ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಿಯ ಜ್ಞಾನಗಂಗೆಯಲ್ಲಿ ಭಾನುವಾರ ನಡೆದ ಚೊಚ್ಚಿಲ ಗಜಲ್ ಸಮ್ಮಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ಹಿಂದೆ ರಾಜರಿದ್ದರು, ಇಂದು ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಸರಕಾರಗಳು ಪ್ರೋತ್ಸಾಹ ನೀಡಬೇಕು. ಹಾಗಾದಾಗ ಮಾತ್ರ ಕನ್ನಡ ಸಾಹಿತ್ಯ, ಅದರಲ್ಲೂ ಗಜಲ್ ಸಾಹಿತ್ಯ ಉನ್ನತಕ್ಕೇರಲು ಸಾಧ್ಯವೆಂದರು.ಸರಕಾರದ ಸಂಸ್ಥೆಗಳಾದ ಕನ್ನಡ ಸಾಹಿತ್ಯ ಅಕಾಡೆಮಿ, ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ ಸೇರಿದಂತೆ ಅನೇಕ ಕನ್ನಡಪರ ಕೆಲಸ ಮಾಡುವ ಸಂಸ್ಥೆ, ಇಲಾಖೆಗಳು ಗಟ್ಟಿಯಾಗಿ ನಿಂತು ಕನ್ನಡ ಗಜಲ್ ಸಾಹಿತ್ಯ ಬೆಳೆಯಲು ಪ್ರೋತ್ಸಾಹಿಸಬೇಕು. ವಿವಿಗಳು ಗಜಲ್ ಸಾಹಿತ್ಯ ಪಠ್ಯದಲ್ಲಿ ಸೇರಿಸಬೇಕು.
ರಾಜ್ಯ ಮಟ್ಟದಲ್ಲಾದಂತೆ ಜಿಲ್ಲೆ, ತಾಲೂಕು, ಹೋಬಳಿ ಹಂತಗಳಲ್ಲೂ ಗಜಲ್ ಸಾಹಿತ್ಯ ಸಮ್ಮೇಳನಗಳು ನಡೆಯಲಿ, ಗಜರ್ ರಚನೆ ಕಮ್ಟಗಳು ಆಗಲಿ, ಕಸಾಪದಂತಹ ಸಂಸ್ಥೆಗಳು ಗಜಲ್ ರಚನೆ ಮಬಗ್ಗೆ ತರಬೇತಿ ತರಗತಿ ನಡೆಸಲಿ. ಗಜಲ್ ಗೋಷ್ಠಿ, ಮುಶಾಯರಾಗಳನ್ನು ಸರಕಾರವೇ ಮುಂದೆಗಿ ಆಯೋಜಿಸಲಿ ಎಂದು ಆಗ್ರಹಿಸಿದರು.
ದಜಲ್ ರಚನೆಯಲ್ಲಿ ಕವಿಗಳು ಆಯ್ಕೆ ಮಾಡುವ ರದೀಫ್, ಕಾಫಿಯಾ ಓದುಗರನ್ನು ಸೆಳೆಬೇಕು, ಬಳಸಿ ಸವಕಾಲದ ರದೀಫ್‌ಗಳನ್ನೇ ಹೆಚ್ಚು ಬಳಸೋದು ಸರಿಯಲ್ಲ, ಹೊಸತನದಲ್ಲಿ ಗಜಲ್ ಇರುವಂತೆ ನೋಡಿಕೊಂಡಾಗ ಜನಮನ ಸೆಳೆಯುತ್ತದೆ ಎಂದರು.
ಮನಬಂದಂತೆ ಬರೆಯಲು ಗಜಲ್ ಮುಕ್ತ ಛಂದಸ್ಸಿನ ಭಾವಗೀತೆ ಅಲ್ಲ, ಗಜಲ್‌ಗೆ ಗೇ ತನ್ನದೇ ನಿಯಮಗಳಿವೆ. ಛಂದಸ್ಸೂ ಕೂಡಾ ಇದೆ. ಹಲವಾರು ಪ್ರಕಾರದ ವೃತ್ತಗಳೂ ಇವೆ. ಅವುಗಳನ್ನೆಲ್ಲ ಕನ್ನಡ ಗಜಲ್‌ಕಾರರು ಗಮನಿಸಬೇಕು. ಗಜಲ್ ಒಂದು ಹಾಡುಗಬ್ಬ, ಹಾಡಲು ಬರಬೇಕೆಂದರೆ ಗಜಲ್ ಛಂದಸ್ಸು, ವೃತ್ತದಲ್ಲಿರಬೇಕೆಂದು ಗಜಲ್ ಲಕ್ಷಣಗಳು ಹೇಳಿದರು.
ಕರ್ನಾಟಕ ಗಜಲ್ ಅಕಾಡೆಮಿ ವತಿಯಿಂದ ಗುವಿವಿ ಸಹಕಾರದೊಂದಿಗೆ ನಡೆದ ಒಂದು ದಿನದ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದಲ್ಲಿ ಹಲವು ಗೋಷ್ಠಿಗಳು ನಡೆದವು.
ವಿಜಯಪುರದ ಕವಯಿತ್ರಿ, ಒಂಬತ್ತು ಗಜಲ್ ಸಂಕಲನ ಸೇರಿ 23 ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ಗಜಲಕಾರ್ತಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದು ಔಚಿತ್ಯ ಪೂರ್ಣವಾಗಿತ್ತು.
ಗಮನ ಸಳೆದ ಗೋಷ್ಠಿಗಳು
ಸಮ್ಮೇಳನಾಧ್ಯಕ್ಷರ ಬದುಕು-ಬರಹ’ ಮೊದಲ ಗೋಷ್ಠಿಗೆ ಬೆಂಗಳೂರಿನ ಗಜಲಕಾರ ಸಂಗಮೇಶ್ ಬಾದವಾಡಗಿ ಚಾಲನೆ ನೀಡಿದರು ಬಳ್ಳಾರಿಯ ಗಜಲಕಾರ ಸಿಕಂದರ್ ಅಲಿ, ಯುವ ಗಜಲಕಾರ ನಂರುಶಿ ಕಡೂರು ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡಿದರು.ಗಜಲ್ ಹೆಜ್ಜೆ ಗುರುತು ಕುರಿತು ಎರಡನೇ ಗೋಷ್ಟಿಯಲ್ಲಿ ಮಂಗಳೂರಿನ ಗಜಲಕಾರ ಡಾ. ಸುರೇಶ್ ನೆಗಳಗುಳಿ, ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಹಾಜರಿದ್ದು , ಸವದತ್ತಿಯ ವಿಮರ್ಶಕ ಡಾ. ಎಂ.ವೈ. ಯಾಕೋಳ್ಳಿ- ಗಜಲ್ ಆಕೃತಿ ಮತ್ತು ಆಶಯ, ಅಂಕೋಲಾ ಗಜಲ್ ಕವಯಿತ್ರಿಶ್ರೀದೇವಿ ಕೆರೆಮನೆ- ಕನ್ನಡ ಸಾಹಿತ್ಯದಲ್ಲಿಗಜಲ್’ ಹಾಗೂ ಕೊಪ್ಪಳದ ಕವಯಿತ್ರಿ ಅರುಣಾ ನರೇಂದ್ರ – ಕಲ್ಯಾಣ ಕರ್ನಾಟಕ ನೆಲದಲ್ಲಿ ಗಜಲ್’ ಕುರಿತು ಉಪನ್ಯಾಸಗಳನ್ನು ಆಲಿಸಿ ಚರ್ಚೆಗೆ ಮುನ್ನುಡಿ ಬರೆದರು.
2 ಗಜಲ್ ವಾಚನ ಗೋಷ್ಠಗಳು ನೆದವು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್, ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ್ ಇದ್ದ ಗೋಷ್ಠಿಯಲ್ಲಿ ಅನೇಕ ಗಜಲಕಾರರು ಭಾಗವಹಿಸಿದ್ದರು. ನನ್ನ ಕವಿತೆ- ಜುಗಲ್‍ಬಂದಿ’ ನಡೆಯಿತು.ಹಿರಿಯ ಗಜಲಕಾರ ಡಾ. ಕಾಶಿನಾಥ ಅಂಬಲಗೆ, ಹುಬ್ಬಳ್ಳಿಯ ಗಜಲ್ ಕವಯಿತ್ರಿ ಡಾ. ರೇಣುಕಾತಾಯಿ ಸಂತಬಾ ಸೇರಿದಂತೆ 45 ಜನ ಗಜಲಕಾರರು ಗಜಲ್ ವಾಚಿಸಿದರು.
ಸಮಾರೋಪದಲ್ಲಿ ಮೆಚ್ಚುಗೆ ಮಾತುಸಮಾರೋಪ ಸಮಾರಂಭದಲ್ಲಿ ಗುಲ್ಬರ್ಗಾ ವಿ.ವಿ ಉರ್ದು-ಪರ್ಶಿಯನ್ ವಿಭಾಗ ಮುಖ್ಯಸ್ಥ ಅಬ್ದುಲ್ ರಬ್ ಉಸ್ತಾದ್ ಸಮಾರೋಪ ನುಡಿಗಳನ್ನಾಡಿ ಸಮ್ಮೇಳನ ಯಶಸ್ಸಿಗೆ ಮೆಚ್ಚುಗೆ ಮಾತನ್ನಾಡಿದರು. ಅಧ್ಯಕ್ಷೆ ಪ್ರಭಾವತಿ ಎಸ್.ದೇಸಾಯಿ, ಗುವಿವಿ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಗಜಲಕಾರ ಬೋಡೆ ರಿಯಾಜ್ ಅಹ್ಮದ್ , ರಾಯಚೂರಿನ ಗಜಲಕಾರ ಮಂಡಲಗಿರಿ ಪ್ರಸನ್ನ ಇದ್ದರು.