ಉದ್ಯೋಗಾಧಾರಿತ ಶಿಕ್ಷಣಕ್ಕೆ ಸರ್ಕಾರ ಒತ್ತು

KannadaprabhaNewsNetwork |  
Published : Aug 01, 2025, 11:45 PM IST
೧ಕೆಎಲ್‌ಆರ್-೫-೧ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವದಲ್ಲಿ  ರ್‍ಯಾಂಕ್ ವಿಜೇತ ೪೬ ಮಂದಿಗೆ ಚಿನ್ನದಪದಕ ಪ್ರದಾನ ಮಾಡಿದ್ದು, ಚಿನ್ನದಪದಕ ಸ್ವೀಕರಿಸಲು ಶ್ವೇತವಸ್ತ್ರದಾರಿಗಳಾಗಿ ಸಿದ್ದಗೊಂಡು ಆಗಮಿಸಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದರು. | Kannada Prabha

ಸಾರಾಂಶ

ಅಮರಾವತಿ ಸಮೀಪ ಉತ್ತರ ವಿವಿಯ ಕಟ್ಟಡ ನಿರ್ಮಾಣದ ಹಂತದಲ್ಲಿ ಇದ್ದು, ರಸ್ತೆ ಅಭಿವೃದ್ಧಿಗೆ ೯ ಕೋಟಿ ಬೇಕಾಗಿದೆ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಮಂಜೂರು ಮಾಡಿಸಲಾಗುವುದು. ಜಿಲ್ಲೆಗೆ ಕೊಡುಗೆ ನೀಡುವ ಉದ್ದೇಶದಿಂದ ನಗರ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಕಾಲೇಜು ಅಭಿವೃದ್ಧಿಗೆ ೬೦ ಕೋಟಿ ಮಂಜೂರು ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದ್ದು, ಉದ್ಯೋಗಾಧರಿತ ಶಿಕ್ಷಣ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೫ನೇ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವರು, ಉನ್ನತ ಶಿಕ್ಷಣದಲ್ಲಿ ಕ್ವಾಂಟಮ್ ಕಂಪ್ಯೂಟರಿಂಗ್ ಶಿಕ್ಷಣದಲ್ಲಿ ಅಗತ್ಯವಿದ್ದು, ಕಂಪ್ಯೂಟರ್ ಶಿಕ್ಷಣ ಜಾರಿಗೆ ತರಲಾಗುವುದು. ಜತೆಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು.ಕಾಲೇಜು ಅಭಿವೃದ್ಧಿಗೆ ₹೬೦ ಕೋಟಿ

ಅಮರಾವತಿ ಸಮೀಪ ವಿವಿಯ ಕಟ್ಟಡ ನಿರ್ಮಾಣದ ಹಂತದಲ್ಲಿ ಇದ್ದು, ರಸ್ತೆ ಅಭಿವೃದ್ಧಿಗೆ ೯ ಕೋಟಿ ಬೇಕಾಗಿದೆ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಮಂಜೂರು ಮಾಡಿಸಲಾಗುವುದು. ನಮ್ಮ ಬೇರು ಇರೊದು ಕೋಲಾರದಲ್ಲಿ ಅದ್ದರಿಂದ ಜಿಲ್ಲೆಗೆ ಕೊಡುಗೆ ನೀಡುವ ಉದ್ದೇಶದಿಂದ ನಗರ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಕಾಲೇಜು ಅಭಿವೃದ್ಧಿಗೆ ೬೦ ಕೋಟಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂವರು ಸಾಧಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಸಮಾಜಸೇವೆ ವಿಭಾಗದಿಂದ ಡಾ.ಎಚ್.ಎಸ್.ಶೆಟ್ಟಿ, ಸಂಗೀತ ರಂಗಭೂಮಿ ಕ್ಷೇತ್ರದಿಂದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್, ಉದ್ಯಮಶೀಲತೆ ವಿಭಾಗದಿಂದ ಬೆಂಗಳೂರಿನ ಪ್ರತಿಷ್ಠಿತ ಬ್ರಾಹ್ಮಿನ್ಸ್ ಕಾಫಿ ಬಾರ್‌ನ ಮಾಲೀಕ ರಾಧಾಕೃಷ್ಣ ಅಡಿಗ ಅವರಿಗೆ ಡಾಕ್ಟರೇಟ್‌ ನೀಡಿ ಗೌರವಿಸಲಾಯಿತು. ಪಿಚ್ಚಳ್ಳಿ ರೀತಿ ಸಾಧನೆ ಮಾಡಿ

೨೦೦೫ರಲ್ಲಿ ವಿಧಾನ ಸೌಧದಲ್ಲಿ ಶಾಸಕರ ದಿನಾಚರಣೆ ವೇಳೆ ಪಿಚ್ಚಳ್ಳಿ ಶ್ರೀನಿವಾಸ್ ಬಯಲು ಸೀಮೆ ಜಿಲ್ಲೆಯ ಕೆರೆಗಳ ಕುರಿತು ಹಾಡು ಹಾಡಿಸಿದರು. ಇದು ಈಗಾಗಲೇ ನನಗೆ ನೆನಪಾಗುತ್ತಿರುತ್ತದೆ. ಆದ್ದರಿಂದ ಶ್ರೀನಿವಾಸ್ ನನ್ನ ಗುರುಗಳಾಗಿದ್ದು, ಮೂವರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ಅವರ ಸಾಧನೆಗೆ, ಅವರ ಹಾದಿಯಲ್ಲಿ ನೀವು ಗೌರವ ಪಡೆದುಕೊಳ್ಳಬೇಕು ಎಂದು ಸಚಿವ ಸುಧಾಕರ್‌ ಹೇಳಿದರು.ಇದೇ ಸಂದರ್ಭದಲ್ಲಿ ರ್‍ಯಾಂಕ್ ವಿಜೇತ ೪೬ ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ