ಲೀಸ್ ರದ್ದಾಗಿರುವ ಗೇರು ನಿಗಮದ ಜಾಗ ಸರ್ಕಾರ ವಶ: ಅಶೋಕ್ ಕುಮಾರ್‌ ರೈ

KannadaprabhaNewsNetwork |  
Published : Feb 27, 2025, 12:32 AM IST
ಫೋಟೋ: ೨೫ಪಿಟಿಆರ್-ಸಭೆಶಾಸಕ ಅಶೋಕ್ ರೈ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ವಿಟ್ಲಭಾಗದಲ್ಲಿ ೨೪೦ ಎಕರೆ ಹಾಗೂ ಪುತ್ತೂರು ತಾಲೂಕಿನಲ್ಲಿ ೨೮೦ ಎಕರೆ ಸರ್ಕಾರಿ ಸ್ಥಳ ಗೇರು ಅಭಿವೃದ್ಧಿ ನಿಗಮದ ಕೈಯಲ್ಲಿದೆ. ಈ ಲೀಸ್ ರದ್ದಾಗಿ ೩೦ ವರ್ಷ ಕಳೆದಿದೆ. ಇದನ್ನು ಕೆಸಿಡಿಸಿ ನವೀಕರಿಸಿಲ್ಲ. ಈ ಜಾಗಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ವಿಟ್ಲಭಾಗದಲ್ಲಿ ೨೪೦ ಎಕರೆ ಹಾಗೂ ಪುತ್ತೂರು ತಾಲೂಕಿನಲ್ಲಿ ೨೮೦ ಎಕರೆ ಸರ್ಕಾರಿ ಸ್ಥಳ ಗೇರು ಅಭಿವೃದ್ಧಿ ನಿಗಮದ ಕೈಯಲ್ಲಿದೆ. ಈ ಲೀಸ್ ರದ್ದಾಗಿ ೩೦ ವರ್ಷ ಕಳೆದಿದೆ. ಇದನ್ನು ಕೆಸಿಡಿಸಿ ನವೀಕರಿಸಿಲ್ಲ. ಈ ಜಾಗಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಂಜೆ ಪುತ್ತೂರು ವಿಧಾನಸಭಾ ವ್ಯಾಪಿಯ ಅಧಿಕಾರಿಗಳ ಸಭೆ ನಡೆಸಿ ಈ ಮಾಹಿತಿ ನೀಡಿದರು.

ಈಗಾಗಲೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿವೇಶನಕ್ಕಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಒಂದು ಸಾವಿರ ಮೇಲ್ಪಟ್ಟಿದೆ. ಈ ಜನರಿಗೆ ನಿವೇಶನ ನೀಡುವುದು ಜನಪ್ರತಿನಿಧಿ-ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಹಿನ್ನಲೆಯಲ್ಲಿ ೯ ಗ್ರಾಪಂ ವ್ಯಾಪ್ತಿಯಲ್ಲಿ ೧೩೫ ಎಕರೆ ಸ್ಥಳ ಕಾಯ್ದಿರಿಸಲಾಗಿದೆ. ಉಳಿದ ಗ್ರಾ.ಪಂ.ಗಳಲ್ಲಿಯೂ ಸರ್ಕಾರಿ ಜಾಗಗಳನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ. ನಿವೇಶನ ರಹಿತ ಜನರಿಗಾಗಿ ಸುಮಾರು ೨ ಸಾವಿರ ಎಕರೆ ಸ್ಥಳವನ್ನು ನಾವು ಕಾದಿರಿಸಬೇಕು. ಈ ನಿಟ್ಟಿನಲ್ಲಿ ಪೂರ್ವ ತಯಾರಿ ಕೆಲಸಗಳನ್ನು ಮಾಡುವಂತೆ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ಗ್ರಾ.ಪಂ.ಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸರ್ಕಾರ ರದ್ದು ಮಾಡಿದೆ. ಈ ಹಿಂದೆ ತೆಗೆಯಲಾದ ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಪುತ್ತೂರು ಸುಳ್ಯ ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಒಟ್ಟು ೫೬ ಗ್ರಾಪಂಚಾಯಿತಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆ ಮುಂದಿನ ಏಪ್ರಿಲ್ ಅಂತ್ಯದೊಳಗೆ ವ್ಯವಸ್ಥೆಯಾಗಬೇಕು. ಕುಡಿಯುವ ನೀರು ಒದಗಿಸುವಲ್ಲಿ ಈಗಾಗಲೇ ಗ್ರಾ.ಪಂ. ಗಳಲ್ಲಿರುವ ಪೈಪ್ ಲೈನ್ ಗಳನ್ನು ವ್ಯವಸ್ಥಿತಗೊಳಿಸುವ ಕೆಲಸ ನಡೆಯಬೇಕು. ಈ ಬಾರಿ ತಾಲೂಕಿನ ಕೆಲ ಗ್ರಾ.ಪಂ.ಗಳಲ್ಲಿ ನೀರಿನ ಸಮಸ್ಯೆ ಫೆಬ್ರವರಿ ತಿಂಗಳಲ್ಲಿಯೇ ಕಂಡುಬಂದಿದೆ. ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಸೂಚನೆ ನೀಡಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ಇದ್ದರು. ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!