ಕನ್ನಡಪ್ರಭ ವಾರ್ತೆ ಕಾರ್ಕಳ
ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜನಪ್ರತಿನಿಧಿಗಳ ಬದಲಿಗೆ ಅಧಿಕಾರಿಗಳ ಮೂಲಕ ನಡೆಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.ರಾಜ್ಯ ಸರ್ಕಾರವು ವಾರ್ಡ್‌ವಾರು ಸದಸ್ಯರ ಸಂಖ್ಯೆ ಹಾಗೂ ಮೀಸಲು ನಿಗದಿ ಮಾಡದೆ ಇದ್ದ ಕಾರಣದಿಂದಲೇ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿರುವುದು ಸರ್ಕಾರದ ಬೇಜವಾಬ್ದಾರಿತನದ ಉದಾಹರಣೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಕಾಲದಲ್ಲಿ ನಡೆಸುವುದು ಸಂವಿಧಾನ ಭಾದ್ಯತೆ ಎಂದು ಸುಪ್ರೀಂ ಕೋರ್ಟ್ ಕೂಡ ಎಚ್ಚರಿಸಿದ್ದರೂ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಪ್ರಜಾಪ್ರಭುತ್ವದ ಬೇರುಗಳು ದುರ್ಬಲವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.ಲಕ್ಷಾಂತರ ಸ್ಥಳೀಯ ನಾಯಕರಿಂದ ಬೃಹತ್ ಪ್ರತಿಭಟನೆಗೆ ತಯಾರಾಗಿರಿ, ಪಕ್ಷಭೇದ ಮರೆತು ಬೀದಿಗಿಳಿಯುವ ಪರಿಸ್ಥಿತಿ ಉಂಟಾಗಲಿದೆ ಎಂದು ಕಾಮತ್ ಎಚ್ಚರಿಸಿದರು.