ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ನಗರವನ್ನು ಸುಂದರ ಮತ್ತು ಸ್ವಚ್ಛ ಶಿಸ್ತಿನ ನಗರವನ್ನಾಗಿ ರೂಪಿಸಲು ಜಿಲ್ಲಾಡಳಿತ, ನಗರಸಭೆಯ ಜೊತೆಗೆ ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಸೇರಿದಂತೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದರು.ನಗರದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಕೋಲಾರ ನಗರವನ್ನು ಪ್ರತಿಷ್ಠಿತ ಉದ್ದಿಮೆದಾರರು, ಬೃಹತ್ ವ್ಯಾಪಾರಿಗಳು, ಹಿರಿಯ ಗಣ್ಯರ ಸಹಭಾಗಿತ್ವದಲ್ಲಿ ಕೋಲಾರ ನಗರದ ಪ್ರಮುಖ ವೃತ್ತಗಳು ಹಾಗೂ ಉದ್ಯಾನವನಗಳನ್ನು ವಿವಿಧ ಹಂತದಲ್ಲಿ ಅಭಿವೃದ್ಧಿ ಪಡಿಸುವ ಕುರಿತ ಸಭೆಯಲ್ಲಿ ಮಾತನಾಡಿದರು.ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆನಗರದ ರಸ್ತೆಗಳು, ಪಾದಚಾರಿ ಮಾರ್ಗ, ಶೌಚಾಲಯ, ಟ್ರಾಫಿಕ್ ನಿಯಂತ್ರಣ ಹಾಗೂ ಸೂಚನಾ ಫಲಕಗಳ ಕೊರತೆಯಿಂದ ನಾಗರಿಕರು ದಿನನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದ ಬೇರೆ ನಗರಗಳು ವೇಗವಾಗಿ ಬೆಳೆಯುತ್ತಿರುವಾಗ, ಬೆಂಗಳೂರಿಗೆ ಹತ್ತಿರವಿದ್ದರೂ ಕೋಲಾರ ಆಭಿವೃಧ್ಧಿ ವಿಚಾರದಲ್ಲಿ ಹಿಂದುಳಿದಿದೆ. ಈ ಪರಿಸ್ಥಿತಿ ಬದಲಿಸಲು ಜಿಲ್ಲಾಡಳಿತ ಮತ್ತು ಸಾರ್ವಜನಿಕರ ಸಂಯುಕ್ತ ಪ್ರಯತ್ನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಮಕ್ಕಳು ಸುರಕ್ಷಿತವಾಗಿ ಓಡಾಡುವ ರಸ್ತೆ, ಹಿರಿಯರು ವಿಶ್ರಾಂತಿ ಪಡೆಯುವ ಪಾರ್ಕ್, ಕುಟುಂಬಗಳಿಗೆ ಸಮಯ ಕಳೆಯಲು ಸಾರ್ವಜನಿಕ ಸ್ಥಳಗಳು ದೊರಕುವಂತೆ ಕೋಲಾರವನ್ನು ‘ಲವಬಲ್ ಮತ್ತು ಲಿವಬಲ್ ಸಿಟಿ’ಯಾಗಿ ರೂಪಿಸುವುದು ಮುಖ್ಯ ಗುರಿ. ಮನೆಯಲ್ಲಿ ಇರುವ ಶಿಸ್ತು ಮತ್ತು ಸ್ವಚ್ಛತೆ ನಗರದಲ್ಲೂ ಇರಬೇಕು, ನಗರ ನಮ್ಮ ಮನೆ ಎಂಬ ಭಾವನೆ ಬೆಳೆಸಿದರೆ ಸಮಸ್ಯೆಗಳ ಬಹುಪಾಲು ಸ್ವಯಂ ನಿವಾರಣೆಯಾಗುತ್ತವೆ ಎಂದರು.ಸರ್ಕಲ್‌ಗಳ ಅಭಿವೃದ್ಧಿಗೆ ಯೋಜನೆ
ಕಣ್ಣೂರು ಕೆರೆ ಅಭಿವೃದ್ಧಿಗೆ ₹4 ಕೋಟಿಕೋಲಾರ ನಗರಾಭಿವೃದ್ಧಿ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ಕೋಲಾರದಲ್ಲಿನ ಶ್ರೀನಿವಾಸಪುರ ವೃತ್ತ, ಮಾಲೂರು ವೃತ್ತ, ಕ್ಲಾಕ್ ಟವರ್ ವೃತ್ತಗಳು ಸೇರಿದಂತೆ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಕುರಿತು ಪ್ರಾಧಿಕಾರದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕಣ್ಣೂರು ಕೆರೆಯ ಸಮಗ್ರ ಅಭಿವೃದ್ಧಿಗೆ ನಾಲ್ಕು ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದರು.ಸಭೆಯಲ್ಲಿ ಎಡಿಸಿ ಮಂಗಳ, ನಗರಸಭೆ ಆಯುಕ್ತ ನವೀನ್ ಚಂದ್ರ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜೋಶಿ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಕೆ.ವಿ.ಶಂಕರಪ್ಪ, ನಗರಸಭೆ ಮಂಜುನಾಥ್, ರೋಟರಿ ರಮೇಶ್, ಹೋಟಲ್ ಮಾಲೀಕರ ಸಂಘದ ಅಧ್ಯಕ್ಷ ನಾಗರಾಜ್, ರೆಡ್ ಕ್ರಾಸ್ ಸಂಸ್ಥೆಯ ಗೋಪಾಲ ಕೃಷ್ಣ ಇದ್ದರು.