ಬಾಡಿಗೆ ಆಸೆಗೆ ಸರ್ಕಾರಿ ಶಾಲಾ ಮೈದಾನ ಹಾಳು

KannadaprabhaNewsNetwork |  
Published : Oct 30, 2025, 01:45 AM IST
28ಎಚ್ಎಸ್ಎನ್11 : ಬೇಲೂರು  ಜೂನಿಯರ್ ಕಾಲೇಜು ಮೈದಾನದಲ್ಲಿ  ಏರ್ಪಡಿಸಿದ್ದ  ವಸ್ತು ಪ್ರದರ್ಶನ , ನಂತರ ಪಟಾಕಿ ಅಂಗಡಿಗಳು  ಖಾಲಿ ಆದ ನಂತರ ಗುಂಡಿ ಹಾಗೂ ತ್ಯಾಜ್ಯ ವಸ್ತುಗಳ ತಾಣವಾಗಿದೆ.  | Kannada Prabha

ಸಾರಾಂಶ

ಬೇಲೂರು ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ, ನಂತರ ಪಟಾಕಿ ಅಂಗಡಿಗಾಗಿ ಕಂಬಿ ಹೂಳಲು ಗುಂಡಿ ಮಾಡಿ ಹಾಗೇ ಬಿಟ್ಟಿರುವುದರ ಜೊತೆಗೆ ತ್ಯಾಜ್ಯ ವಸ್ತುಗಳನ್ನು ಅಲ್ಲೆ ಬಿಸಾಡಿ ಹೋಗಿದ್ದಾರೆ. ಪುರಸಭೆಯ ಪೌರ ಕಾರ್ಮಿಕರು ಮೈದಾನವನ್ನು ಸರಿಪಡಿಸಲು ಮಳೆಯ ನಡುವೆ ಕಳೆದ ಮೂರು ದಿನಗಳಿಂದ ಹೆಣಗಾಡುತ್ತಿದ್ದು ಮೈದಾನವನ್ನು ರಕ್ಷಿಸಬೇಕಾದ ಅಧಿಕಾರಿಗಳು ಹಾಳು ಗೆಡವಲು ಮುಂದಾಗುತ್ತಿದ್ದಾರೆ ಎಂದು ಕ್ರೀಡಾಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ, ನಂತರ ಪಟಾಕಿ ಅಂಗಡಿಗಾಗಿ ಕಂಬಿ ಹೂಳಲು ಗುಂಡಿ ಮಾಡಿ ಹಾಗೇ ಬಿಟ್ಟಿರುವುದರ ಜೊತೆಗೆ ತ್ಯಾಜ್ಯ ವಸ್ತುಗಳನ್ನು ಅಲ್ಲೆ ಬಿಸಾಡಿ ಹೋಗಿದ್ದಾರೆ. ಪುರಸಭೆಯ ಪೌರ ಕಾರ್ಮಿಕರು ಮೈದಾನವನ್ನು ಸರಿಪಡಿಸಲು ಮಳೆಯ ನಡುವೆ ಕಳೆದ ಮೂರು ದಿನಗಳಿಂದ ಹೆಣಗಾಡುತ್ತಿದ್ದು ಮೈದಾನವನ್ನು ರಕ್ಷಿಸಬೇಕಾದ ಅಧಿಕಾರಿಗಳು ಹಾಳು ಗೆಡವಲು ಮುಂದಾಗುತ್ತಿದ್ದಾರೆ ಎಂದು ಕ್ರೀಡಾಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.ಹೃದಯ ಭಾಗದಲ್ಲಿರುವ ಮೈದಾನವು ಪಟ್ಟಣದ ಹತ್ತಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಕ್ರೀಡಾಕೂಟ, ರಾಷ್ಟ್ರೀಯ ಹಬ್ಬಗಳು, ಕ್ರೀಡಾ ಚಟುವಟಿಕೆ, ಗಣಪತಿ ಪೆಂಡಾಲ್ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಾಜಕಾರಣಿಗಳ ಬಹಿರಂಗ ಸಭೆ ಸಮಾರಂಭ ನಡೆಸಲು ಬಳಸುವ ಮೈದಾನವಾಗಿದೆ. ಸರ್ಕಾರಿ ಶಾಲಾ ಮೈದಾನವನ್ನು ಕಬಳಿಸಲು ಹತ್ತಾರು ವರ್ಷಗಳಿಂದ ಕಾಣದ ಕೈಗಳು ಪ್ರಯತ್ನ ನಡೆಸುತ್ತಲೇ ಬಂದಿವೆ. ಹಿರಿಯ ವಿದ್ಯಾರ್ಥಿಗಳ ಸಂಘ, ಮತ್ತು ನಾಗರಿಕರು, ಸಂಘಟನೆಗಳು ಶಾಲಾ ಮೈದಾನವನ್ನು ಉಳಿಸುವಂತೆ ಹೋರಾಟ ಮಾಡುತ್ತಾ ಬಂದಿದ್ದಾರೆ. ಶಾಸಕ ಎಚ್ ಕೆ ಸುರೇಶ್ ಅವರ ಶ್ರಮದಿಂದ ಈಗ ಮೈದಾನದ ಸುತ್ತಲೂ ಕಾಂಪೌಂಡನ್ನು ನಿರ್ಮಿಸಲಾಗಿದೆ. ಇಂತಹ ಮೈದಾನವನ್ನು ಅಭಿವದ್ಧಿಪಡಿಸಬೇಕಾದ ಪುರಸಭೆ ಮತ್ತು ಶಿಕ್ಷಣ ಇಲಾಖೆ ಆಡಳಿತವು, ವಸ್ತು ಪ್ರದರ್ಶನಕ್ಕೆ, ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಅವಕಾಶ ನೀಡುತ್ತಿದ್ದಾರೆ. ಇದರಿಂದ ಮೈದಾನದ ಸ್ವಚ್ಛತೆ ಹಾಗೂ ಭದ್ರತೆಗೆ ತೊಡಕಾಗಿದೆ ಎಂದು ಕ್ರೀಡಾಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಬೇಲೂರು ಕ್ರಿಕೆಟ್ ಕ್ಲಬ್‌ನ ಕೋಟೆ ಶ್ರೀನಿವಾಸ್ ಮಾತನಾಡಿ, ಮೂರು ತಿಂಗಳ ಹಿಂದೆ ದುಬೈ ಶಾಪಿಂಗ್ ಬಜಾರ್ಗೆ ಮೈದಾನವನ್ನು ಕೊಡಲಾಗಿತ್ತು. ವಸ್ತು ಪ್ರದರ್ಶನದಲ್ಲಿ ಗ್ರಾಹಕರು ನಡೆದಾಟಕ್ಕೆ ಹಸಿರು ನೆಲಹಾಸು ಹೊದಿಸಲು 200 ಹೆಚ್ಚು ದೊಡ್ಡ ಗಾತ್ರದ ಮೊಳೆಗಳನ್ನು ನೆಲಕ್ಕೆ ಹೊಡೆಯಲಾಗಿತ್ತು. ಬಜಾರ್ ಖಾಲಿ ಮಾಡಿದ ನಂತರ ಮೊಳೆಗಳು ಮೈದಾನದಲ್ಲಿ ಹಾಗೆ ಉಳಿದಿದ್ದು ಕ್ರೀಡಾಪಟುಗಳಿಗೆ, ವಾಕಿಂಗ್ ಮಾಡುವವರಿಗೆ ಹಿಂಸೆ ಆಗಿತ್ತು. ಗಣರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ರೀತಿ ಮೈದಾನವನ್ನು ಬಾಡಿಗೆಗೆ ನೀಡುತ್ತಿದ್ದು ಇದರಿಂದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪೆರೇಡ್ ಮಾಡಲು ತೊಂದರೆ ಆಗುತ್ತಿದೆ. ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳ ಹೊರತಾಗಿ ಇನ್ನಾವುದೇ ವಸ್ತು ಪ್ರದರ್ಶನ , ಬಾಂಬೆ ಬಜಾರ್‌ಗಳಿಗೆ ಅವಕಾಶ ಕೊಡದಂತೆ ತಹಸೀಲ್ದಾರ್ ಗೆ ಮನವಿ ಮಾಡಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು