ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಬಿಎಲ್ಒ-2 ಹಾಗೂ ಗ್ರಾಪಂ ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರ ಮತ್ತು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವಕರ ಸಂಘಟನೆ ಗುಂಪು ರಚಿಸಿ ಆ ಮೂಲಕ ಯುವಕರಿಗೆ ಆರ್ಥಿಕ ನೆರವಿನದೊಂದಿಗೆ ಅವರಲ್ಲಿ ದೇಶ ಪ್ರೇಮ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.ದೇಶ ಪ್ರೇಮವನ್ನು ಯುವಕರಲ್ಲಿ ಸದೃಢಗೊಳಿಸಲು ಸರ್ಕಾರ ಗ್ರಾಪಂ ಮಟ್ಟದಲ್ಲಿ ಭಾರತ್ ಜೋಡೋ ಹೆಸರಿನಲ್ಲಿ ಸಂಘಟನೆ ಮಾಡಿ ಅವರಲ್ಲಿನ ಸಂಘಟನ್ಮಾತಕ ಮನೋಭಾವನೆ ಬೆಳೆಸಲಾಗುವುದು. ಸ್ಥಳೀಯವಾಗಿ ಮುಖಂಡರು ಯುವಕರನ್ನು ಆಯ್ಕೆ ಮಾಡಲು ಮುಂದಾಗಬೇಕು. ನವೆಂಬರ್ ನಲ್ಲಿ ಯುವಕರಿಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಮಾಜಿ ನಿರ್ದೇಶಕ ಆರ್.ಎನ್.ವಿಶ್ವಾಸ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸವಿತಾ, ಮುಖಂಡರಾದ ಪಿ.ಮಾದೇಶ್, ಎಂ.ಎನ್.ದಯಾಶಂಕರ್, ಎಂ.ಎನ್.ಜಯರಾಜು ಪಾಲ್ಗೊಂಡಿದ್ದರು.