- ಸ.ಹಿ.ಪ್ರಾ. ಶಾಲೆ ವತಿಯಿಂದ ಚಿಣ್ಣರ ಚಿಲಿಪಿಲಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
ಎಲ್ಲರ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯ ಚಂದ್ರಶೇಖರ್ ಟಿ.ಆರ್. ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಕ್ಕಮಗಳೂುರು, ತಾಲೂಕು ಪಂಚಾಯಿತಿ, ಪುರಸಭೆ, ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಕುವೆಂಪು ನಗರ, ಗಾಳಿಹಳ್ಳಿ ಕ್ರಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಚಿಲಿಪಿಲಿ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಈ ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಬಹಳ ಉತ್ತಮ ಮತ್ತು ಕ್ರೀಯಾಶೀಲವಾಗಿವೆ. ಹೀಗಾಗಿ ಈ ಶಾಲೆಯಲ್ಲಿ ವರ್ಷ ವರ್ಷಕ್ಕೂ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತಾ ಬರುತ್ತಿದೆ. ಇದಕ್ಕೆ ಪೂರಕವಾಗಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಸಿಬ್ಬಂದಿ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಬಿ.ರಾಮಚಂದ್ರಪ್ಪ ಮಾತನಾಡಿ ಸರ್ಕಾರಿ ಶಾಲೆ ಶೈಕ್ಷಣಿಕ ಪ್ರಗತಿ ಸಾಧಿಸಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ನಾಗರಾಜ್, ಶಾಲೆ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಕಾರ್ಯ ಅತ್ಯಂತ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
ತಾಪಂ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ವಿಶಾಲಾಕ್ಷಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರಣೇಶ್ ದಲಿತ ಸಂಘಟನೆಗಳ ಮುಖಂಡ ಬಾಲರಾಜ್, ದಾನಿ ಟಿ.ಕೆ.ಕುಮಾರ್, ಶಿಕ್ಷಕರ ಸಂಘ ನಿರ್ದೇಶಕ ಮಂಜುನಾಥ್, ಮುಖ್ಯ ಶಿಕ್ಷಕ ತಿಮ್ಮಾರೆಡ್ಡಿ, ಶಿಕ್ಷಕ ನಾಗರಾಜ್, ಶ್ರೀನಿವಾಸ್, ಶಿಕ್ಷಕರು, ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.
8ಕೆಟಿಆರ್.ಕೆ.1ಃ
ಚಿಣ್ಣರ ಚಿಲಿಪಿಲಿ ಮತ್ತು ಪ್ರತಿಭಾ ಪುರಸ್ಕಾರದ ಉದ್ಘಾಟನೆಯನ್ನು ಪುರಸಭೆ ಸದಸ್ಯ ಚಂದ್ರಶೇಖರ್ ಟಿ.ಆರ್. ನೆರವೇರಿಸಿದರು. ಎಸ್.ಡಿಎಂಸಿಅದ್ಯಕ್ಷ ನಾಗರಾಜ್ ಕೆ.ಸ.ನೌ.ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ,ಮುಖ್ಯ ಶಿಕ್ಷಕ ತಿಮ್ಮಾರೆಡ್ಡಿ ಮತ್ತಿತರರು ಇದ್ದರು.