾರ್ಮಿಕರು ವೇತನ, ಪಿ.ಎಫ್. ಮತ್ತು ಇಎಸ್‌ಐ ನೀಡಿಲ್ಲವೆಂದು ಪ್ರತಿಭಟನೆ ಮಾಡಿಲ್ಲ. ಇದರ ಹೊರತಾಗಿಯೂ ಟೆಂಡರ್ ಕರೆಯುವುದು ನಮ್ಮನ್ನು ಅತಂತ್ರ ವ್ಯವಸ್ಥೆಗೆ ದೂಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಟೆಂಡರ್ ಅಂತಿಮವಾಗಿದ್ದು, ಸಹಕಾರ ಸಂಘಕ್ಕೆ ಕಾರ್ಯಾದೇಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಜಂಬಯ್ಯ ನಾಯಕ್, ಗ್ಯಾನೇಶ ಕಡಗದ, ಮಹಮದ್ ರಫೀಕ್, ದಾವಲಸಾಬ್ ಕಂಪ್ಲಿ, ಫಕೀರಪ್ಪ ಬಿ., ಬಸವರಾಜ ಕೆಳಗಿನಮನಿ, ದಸ್ತಗೀರ ಸಾಬ್‌, ದೊಡ್ಡಬಸವರಾಜ, ಮುತ್ತಣ್ಣ ಕೆ. ಸುರೇಶ, ಕಾರಟಗಿ ಗಾಳೆಪ್ಪ, ಮುತ್ತವ್ವ ಮೊದಲಾದವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...