)
ಕನ್ನಡಪ್ರಭ ವಾರ್ತೆ ಕೋಲಾರನಗರದ ಹೊರವಲಯದ ಎ.ಪಿ.ಎಂ.ಸಿ. ಯಾರ್ಡ್ ವಿಸ್ತರಣೆಗೆ ಸರ್ಕಾರವು ಕನಿಷ್ಠ ೧೦೦ ಎಕರೆ ಜಾಗವನ್ನು ಮಂಜೂರು ಮಾಡಿದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯಾಗಲಿದೆ. ಇದರಿಂದ ರೈತರಿಗೆ ಗಡಿಭಾಗದ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಅಭಿವೃದ್ದಿ ಹೊಂದಲು ಅನುಕೂಲವಾಗಲಿದೆ ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ವಿಧಾನಪರಿಷತ್‌ನಲ್ಲಿ ಹೇಳಿದರು.
ಆದರೆ ಪ್ರತಿದಿನ ಕನಿಷ್ಟ ೩ ಲಕ್ಷ ಕ್ರೇಟ್ ಟೊಮೆಟೋ ವಿಲೇವಾರಿ ಮಾಡಬೇಕಾಗಿದೆ. ೧೫೦೦ ವಾಹನಗಳು ಟಮ್ಯಾಟೂ ಸಾಗಣೆ ಮಾಡಲು ಬಂದು ಹೋಗುವುದು ಸುಮಾರು ೫ ಸಾವಿರ ಜನರ ಸಂಚಾರ ಇರುತ್ತದೆ. ಹಾಗಾಗಿ ಎ.ಪಿ.ಎಂ.ಸಿ. ಮಾರುಕಟ್ಟೆಯು ಕಿಷ್ಕಿಂದೆಯ ಮಾದರಿಯಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ ಎಂದರು.
ಟೊಮೆಟೋ ಸೀಸನ್‌ನಲ್ಲಿ ತೊಂದರೆಟೊಮೆಟೋ ಸೀಸನ್‌ನಲ್ಲಿ ರಸ್ತೆಗಳಲ್ಲಿ ಟೊಮೆಟೋ ಕ್ರೇಟ್, ವಾಹನಗಳನ್ನು ನಿಲ್ಲಿಸಿಕೊಂಡು ಲೋಡ್-ಆನ್ ಲೋಡ್ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಟಮ್ಯಾಟೋ ಲೋಡ್ ಮಾಡಲು ಕಷ್ಟಕರ, ಬಿಸಿಲುಗಾಲದಲ್ಲಿ ಬಿಸಿಯ ಹಭೆ ತಾಳಲಾಗದಷ್ಟು ಸಂಕಷ್ಟ ಎದುರಿಸ ಬೇಕಾಗಿದೆ. ದಿನ ನಿತ್ಯ ನೊರಾರು ಟೆಂಪೋಗಳಲ್ಲಿ ಟೊಮೆಟೋ ಬೆಲೆ ಏರಿಕೆ ಇರಲಿ ಕಡಿಮೆ ಇರಲಿ ದಿನನಿತ್ಯ ಹೊರರಾಜ್ಯಗಳಿಗೆ ಟೊಮೆಟೋ ಕಳುಹಿಸಲೇ ಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದು ವಿವರಿಸಿದರು.
ಕೋಲಾರ ಎ.ಪಿ.ಎಂ.ಸಿ. ಮಾರುಕಟ್ಟೆ ಜಾಗವು ಸಾಲದಾಗಿದೆ ಸ್ಥಳದ ಆಭಾವ ಹೊಂದಿರುವ ರೈತರು ಎ.ಪಿ.ಎಂ.ಸಿ. ಅಕ್ಕ ಪಕ್ಕದ ಜಮೀನುಗಳನ್ನು ಬಾಡಿಗೆಗೆ ಪಡೆದುಕೊಂಡು ಟೊಮೆಟೋ ವಹಿವಾಟು ನಡೆಸುತ್ತಿದ್ದಾರೆ. ಸರ್ಕಾರವು ಕೂಡಲೇ ವಿಶೇಷ ಗಮನ ಹರಿಸಿ ಕೋಲಾರದ ರೈತರಿಗೆ ಅನುವು ಮಾಡಿಕೊಡಲು ಎ.ಪಿ.ಎಂ.ಸಿ. ಸ್ಥಳಾಂತರಕ್ಕೆ ಅನುವು ಮಾಡಿ ಕೊಡಬೇಕೆಂದು ಆಗ್ರಹಿಸಿದರು.