ಸರ್ಕಾರಿ ಶಾಲೆಗಳ ಉಳಿವಿಗೆ ದಾನಿಗಳ ಸಹಾಯ ಅಗತ್ಯ

KannadaprabhaNewsNetwork |  
Published : Jul 08, 2024, 12:35 AM IST
ಬೆಂಗಳೂರಿನ ಹೆಲ್ಪ್ ಟು ಎಜುಕೇಷನ್ ಫೌಂಡಷನ್ ಸಂಸ್ಥೆಯಿಂದ ಹರಿಹರದ ಜೈಭೀಮನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಕದಸಂಸ ರಾಜ್ಯ ಸಂಚಾಲಕ ಎಚ್.ಮಲ್ಲೇಶ್, ಸಂಸ್ಥೆಯ ದೇವರಾಜ್, ಮೋಹನ್, ಶರಣ ಕುಮಾರ್ ಹೆಗಡೆ, ಪೀರು ನಾಯ್ಕ್, ಚನ್ನಬಸಪ್ಪ ಹಾಗೂ ವಿದ್ಯಾರ್ಥಿಗಳಿದ್ದರು. | Kannada Prabha

ಸಾರಾಂಶ

ಬೆಂಗಳೂರಿನ ಹೆಲ್ಪ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯಿಂದ ತಾಲೂಕಿನ ಕೆಂಚನಹಳ್ಳಿ, ಪಾಮೇನಹಳ್ಳಿ, ಜಿ.ಟಿ.ಕಟ್ಟೆ, ಹರಿಹರದ ಜೈಭೀಮನಗರ, ವಿದ್ಯಾನಗರ ಹಾಗೂ ಅಮರಾವತಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಹರಿಹರ

ಬೆಂಗಳೂರಿನ ಹೆಲ್ಪ್ ಟು ಎಜುಕೇಷನ್ ಫೌಂಡೇಷನ್ ಸಂಸ್ಥೆಯಿಂದ ತಾಲೂಕಿನ ಕೆಂಚನಹಳ್ಳಿ, ಪಾಮೇನಹಳ್ಳಿ, ಜಿ.ಟಿ.ಕಟ್ಟೆ, ಹರಿಹರದ ಜೈಭೀಮನಗರ, ವಿದ್ಯಾನಗರ ಹಾಗೂ ಅಮರಾವತಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಲಾಯಿತು.

ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಚ್. ಮಲ್ಲೆಶ್ ಮಾತನಾಡಿ, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿವುದು ಆತಂಕಕಾರಿ ವಿಷಯ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಶಾಲೆಗಳ ಜೀರ್ಣೋದ್ಧಾರಕ್ಕಾಗಿಯೇ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿ ಮಾಡಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಈ ಪ್ರಯತ್ನದ ಜೊತೆಗೆ ಸಮುದಾಯದ ಪಾಲ್ಗೊಳ್ಳುವಿಕೆಯೂ ಅಗತ್ಯಯವಾಗಿ ಬೇಕಾಗಿದೆ ಎಂದರು.

ಬೆಂಗಳೂರಿನಲ್ಲಿರುವ ದೊಡ್ಡ ಸಂಸ್ಥೆಗಳು ತಮ್ಮ ಲಾಭಾಂಶದಲ್ಲಿ ಕೆಲ ಭಾಗವನ್ನು ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳ ಪಾಠೋಪಕರಣಕ್ಕೆ ವ್ಯಯಿಸುತ್ತಿರುವುದು ಶ್ಲಾಘನೀಯ. ಇದೇ ಮಾದರಿಯಲ್ಲಿ ಇತರೆ ಸಂಸ್ಥೆಗಳು ಕೂಡಾ ಶಾಲೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದರೆ ನಾಡಿನ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತದೆ ಎಂದರು.

ಹೆಲ್ಪ್ ಟು ಎಜುಕೇಷನ್ ಫೌಂಡಷನ್ ಸಂಸ್ಥೆಯ ಸದಸ್ಯ ಮೋಹನ್ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿ ಎಂದು ಭಾವಿಸಿ ಅವರಿಗೆ ಉತ್ತಮ ಶಿಕ್ಷಣ ದೊರಕಿಸಬೇಕೆಂದು ಕರೆ ನೀಡಿದರು. ಹರಿಹರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿದ ಸಂಸ್ಥೆಯ ಮುಖ್ಯಸ್ಥ ವೆಂಕಟೇಶ್‌ ಕಾರ್ಯ ಶ್ಲಾಘನೀಯ. ಬೆಂಗಳೂರಿನಿಂದ ಇಲ್ಲಿಗೆ ಬಂದು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಿರುವುದಕ್ಕೆ ತಾಲೂಕಿನ ಸಮಸ್ತ ಶಿಕ್ಷಕರು ಹಾಗೂ ಪೋಷಕರ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ವೆಂಕಟೇಶ್, ಚನ್ನಬಸಪ್ಪ, ಗಿರಿಜಾಂಬ, ಸತೀಶ್, ನಿಂಗಪ್ಪ, ರಂಗಪ್ಪ, ಶಿವಕುಮಾರ್, ಶಿಕ್ಷಕರಾದ ಪೀರೂನಾಯ್ಕ್, ಪರಶುರಾಮ, ರಾಘವೇಂದ್ರ, ಪ್ರವೀಣ್, ರಾಮನಗೌಡ ಪ್ಯಾಟಿ, ಬಿ.ಎನ್.ವೀರಪ್ಪ, ಶಶಿಕುಮಾರ್, ಗಿರೀಶ್ ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಪೋಷಕರು ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''