ಮೂಲ್ಕಿ: ಕಟೀಲು ಮೇಳಗಳು ಗಿನ್ನಿಸ್ ದಾಖಲೆ ಮಾಡುವಷ್ಟು ದೇವಿ ಮಹಾತ್ಮ್ಯೆಯನ್ನು ಪ್ರದರ್ಶಿಸುತ್ತಿದ್ದು ಎಲ್ಲ ಸೇವೆಗಳನ್ನು ನಾವು ಕಟೀಲು ದೇವಸ್ಥಾನಕ್ಕೆ ಬಂದು ಮಾಡಬೇಕು. ಆದರೆ ಯಕ್ಷಗಾನವು ಕಟೀಲಮ್ಮ ಮನೆಗೇ ಬಂದು ಪಡೆಯುವ ಸೇವೆಯಾಗಿದೆ. ಕಲಾವಿದರ ಛಾಯಾಚಿತ್ರಗಳು ವೈವಿಧ್ಯಮಯ ವೇಷಗಳನ್ನು, ಕಾಲಾಂತರದಲ್ಲಿ ಬದಲಾಗುತ್ತ ಬಂದ ಯಕ್ಷಗಾನದ ವೇಷಗಳ ಕುರಿತು ಪರಿಚಯವನ್ನು ಮಾಡಿಕೊಡುತ್ತವೆ ಎಂದು ಉದ್ಯಮಿ ಅಗರಿ ರಾಘವೇಂದ್ರ ರಾವ್ ಹೇಳಿದರು.
ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಈ ಛಾಯಾಚಿತ್ರಗಳು ಅಧ್ಯಯನ ಯೋಗ್ಯವಾಗಿದ್ದು, ಮೇಳಗಳ ದಾಖಲೀಕರಣದ ಹಿನ್ನಲೆಯಲ್ಲಿ ಇನ್ನಷ್ಟು ಫೋಟೋಗಳನ್ನು, ಕರಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಅರ್ಚಕ ಶ್ರೀಕರ ಆಸ್ರಣ್ಣ, ಖ್ಯಾತ ಛಾಯಾಗ್ರಾಹಕ ಮನೋಹರ ಕುಂದರ್, ಪೃಥ್ವೀರಾಜ ಆಚಾರ್ಯ, ಗಣೇಶ ಶೆಟ್ಟಿ ಐಕಳ, ಸಿತ್ಲ ದಿವಾಕರ ರಾವ್, ರಾಮದಾಸ ಕಾಮತ್, ಗಂಗಾಧರ ಸಾಲ್ಯಾನ್, ವೆಂಕಟೇಶ ಉಡುಪ, ನವೀನ್‌ಕುಮಾರ್ ಕಟೀಲ್, ಗಣೇಶ್ ಆಚಾರ್ಯ, ಸೀತಾರಾಮ ಶೆಟ್ಟಿ, ರಾಮಚಂದ್ರ ಮಿಜಾರು, ಅಜಾರು ವಿಜಯ ಶೆಟ್ಟಿ, ಉದಯ ಮೂಲ್ಯ, ವಾಸುದೇವ ನಾಯಕ್, ವರದರಾಯ ಪ್ರಭು, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಮತ್ತಿತರರಿದ್ದರು.