ಟಿಇಟಿ ರ್‍ಯಾಂಕ್‌ ಶಿಕ್ಷಕರಿದ್ರೂ ಸರ್ಕಾರಿ ಶಾಲೆ ಫಲಿತಾಂಶ ಕಳಪೆ: ಶಾಸಕ ಸಿದ್ದು ಸವದಿ

KannadaprabhaNewsNetwork |  
Published : Nov 19, 2025, 01:45 AM IST
ತೇರದಾಳ ಪಟ್ಟಣದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಉದ್ಘಾಟಿಸುತ್ತಿರುವ ಶ್ರೀಗಳು, ಶಾಸಕ ಸವದಿ ಮತ್ತಿತರ ಗಣ್ಯರು. | Kannada Prabha

ಸಾರಾಂಶ

ತೇರದಾಳ: ಶಾಲೆಗಳು ಸರ್ವ ಜಾತಿ-ಮತಗಳ ಮಕ್ಕಳ ಅದರಲ್ಲೂ ಬದುಕಲು ಹರಸಾಹಸ ಪಡುವ ಬಡವರ್ಗದ ಜನತೆಯ ಮಕ್ಕಳಿಗೆ ಯಾವುದೇ ಡೋನೇಶನ್ ಇಲ್ಲದೆ ಶಿಕ್ಷಣ ನೀಡುವ ಸರಸ್ವತಿ ಮಂದಿರಗಳಾಗಿದ್ದು, ಸರ್ಕಾರಿ ಶಾಲೆಗಳ ಉಳಿವಿಗೆ ಉಳ್ಳವರು ಕಲಿಕೆಗೆ ನೆರವಾಗುವ ವಸ್ತುಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಉಳಿಸಿ ಬೆಳೆಸಬೇಕಿದೆ ಎಂದು ಶಾಸಕ ಸಿದ್ದು ಸವದಿ ಮಾಡಿದರು.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ಶಾಲೆಗಳು ಸರ್ವ ಜಾತಿ-ಮತಗಳ ಮಕ್ಕಳ ಅದರಲ್ಲೂ ಬದುಕಲು ಹರಸಾಹಸ ಪಡುವ ಬಡವರ್ಗದ ಜನತೆಯ ಮಕ್ಕಳಿಗೆ ಯಾವುದೇ ಡೋನೇಶನ್ ಇಲ್ಲದೆ ಶಿಕ್ಷಣ ನೀಡುವ ಸರಸ್ವತಿ ಮಂದಿರಗಳಾಗಿದ್ದು, ಸರ್ಕಾರಿ ಶಾಲೆಗಳ ಉಳಿವಿಗೆ ಉಳ್ಳವರು ಕಲಿಕೆಗೆ ನೆರವಾಗುವ ವಸ್ತುಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಉಳಿಸಿ ಬೆಳೆಸಬೇಕಿದೆ ಎಂದು ಶಾಸಕ ಸಿದ್ದು ಸವದಿ ನಾಗರಿಕರಲ್ಲಿ ಮನವಿ ಮಾಡಿದರು.

ಮಂಗಳವಾರ ತೇರದಾಳ ಪಟ್ಟಣದ ಮರಾಠಿ ಶಾಲೆಯ ಕಟ್ಟಡದಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಉದ್ಘಾಟಿಸಿ ಮಾತನಾಡಿದ ಶಾಸಕ ಸವದಿ, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ ಭಾರತೀಯ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕ ಆಹಾರ ನೀಡುವ ವಿವಿಧ ಹಂತಗಳ ಯೋಜನೆಗಳನ್ನು ರೂಪಿಸಿದ ಬಳಿಕ ಮಕ್ಕಳನ್ನು ಶಾಲೆಗೆ ಕರೆತರುವತ್ತ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಭರಪೂರ ಅನುದಾನವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಿದರೂ ರಾಜ್ಯದಲ್ಲಿ ಯಾಕೆ ಇನ್ನೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ಶಿಕ್ಷಕರು ಆಲೋಚಿಸಬೇಕು. ಖಾಸಗಿ ಶಾಲೆಗಳಲ್ಲಿ ಕಡಿಮೆ ವಿದ್ಯಾರ್ಹತೆಯುಳ್ಳ ಬೋಧಕರು ಪರಿಣಾಮಕಾರಿ ಫಲಿತಾಂಶ ಪಡೆದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಟಿಇಟಿ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಶಿಕ್ಷಕ ವೃತ್ತಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ನಮ್ಮ ಶಿಕ್ಷಕರು ಖಾಸಗಿ ಶಾಲೆಗಳೊಡನೆ ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾಗುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದರು. ಪಟ್ಟಣಕ್ಕೆ ಸರ್ಕಾರಿ ಪಿಯು ಕಾಲೇಜು ಅತ್ಯಗತ್ಯವಾಗಿ ಬೇಕಿದ್ದು, ಈ ಬಗ್ಗೆ ಇಲಾಖೆ ಜಾಗೆ ಗುರುತಿಸಿ ಪ್ರಸ್ತಾವನೆ ತಯಾರಿಸಿದರೆ, ನಾನೂ ಸರ್ಕಾರ ಮಟ್ಟದಲ್ಲಿ ಅನುಮೋದನೆ ಪಡೆಯಲು ತಯಾರಿದ್ದೇನೆ ಎಂದು ಹೇಳಿದರು.

ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಪ್ರಾಸ್ತಾವಿಕ ಮಾತನಾಡಿ, ತೇರದಾಳ ಪಟ್ಟಣಕ್ಕೆ ಪ್ರೌಢಶಾಲೆಯ ಅಗತ್ಯತವಿತ್ತು. ಶಾಸಕರಾದ ಸವದಿ ಹಾಗೂ ಡಾ.ಉಮಾಶ್ರೀ ಅವರ ಸತತ ಪ್ರಯತ್ನದಿಂದ ರಾಜ್ಯದಲ್ಲಿ ಮಂಜೂರಾದ ೭೬ ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ ತೇರದಾಳದ ಪ್ರೌಢಶಾಲೆ ಸೇರಿದೆ. ಸದ್ಯ ೧೦ ಮಕ್ಕಳು ಪ್ರವೇಶ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವೇಶಾತಿ ಹೆಚ್ಚಳಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು..

ಮಲ್ಲಪ್ಪ ಜಮಖಂಡಿ, ಅಪ್ಪು ಮಂಗಸೂಳಿ ಶಾಲೆಗೆ ದಾನವಾಗಿ ಕಂಪ್ಯೂಟರ್ ಮತ್ತು ಪ್ರಿಂಟರ್ ನೀಡಿದರು. ಹಿರೇಮಠದ ಗಂಗಾಧರ ದೇವರು ಸಾನಿಧ್ಯ ವಹಿಸಿದ್ದರು. ಪುರಸಭಾಧ್ಯಕ್ಷೆ ಶಿಲ್ಪಾ ರೋಡಕರ, ಉಪಾಧ್ಯಕ್ಷೆ ನಸ್ರೀನಬಾನು ನಗಾರ್ಜಿ, ಬಿಸಿಯೂಟ ಸಹನಿರ್ದೇಶಕ ಸಿ.ಎಸ್.ಕಲ್ಯಾಣಿ, ಮುಗು ಮೈತ್ರಾದೇವಿ ಜಿಟ್ಟಿ ವೇದಿಕೆಯಲ್ಲಿದ್ದರು.

ಸರ್ಕಾರಿ ಪ್ರೌಢಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಗು ಮೈತ್ರಾದೇವಿ ಜಿಟ್ಟಿ ಸ್ವಾಗತಿಸಿದರು. ಬಿ.ಟಿ. ಪತ್ತಾರ ನಿರೂಪಿಸಿದರು. ಅನಂತರಾಜು ಮುಧೋಳ ವಂದಿಸಿದರು. ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪೂರ, ಬಿ.ಎಂ. ಹಳೇಮನಿ, ಉಪತಹಸೀಲ್ದಾರ ಎಸ್.ಎಲ್. ಕಾಗಿ, ಪ್ರವೀಣ ನಾಡಗೌಡ, ಮಹಾವೀರ ಕೊಕಟನೂರ, ಅಶೋಕ ಆಳಗೊಂಡ, ಸುರೇಶ ರೇಣಕೆ, ನೇಮಣ್ಣ ಸಾವಂತನವರ, ಭುಜಬಲಿ ಕೆಂಗಾಲಿ, ಸಚಿನ್ ಕೊಡತೆ, ಅನಂತರಾಜು ಮುಧೋಳ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್