ಎನ್‌ಡಿಎ ಚುನಾವಣಾ ತಂತ್ರ ನೇರ ಭ್ರಷ್ಟಾಚಾರ: ಎ.ಎಸ್. ಪೊನ್ನಣ್ಣ

KannadaprabhaNewsNetwork |  
Published : Nov 17, 2025, 02:00 AM IST
ಪೊನ್ನಣ್ಣ | Kannada Prabha

ಸಾರಾಂಶ

ಎನ್‌ಡಿಎ ಚುನಾವಣಾ ತಂತ್ರಗಳನ್ನು ನೇರ ಭ್ರಷ್ಟಾಚಾರ ಎಂದು ಶಾಸಕರು ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಮಹಾಘಟಬಂಧನ್‌ಗೆ ಭಾರೀ ಆಘಾತವಾದರೆ, ಎನ್‌ಡಿಎ (ಬಿಜೆಪಿ-ಜೆಡಿಯು) ಭರ್ಜರಿ ಗೆಲುವು ಪಡೆದಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಶಾಸಕ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣರು ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿ, ಎನ್‌ಡಿಎ ಚುನಾವಣಾ ತಂತ್ರಗಳನ್ನು ''''''''''''''''ನೇರ ಭ್ರಷ್ಟಾಚಾರ'''''''''''''''' ಎಂದು ಖಂಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಆಗುವವರೆಗೆ ನಾವು ಏನು ಬೇಕಾದರೂ ಮಾತನಾಡಬಹುದು. ಆದರೆ ಚುನಾವಣೆ ಮುಗಿದ ಮೇಲೆ ಜನರ ಅಭಿಮತಕ್ಕೆ ತಲೆ ಬಾಗಲೇಬೇಕು. ಜನರ ತೀರ್ಪನ್ನು ನಾವು ಗೌರವಿಸುತ್ತೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಹಲವು ಯೋಜನೆಗಳ ಹೇಳಿದ್ದೆವು. ಅಧಿಕಾರಕ್ಕೆ ಬಂದರೆ ಇಂಥ ಯೋಜನೆಗಳನ್ನ ಜಾರಿಗೆ ತರುತ್ತೇವೆ ಎಂದು ಹೇಳಿದ್ದೆವು. ಆದರೆ ಅವರು(ಎನ್‌ಡಿಎ) ಚುನಾವಣೆಗೆ ಒಂದು ದಿನ ಮೊದಲು ಪ್ರತಿ ಮಹಿಳೆಗೆ ನೇರವಾಗಿ ಹತ್ತು ಸಾವಿರ ರುಪಾಯಿ ಕೊಟ್ಟರು. ಆ ಮೂಲಕ ನೇರವಾಗಿ ಚುನಾವಣಾ ಭ್ರಷ್ಟಾಚಾರ ಮಾಡಿದರು ಎಂದು ಆರೋಪಿಸಿದರು.

ಇದೊಂದು ಎಲೆಕ್ಟೋರಲ್ ಮಾಲ್ ಪ್ರಾಕ್ಟೀಸ್, ಕರಪ್ಷನ್. ದುಡ್ಡು ಕೊಟ್ಟು ಮತಗಳನ್ನು ಖರೀದಿಸಿದ್ದಾರೆ. 75 ಲಕ್ಷ ಮಹಿಳೆಯರಿಗೆ ತಲಾ 10 ಸಾವಿರ ರು.ನೀಡಿ ರಾಜಕೀಯ ವ್ಯವಸ್ಥೆಯ ಹದಗೆಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಪ್ರಜ್ಞಾವಂತರಾಗಬೇಕು. ಇಲ್ಲದಿದ್ದರೆ ಇಂತಹ ಭ್ರಷ್ಟಾಚಾರಕ್ಕೆ ಜನರು ಬಲಿಯಾಗಬೇಕಾಗುತ್ತದೆ. ನೇರವಾಗಿ ತಲಾ ಹತ್ತು ಸಾವಿರ ಕೊಟ್ಟರೆ ಹೇಗಾಗುತ್ತದೆ. ಜನರ ತೆರಿಗೆ ದುಡ್ಡಿನಲ್ಲಿ ನೇರವಾಗಿ ಖರೀದಿಸಿದ್ದಾರೆ. ಹೀಗಾದರೆ ಚುನಾವಣೆಯನ್ನು ಹೇಗೆ ಎದುರಿಸುವುದು. ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಅತೀ ಹೆಚ್ಚು ಮತ ಹಾಕಿದ್ದಾರೆ ಎಂದರು.

--------------------------------------

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಪೊನ್ನಣ್ಣರ ಅವಹೇಳನಕನ್ನಡಪ್ರಭ ವಾರ್ತೆ ಮಡಿಕೇರಿಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಅವಹೇಳನ ಮಾಡಿರುವ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ.ಬಿಹಾರ ಚುನಾವಣೆಯ ಫಲಿತಾಂಶದ ಕುರಿತು ಪೊನ್ನಣ್ಣ ಅವರು ಮಾಧ್ಯಮಗಳಿಗೆ ನೀಡಿದ್ದ ಅಭಿಪ್ರಾಯಕ್ಕೆ ಪ್ರತಿಯಾಗಿ ಫೇಸ್ ಬುಕ್ ಖಾತೆಯಲ್ಲಿ ಕೆಲವರು ಅವಾಚ್ಯ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಪೊನ್ನಣ್ಣ ಅವರ ಕುಟುಂಬದ ಸದಸ್ಯರನ್ನು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ಘಟಕ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದೆ.ದೂರು ಸಲ್ಲಿಸಿ ಮಾತನಾಡಿದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.ಅವಹೇಳನಕಾರಿ ಶಬ್ಧಗಳನ್ನು ಬಳಸಿ ಶಾಸಕರನ್ನು ತೇಜೋವಧೆ ಮಾಡಿರುವವರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ದೂರು ಸಲ್ಲಿಸುವ ಸಂದರ್ಭ ಶಾಸಕರ ಮಾಧ್ಯಮ ವಿಭಾಗದ ಪೆಮ್ಮಂಡ ವಿನಿಲ್ ಸೋಮಣ್ಣ, ಯುವ ಕಾಂಗ್ರೆಸ್ ಪ್ರಮುಖ ಸಿರಾಜ್ ಚೆರಿಯಪರಂಬು ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ