ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಿಗಬೇಕು: ಪದ್ಮಾವತಿ

KannadaprabhaNewsNetwork | Published : May 17, 2025 1:34 AM
Follow Us

ಸಾರಾಂಶ

ತರೀಕೆರೆ, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಿಗುವಂತಾಗಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಕೆಮ್ಮಣಗುಂಡಿ ಪ್ರವಾಸಿ ತಾಣದಲ್ಲಿ ಕಾರ್ಮಿಕ ದಿನಾಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳು ಸಿಗುವಂತಾಗಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ನಾರಿ ಶಕ್ತಿ ಬಳಗದಿಂದ ಸಮೀಪದ ಕೆಮ್ಮಣ್ಣಗುಂಡಿ ಪ್ರವಾಸಿ ತಾಣದಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ ಕಾರ್ಮಿಕರು ಕೆಲಸ ಮಾಡಿದರೆ ಮಾತ್ರ ನಾವೆಲ್ಲ ಈ ದಿನ ಊಟ ಮಾಡುವುದಕ್ಕೆ ಸಾಧ್ಯ, ಇದರಲ್ಲಿ ಸಂಘಟಿತ ಕಾರ್ಮಿಕರ ವಲಯಕ್ಕೆ ಸರ್ಕಾರದಿಂದ ಯೋಜನೆಗಳು ಸಿಗುತ್ತಿದೆ. ಆದರೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಕೃಷಿ ವಲಯ, ಹೋಟೆಲ್, ಗ್ಯಾರೇಜ್ ನಲ್ಲಿ ಕೆಲಸ ಬಂಡೆ ಮತ್ತು ಕಲ್ಲು ಕೋರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಕಾಫಿ ತೋಟಗಳಲ್ಲಿ ಕೆಲಸ ಮಾಡುವವರಿಗೆ ಸರ್ಕಾರದ ಯೋಜನೆಗಳು ಸಿಗುವಂತಾಗಬೇಕು ಎಂದು ಹೇಳಿದರು.

ಕಾರ್ಮಿಕರ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಅವರ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಬೇಕು ಮತ್ತು ಇಂತಹ ಕಾರ್ಮಿಕರನ್ನು ಗುರುತಿಸಬೇಕು. ಡಾ. ರಾಜಕುಮಾರ್ ಅವರು ಅವರ ಚಲನಚಿತ್ರದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಮತ್ತು ಪಡುವ ಕಷ್ಟಗಳ ಬಗ್ಗೆ ತೋರಿಸಿದ್ದಾರೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಈ ಕಾರ್ಮಿಕರನ್ನು ಮತ್ತು ಕಾರ್ಮಿಕ ಕುಟುಂಬಗಳನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುವಂತದ್ದು ಅವರ ಮೇಲೆ ದಯೆ ಕರುಣೆಯ ಜೊತೆಗೆ ಮಾನವ ಹಕ್ಕುಗಳನ್ನು ಅವರಿಗೆ ಕೊಡುವಂತಾಗಬೇಕು ಅದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಈ ದೇಶ ಕಾಯುವ ನಮ್ಮ ಹೆಮ್ಮೆಯ ಸೈನಿಕರು ಮತ್ತು ಈ ದೇಶದ ಪ್ರತಿಯೊಂದು ವಲಯದಲ್ಲೂ ಕೆಲಸ ಮಾಡುವ ಕಾರ್ಮಿಕರು ಒಂದೇ ಎಂದು ನನ್ನ ಭಾವನೆ. ಈ ಇಬ್ಬರೂ ಅವರವರ ಕೆಲಸ ಮಾಡದೇ ಇದ್ದರೆ ನಾವು ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ ಅದರಿಂದ ನಾವೆಲ್ಲರೂ ಕಾರ್ಮಿಕರ ಬಗ್ಗೆ ಗೌರವ ಅವರ ಕುರಿತು ಒಂದಿಷ್ಟು ಕೆಲಸ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.ನಾರಿಶಕ್ತಿ ಬಳಗದ ಸದಸ್ಯೆ ಸುಧಾ ಶ್ರೀನಿವಾಸ್ ಮಾತನಾಡಿ, ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ನಾರಿ ಶಕ್ತಿ ಬಳಗದಿಂದ ಮಾಡುತ್ತಿರುವುದು ಇದು ಒಂದು ವಿಶೇಷ. ನನ್ನ ಕೈಲಾದ ಸಹಕಾರವನ್ನು ನಾನು ನೀಡುತ್ತೇನೆ. ಇದರ ಜೊತೆಗೆ ಎಲ್ಲೇ ಯಾವುದೇ ವಲಯದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರಲಿ ಅವರಿಗೆ ಗೌರವವನ್ನು ಕೊಡ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. ದೋರನಾಳು ಗ್ರಾಪಂ ಅಧ್ಯಕ್ಷೆ ಶೀಲಾ ಮಾತನಾಡಿ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಗಳನ್ನು ಮಾಡಿಸಿ ಅವರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಫಲಾನುಭವಿಗಳಿಗೆ ಸೌಲಭ್ಯಗಳು ಸಿಕ್ಕರೆ ಅವರ ಕುಟುಂಬ ಸ್ಥಿತಿ ಅಭಿವೃದ್ಧಿಯಾಗುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆತು ಅವರ ಕುಟುಂಬದ ಚಿತ್ರಣವೆ ಬದಲಾಗುತ್ತದೆ ಎಂದು ಹೇಳಿದರು.ಕಾರ್ಮಿಕರ ದಿನಾಚರಣೆ ಪ್ರಯುಕ್ತ ವೇಳ್ಳಿಯಮ್ಮ ಶಿವೀಬಾಯಿ ಮತ್ತು ಪುಟ್ಟಮ್ಮ ಅವರನ್ನು ಸನ್ಮಾನಿಸಲಾಯಿತಚು. ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತಾ, ಉಡೇವಾ ಗ್ರಾಪಂ ಉಪಾಧ್ಯಕ್ಷೆ ಸುಜಿತಾ, ನಾರಿ ಶಕ್ತಿ ಬಳಗದ ಸದಸ್ಯೆ ಜ್ಯೋತಿ, ಪ್ರವಾಸಿ ತಾಣದ ಕಾರ್ಮಿಕರು ಉಪಸ್ಥಿತರಿದ್ದರು. 16ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಕೆಮ್ಮಣಗುಂಡಿ ಪ್ರವಾಸಿ ತಾಣದಲ್ಲಿ ಬಿಜೆಪಿ ನಾರಿ ಶಕ್ತಿ ಬಳಗದಿಂದ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ನಾರಿ ಶಕ್ತಿ ಬಳಗ ಸದಸ್ಯೆ ಸುಧಾ ಶ್ರೀನಿವಾಸ್ ಮತ್ತಿತರರು ಇದ್ದರು.