ದೇಗುಲಗಳಂತೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು: ಚಿದಾನಂದ ಎಂ ಗೌಡ

KannadaprabhaNewsNetwork |  
Published : Feb 05, 2024, 01:52 AM IST
3ಶಿರಾ1: ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಉದ್ಘಾಟಿಸಿದರು. ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಶಾಲೆಗಳು ಜ್ಞಾನ ದೇಗುಲಗಳಿದ್ದಂತೆ ದೇವಸ್ಥಾನಗಳಂತೆಯೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ ಎಂಬ ಉದ್ದೇಶದಿಂದ ಪ್ರತಿ ವರ್ಷ ನನ್ನ ಹುಟ್ಟು ಹಬ್ಬದಂದು ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಹೈಟೆಕ್ ಮಾದರಿಯಲ್ಲಿ ನಿರ್ಮಿಸುತ್ತಿದ್ದೇನೆ. ಇದರಿಂದ ನನಗೆ ಹುಟ್ಟುಹಬ್ಬದ ಸಾರ್ಥಕತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಶಾಲೆಗಳು ಜ್ಞಾನ ದೇಗುಲಗಳಿದ್ದಂತೆ ದೇವಸ್ಥಾನಗಳಂತೆಯೇ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ ಎಂಬ ಉದ್ದೇಶದಿಂದ ಪ್ರತಿ ವರ್ಷ ನನ್ನ ಹುಟ್ಟು ಹಬ್ಬದಂದು ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಹೈಟೆಕ್ ಮಾದರಿಯಲ್ಲಿ ನಿರ್ಮಿಸುತ್ತಿದ್ದೇನೆ. ಇದರಿಂದ ನನಗೆ ಹುಟ್ಟುಹಬ್ಬದ ಸಾರ್ಥಕತೆ ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಶನಿವಾರ ತಾಲೂಕಿನ ಬರಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ದತ್ತು ಪಡೆದು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನೆಲಮಹಡಿ ಹಾಗೂ ತಮ್ಮ ವೈಯ್ಯಕ್ತಿಕ ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಮೊದಲನೇ ಮಹಡಿ ಒಟ್ಟು ೧೪ ಕೊಠಡಿಗಳ ನೂತನ ಹೈಟೆಕ್ ಶಾಲಾ ಕಟ್ಟಡಗಳ ಲೋಕರ್ಪಾಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ೨೦೨೩ನೇ ವರ್ಷದ ಹುಟ್ಟು ಹಬ್ಬದ ಅಂಗವಾಡಿ ಶಿರಾ ನಗರದ ಐತಿಹಾಸಿಕ ಸರಕಾರಿ ಪ್ರೌಢಶಾಲೆಯನ್ನು ಸುಮಾರು ೫ ಕೋಟಿ ವೆಚ್ಚದಲ್ಲಿ ನೂತನ ಹೈಟೆಕ್ ಶಾಲಾ ಕಟ್ಟಡಗಳನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದೆ. ಈ ವರ್ಷ ನಾನು ವಿದ್ಯಾಭ್ಯಾಸ ಮಾಡಿದ ಬರಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೧೪ ಕೊಠಡಿಗಳ ನೂತನ ಹೈಟೆಕ್ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದು ಹಳೆ ಶಾಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಬರಗೂರು ಸರ್ಕಾರಿ ಶಾಲೆಯನ್ನು ಮಾದರಿ ಹೈಟೆಕ್ ಶಾಲೆಯನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ನೂತನ ಶಾಲೆಯನ್ನು ನಿರ್ಮಾಣ ಮಾಡಿ ಉದ್ಘಾಟಿಸಿದ್ದೇನೆ ಎಂದರು.

ರಾಜ್ಯ ಸರ್ಕಾರಿದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ಬರಗೂರಿನ ಸರ್ಕಾರಿ ಶಾಲೆಗೆ ಚಿದಾನಂದ್ ಗೌಡ ಅವರು ಉತ್ತಮವಾದ ರೂಪನೀಡಿ ಗುಣ ಮಟ್ಟದ ಕಟ್ಟಡ ನಿರ್ಮಿಸಿರುವುದು ಮಾದರಿಯಾಗಿದೆ. ಬಡಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬುದೇ ನನ್ನ ಕನಸಾಗಿದ್ದು ಶಿರಾ ನಗರದ ಹೊರವಲಯದಲ್ಲಿ ಸುಮಾರು ೯ ಮೊರಾರ್ಜಿ ವಸತಿ ಶಾಲೆಗಳನ್ನು ಸ್ಥಾಪಿಸಿದ್ದು ಇದರಲ್ಲಿ ಸುಮಾರು ೨೫೦೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ತಹಸೀಲ್ದಾರ್‌ ಡಾ. ದತ್ತಾತ್ರೇಯ, ಬಿಇಒ ಕೃಷ್ಣಪ್ಪ, ತಾ.ಪಂ. ಇಒ ಅನಂತರಾಜು, ಪಿಡಿಒ ಶಿವರಾಮಯ್ಯ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್‌.ಗೌಡ, ಮೂರ್ತಿ ಮಾಸ್ಟರ್, ಗ್ರಾ.ಪಂ. ಅಧ್ಯಕ್ಷೆ ಮಂಜುಳ ಭೀಮಣ್ಣ, ಉಪಾಧ್ಯಕ್ಷೆ ಅರುಣ ಗೌರೀಶ್, ಮುಖ್ಯ ಶಿಕ್ಷಕಿಯರಾದ ಗೌರಮ್ಮ, ಡಿ. ಮಾಲತಿ, ಯೋಜನಾ ನಿರ್ದೇಶಕ ರಾಜಶೇಖರ್‌, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ನಟರಾಜ್, ಪ್ರೌಢಶಾಲಾ ಅಧ್ಯಕ್ಷೆ ಸವಿತಾ, ಬರಗೂರು ಶಿವಕುಮಾರ್‌, ಎಂಜನಿಯರ್‌ ಸುಬ್ರಮಣ್ಯಸ್ವಾಮಿ, ಪರಮೇಶ್ ಗೌಡ, ಬಹ ಓಂಕಾರ್, ಕುಮಾರ್‌, ಬರಗೂರು ಗ್ರಾಮ ಪಂಚಾಯಿತಿ ಸದಸ್ಯರು ಶಾಲಾ ಅಭಿವೃದ್ದಿ ಸದಸ್ಯರು ಪೂಷಕರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ