ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಮೂಲ ಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಿದ್ದ ಶಿವಶರಣ ಒಕ್ಕಲಿಗ ಮುದ್ದಣ್ಣ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ದುಡಿಯುವ ವರ್ಗಕ್ಕೆ ತಾರತಮ್ಯ, ನಿರ್ಲಕ್ಷ್ಯ, ಕೀಳಾಗಿ ಕಾಣುವ ಪ್ರವೃತ್ತಿ ತೊಲಗದೇ ಹೋದಲ್ಲಿ ಶರಣರು ಕಂಡ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಆಳ್ದರಸನಿಂದ ಆಳಿನವರೆಗೂ, ಗುರುವಿನಿಂದ ಶಿಷ್ಯನವರೆಗೂ ಒಟ್ಟಾರೆಯಾಗಿ ಕಾಯಕದಿಂದಲೇ ತಮ್ಮನ್ನ ಗುರುತಿಸಿಕೊಳ್ಳುವ ಪರಿಪಾಠವಿತ್ತು. ಎಲ್ಲಾ ವರ್ಗದವರು ಕಾಯಕದ ಮೂಲಕ ಸಮಾನತೆಯನ್ನು ಕಂಡುಕೊಂಡಿದ್ದರು ಆದರೆ ಈಗ ಅಂದಿನ ಎಲ್ಲ ವೃತ್ತಿ ಸೂಚಕ ಕಾಯಕ ಶಬ್ದಗಳೆಲ್ಲ ಜಾತಿಯಾಗಿ ಪರಿವರ್ತನೆಗೊಳ್ಳುತ್ತಿರುವುದು ವಿಷಾದನೀಯ ಎಂದರು.ಲಿಂಗಾಯತ ಎನ್ನುವುದು ಆಚರಣೆ ಪ್ರಧಾನ ಶಬ್ಧ ಜಾತಿ ರಹಿತವಾದದ್ದು ಒಕ್ಕಲುತನ ಲಿಂಗಾಯತ ಅವರ ನಡೆ ನುಡಿಗಳ ಆಚರಣೆಗಳ ಮೇಲೆ ಅವಲಂಭಿತವಾದ ಶಬ್ದಗಳೇ ವಿನಃ ಜಾತಿಗಳಲ್ಲ. ಆದರೆ ಇಂದು ಬೇಸಾಯ ಮಾಡುವ ವೃತ್ತಿಯೇ ಒಂದು ಜಾತಿ ಆಗಿದೆ. 12ನೇ ಶತಮಾನದಲ್ಲಿ ಒಕ್ಕಲಿಗ ಮುದ್ದಣ್ಣ ಕೃಷಿಯನ್ನು ಒಂದು ವೃತ್ತಿಯಾಗಿ ಮಾಡಿಕೊಂಡು ಅನ್ನ ನೀಡುವ ಕಾಯಕದ ಜೊತೆಗೆ ಬೌದ್ಧಿಕ ವಿಚಾರಗಳೊಡಗೂಡಿದ ವಚನಗಳನ್ನು ರಚಿಸಿದ್ದಾರೆ ಎಂದರು.
ಅನ್ನ ನೀಡುವ ರೈತ ಮತ್ತು ಅವರ ಶ್ರಮವನ್ನು ಗೌರವಿಸಬೇಕು . ಓದಿದವರು, ಕಲಿತವರು, ಜ್ಞಾನಿಗಳು, ಪಂಡಿತರು ವ್ಯವಸಾಯವನ್ನು ಮಾಡುವಂತಿಲ್ಲ ಎಂದು ಎಲ್ಲೂ ಹೇಳಿಲ್ಲ. ಬಿಡುವಿನ ಸಮಯದಲ್ಲಿ ಇದ್ದ ಜಾಗದಲ್ಲಿ ಕೃಷಿಯತ್ತ ಗಮನ ಹರಿಸಿದರೆ ಈ ನಾಡು ಸಮೃದ್ಧ ಆರೋಗ್ಯ ಪೂರ್ಣಸಮಾಜವಾಗುತ್ತದೆ ಎಂದರು.