ಹಾರಿ ಹೋದ ಹೆಂಚು..ದುರಸ್ತಿ ಕಾಣದ ಕೊಠಡಿ

KannadaprabhaNewsNetwork |  
Published : May 11, 2026, 01:15 AM IST
ಞ | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳೆಂದರೆ ಈಗಾಗಲೇ ಮೂಗು ಮುರಿಯುವ ವಾತಾವರಣ ರೂಪುಗೊಂಡಿದೆ. ಈ ನಡುವೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವು ಫೋಷಕರನ್ನು ಸರ್ಕಾರಿ ಶಾಲೆಗಳಿಂದ ಮತ್ತಷ್ಟು ವಿಮುಖರಾಗುವಂತೆ ಮಾಡುತ್ತಿದೆ ಎಂಬುದಕ್ಕೆ ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಕೊಠಡಿಗಳ ಸ್ಥಿತಿಯೇ ಉದಾಹರಣೆಯಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮೂಡಿಗೆರೆ

ಸರ್ಕಾರಿ ಶಾಲೆಗಳೆಂದರೆ ಈಗಾಗಲೇ ಮೂಗು ಮುರಿಯುವ ವಾತಾವರಣ ರೂಪುಗೊಂಡಿದೆ. ಈ ನಡುವೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವು ಫೋಷಕರನ್ನು ಸರ್ಕಾರಿ ಶಾಲೆಗಳಿಂದ ಮತ್ತಷ್ಟು ವಿಮುಖರಾಗುವಂತೆ ಮಾಡುತ್ತಿದೆ ಎಂಬುದಕ್ಕೆ ಮೂಡಿಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಕೊಠಡಿಗಳ ಸ್ಥಿತಿಯೇ ಉದಾಹರಣೆಯಾಗಿದೆ.

ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆ ಗಾಳಿಗೆ ಮೂಡಿಗೆರೆ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಕೊಠಡಿಯ ಮೇಲ್ಛಾವಣಿಯು ಹಾರಿ ಹೋಗಿದ್ದವು. ಶಾಲೆಗೆ ಭಾರಿ ಪ್ರಮಾಣದ ಮಳೆ ನೀರು ಸಹ ನುಗ್ಗಿ ದೊಡ್ಡ ಅವಾಂತರ ಸೃಷ್ಟಿಸಿತ್ತು. ಆಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಟ್ಟರೆ, ಇನ್ನಾವುದೇ ಕಾರ್ಯ ಈವರೆಗೆ ಆಗಿಲ್ಲ.

ಬೇಸಿಗೆ ರಜೆ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಆ ಬಳಿಕ ಶಾಲೆ ಪುನರ್ ಆರಂಭಗೊಳ್ಳಬೇಕಿದೆ. ಶಾಲೆಯ ಮೂಲಸೌಕರ್ಯ ದುರಸ್ತಿ ಮಾಡಿಕೊಂಡು ಶಾಲೆ ಆರಂಭದ ವೇಳೆಗೆ ಸಿದ್ದವಾಗಿರುವಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳು ರಜೆಯ ಮೋಜಿನಲ್ಲಿ ಮುಳುಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

400ಕ್ಕೂ ಅಧಿಕ ವಿದ್ಯಾರ್ಥಿಗಳು

ಈ ಕಟ್ಟಡದಲ್ಲಿ ಅಜಾದ್ ಮೌಲಾನಾ ಶಾಲೆಯ 6 ಮತ್ತು 7 ನೇ ತರಗತಿ ನಡೆಯುತ್ತಿದ್ದು, ಈ ಬಾರಿ 8 ನೇ ತರಗತಿ ಸೇರ್ಪಡೆಯಾಗಿದೆ. ಸರ್ಕಾರಿ ಪ್ರೌಢ ಶಾಲೆಯ ತರಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. ಆದರೆ, ಎಲ್ಲಾ ವಿದ್ಯಾರ್ಥಿಗಳಿಗೆ ಬಿಸಿ ಊಟ ಸಿದ್ದವಾಗುವುದು ಮತ್ತು ಸಭಾಂಗಣ ಈ ಹಳೇಯ ಕಟ್ಟಡದಲ್ಲಿಯೇ ಇದೆ. ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಇದ್ದಾರೆ. ಶಾಲೆಯ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರೋಬ್ಬರಿ ಶೇ.95.19 ರಷ್ಟು ಇದೆ. ಆದರೆ, ಮೂಲಸೌಕರ್ಯದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇದೆ ಎಂಬುದು ಸಾರ್ವಜನಿಕರ ದೂರಾಗಿದೆ.

ಮಳೆ ಆರಂಭಗೊಂಡರೆ ಕಾಮಗಾರಿ ಅಸಾಧ್ಯ

ಜೂನ್‌ ವೇಳೆಗೆ ಶಾಲೆಯೊಂದಿಗೆ ಮುಂಗಾರು ಸಹ ಆರಂಭಗೊಳ್ಳಲಿದೆ. ಮಲೆನಾಡು ಭಾಗವಾಗಿರುವುದರಿಂದ ಭಾರೀ ಮಳೆ ಸರಿಯುವ ಸಾಧ್ಯತೆ ಇದೆ. ಅಷ್ಟರಲ್ಲಿ ಕಾಮಗಾರಿ ಮುಗಿಸಬೇಕು. ಇಲ್ಲವಾದರೆ, ಕಾಮಗಾರಿ ನಡೆಸುವುದಕ್ಕೆ ಅಸಾಧ್ಯವಾಗಿದೆ. ಹೆಚ್ಚಿನ ಪ್ರಮಾಣದ ಮಳೆ ಸುರಿದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಹೊಣೆಗಾರರನ್ನು ಮಾಡಬೇಕಾಗಲಿದೆ. ಅಷ್ಟರಲ್ಲಿ ಎಚ್ಚೆತ್ತುಕೊಂಡು ದುರಸ್ತಿ ಮಾಡಿದರೆ ಉತ್ತಮವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

75 ವರ್ಷ ಆಚರಿಸಿಕೊಂಡಿರುವ ಸರ್ಕಾರಿ ಶಾಲೆ

1948ರ ಜೂನ್ 12 ರಂದು ಆರಂಭಗೊಂಡ ಶಾಲೆ ಈಗಾಗಲೇ 75 ವರ್ಷದ ಅಮೃತ ಮಹೋತ್ಸವ ಆಚರಣೆ ಮಾಡಿಕೊಂಡಿದೆ. ಈ ಶಾಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಓದಿ, ಕಲಿತವರಿಂದು ರಾಜಕೀಯ, ಎಂಜಿನಿಯರಿಂಗ್‌, ಡಾಕ್ಟರ್‌, ಸಾಹಿತಿಗಳು, ಉದ್ಯಮಿಗಳು ಸೇರಿದಂತೆ ಸಮಾಜದ ದೊಡ್ಡ-ದೊಡ್ಡ ಸ್ಥಾನದಲ್ಲಿದ್ದಾರೆ. ಆದರೆ, ಈ ಶಾಲೆಯ ಸ್ಥಿತಿ ಮಾತ್ರ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂಬುದೇ ಬೇಸರದ ಸಂಗತಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಃಖದ ಮಡುವಿನಲ್ಲಿ ಮುಳುಗಿದ ಹಿರಿಯೂರು
ಸುಧಾಕರ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ