ಪತ್ರಕರ್ತರಿಗೆ ಸರ್ಕಾರ ಸೌಲಭ್ಯ ನೀಡಲಿ

KannadaprabhaNewsNetwork |  
Published : Nov 22, 2025, 01:45 AM IST
ಸರ್ಕಾರದ ನಾಲ್ಕನೇ ಅಂಗವಾದ ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ | Kannada Prabha

ಸಾರಾಂಶ

ಸಮಾಜದ ಬಗ್ಗೆ ಸದಾ ಕಾಳಜಿವಹಿಸುವ ಪತ್ರಕರ್ತರಿಗೆ ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಸಮಾಜದ ಬಗ್ಗೆ ಸದಾ ಕಾಳಜಿವಹಿಸುವ ಪತ್ರಕರ್ತರಿಗೆ ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಸಿದ್ದರಬೆಟ್ಟದ ರಂಭಾಪುರಿ ಖಾಸಾಶಾಖಾ ಮಠದಲ್ಲಿ ಆಯೋಜನೆ ಮಾಡಲಾಗಿದ್ದ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಪತ್ರಕರ್ತರು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ನ್ಯಾಯಾಂಗ ಶಾಸಕಾಂಗ ಕಾಯಾಂಗ ಈ ಮೂರು ಅಂಗಗಳಿಗೆ ವಿಶೇಷಸ್ಥಾನಮಾನವನ್ನು ಕೊಟ್ಟಿರುವ ಸರ್ಕಾರ ಹೆಸರಿಗಷ್ಟೇ ಸೀಮಿತವಾದ ಸರ್ಕಾರದ ೪ನೇ ಅಂಗ ಪತ್ರಿಕಾರಂಗಕ್ಕೆ ಯಾವುದೇ ಸವಲತ್ತುಗಳನ್ನು ನೀಡದೆ ಇರುವುದರಿಂದ ಸಾಕಷ್ಟು ಸಮಸ್ಯೆಗಳಲ್ಲಿ ಅವರು ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇತ್ತ ಗಮನ ಆರಿಸಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ನೀಡಬೇಕಾದ ಸೌಕರ್ಯಗಳನ್ನು ಇಡಬೇಕು ಎಂದರು.

ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್‌ ಮಾತನಾಡಿ, ರಾಜ್ಯದ ಮೂರುವರೆ ಕೋಟಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪಯಣ ಮಾಡಬಹುದಾಗಿದೆ. ಆದರೆ ರಾಜ್ಯದಲ್ಲಿರುವ ೮ ರಿಂದ ೯ ಸಾವಿರ ಪತ್ರಕರ್ತರಿಗೆ ನೂರೆಂಟು ರೂಲ್ಸ್ ಗಳನ್ನ ಹಾಕಿದ್ದಾರೆ ಜಿಲ್ಲಾ ಭಾಗದ ಪತ್ರಕರ್ತರಿಗೆ ಸಣ್ಣ ಪುಟ್ಟ ಸಹಾಯ ಆಗುತ್ತಿದೆ. ಸರ್ಕಾರದಿಂದ ಆದರೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಯಾವುದೇ ಒಂದು ಸಣ್ಣ ಪ್ರಯೋಜನವು ಸರ್ಕಾರದವತಿಯಿಂದ ಆಗುತ್ತಿಲ್ಲ ಎಂದು ದೂರಿದರು.

ಹಿರಿಯ ಪತ್ರಕರ್ತ ಪದ್ಮರಾಜು ಮಾತನಾಡಿ ಪತ್ರಕರ್ತರ ಸಮಸ್ಯೆಗಳನ್ನು ಬಿಚ್ಚಿಟ್ಟರು. ಈ ವೇಳೆ ಕೆ.ವಿ ಪುರುಷೋತ್ತಮ್, ಯಶಸ್‌, ರಂಗಧಾಮಯ್ಯ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಸತೀಶ್, ಬಾಬುನಾಯಕ್, ಹಿರಿಯ ಪತ್ರಕರ್ತ ಸಾಹಿತಿ ಹನುಮಂತರಾಯಪ್ಪ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಕೊರಟಗೆರೆ ತಾಲೂಕು ಪತ್ರಕರ್ತರ ಸಂಘದ ಹಿರಿಯರಾದ ಪದ್ಮರಾಜ್, ಪದ್ಮನಾಭ, ಚಿದಂಬರ್, ಶಿವಾನಂದ್, ಎಚ್.ಎನ್.ನಾಗರಾಜು, ವಿಕೆ ಮೂರ್ತಿ, ರಾಘವೇಂದ್ರ, ಲೋಕೇಶ್, ನವೀನ್, ಮಂಜುನಾಥ್, ಮಂಜುಸ್ವಾಮಿ, ವಿಜಯಶಂಕರ್, ಲಕ್ಷ್ಮೀಶ್, ಲಕ್ಷ್ಮಿಕಾಂತ್, ಮುತ್ತರಾಜು, ಹರೀಶ್‌ಬಾಬು, ನಾಗೇಂದ್ರ, ತಿಮ್ಮಯ್ಯ ಆಟೋಮೂರ್ತಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ