ಅರಕಲಗೂಡು ಹಾಗೂ ನಮ್ಮ ತಾಲೂಕಿನಲ್ಲಿ ಸಾಗಿರುವ ಎಚ್‌ಆರ್‌ಬಿಸಿ ನಾಲೆಯಿಂದ ಸುಮಾರು ೨೦ ಸಾವಿರ ಎಕರೆ ರೈತರ ಭೂಮಿಗೆ ನೀರು ಒದಗಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ೪೫೦ ಕೋಟಿ ರು., ಉತ್ತರ ಮತ್ತು ದಕ್ಷಿಣ ನಾಲೆಗೆ ೩೫೦ ಕೋಟಿ ರು. ಖರ್ಚು ಮಾಡಿದ್ದರು.
ಕನ್ನಡಪ್ರಭವಾರ್ತೆ, ಹೊಳೆನರಸೀಪುರ
ರಾಜ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದೆ ಅಷ್ಟೆ. ರೈತರ ಕಷ್ಟಕ್ಕೆ ಸ್ಪಂದಿಸದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ರೈತರು ತೀವ್ರ ಬರದಿಂದ ನರಳುತ್ತಿದ್ದು, ರಾಜ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದ ತಾಲೂಕುಗಳ ರೈತರ ಬದುಕಿಗೆ ಅಗತ್ಯವಾದ ಸೌಲಭ್ಯ, ಜಾನುವಾರುಗಳಿಗೆ ಅಗತ್ಯ ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಶಾಸಕ ಎಚ್.ಡಿ. ರೇವಣ್ಣ ಬೇಸರದಿಂದ ನುಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಕಲಗೂಡು ಹಾಗೂ ನಮ್ಮ ತಾಲೂಕಿನಲ್ಲಿ ಸಾಗಿರುವ ಎಚ್‌ಆರ್‌ಬಿಸಿ ನಾಲೆಯಿಂದ ಸುಮಾರು ೨೦ ಸಾವಿರ ಎಕರೆ ರೈತರ ಭೂಮಿಗೆ ನೀರು ಒದಗಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ೪೫೦ ಕೋಟಿ ರು., ಉತ್ತರ ಮತ್ತು ದಕ್ಷಿಣ ನಾಲೆಗೆ ೩೫೦ ಕೋಟಿ ರು. ಖರ್ಚು ಮಾಡಿದ್ದರು. ತಟ್ಟೆಕೆರೆ, ಮೂಡಲಹಿಪ್ಪೆ, ಗೊಂದಿಮಲ್ಲೇನಹಳ್ಳಿ, ಜಕ್ಕವಳ್ಳಿ, ಜಕ್ಕವಳ್ಳಿಕೊಪ್ಪಲು, ಲಕ್ಷ್ಮೀಪುರ ಹಾಗೂ ಇತರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸಾಗಿರುವ ನಾಲೆಯಲ್ಲಿ ಹೂಳು ತೆಗೆಸಿಲ್ಲ, ಗಿಡಗಂಟೆಗಳು ಬೆಳೆದು ಕಳೆದ ೨.೫ ವರ್ಷದಿಂದ ಒಂದು ಹನಿ ನೀರು ನಾಲೆಯಲ್ಲಿ ಸಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ಕಷ್ಟವಾಗುತ್ತದೆ. ಇದನ್ನರಿತು ಹಿಟಾಚಿ ಬಳಸಿ ಕಾಲುವೆಗಳಲ್ಲಿ ಬೆಳೆದ ಗಿಡಗಂಟೆ ಹಾಗೂ ಹೂಳು ತೆಗೆಸಲು ವ್ಯವಸ್ಥೆ ಮಾಡಿದ್ದೇನೆ. ಸರ್ಕಾರ ಹಣ ನೀಡದೇ ಇದ್ದರೂ ಚಿಂತೆಯಿಲ್ಲ. ಮೊದಲು ನಾಲೆಗಳಲ್ಲಿ ನೀರು ಹರಿಸಿ, ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.ನೀರಿಗೆ ತೊಂದರೆಯಾಗದಿರಲಿ:
ಗ್ರಾಮೀಣ ಪ್ರದೇಶದ ನೀರುಗಂಟಿಗಳು ಹಳ್ಳಿಗಳಲ್ಲಿ ನಲ್ಲಿ ನೀರನ್ನು ಸರಿಯಾಗಿ ಬಿಡುತ್ತಿಲ್ಲ ಎಂದು ಸಾಕಷ್ಟು ದೂರಿದೆ. ಈ ಬಗ್ಗೆ ತಾ.ಪಂ. ಅಧಿಕಾರಿಗಳು ಮತ್ತು ಪಿಡಿಒಗಳು ಜಾಗ್ರತೆಯಿಂದ ಹೆಚ್ಚಿನ ಕಾಳಜಿ ತೋರಿಸಬೇಕು. ಇಂತಹ ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಸರಿಯಾಗಿ ಕೊಡದಿದ್ರೆ ಹೇಗ್ರಿ ಎಂದು ಪ್ರಶ್ನಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ, ಈಗ ಬಹಳ ತೊಂದರೆಯಾಗಿದೆ. ಆದ್ದರಿಂದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಜತೆಗೆ ಅರ್ಬನ್ ವಾಟರ್ ಸಪ್ಲೈನವರಿಗೆ ೬೩ ಕೋಟಿ ರು. ನೀಡಲಾಗಿದೆ, ಆದರೂ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆಯಾಗಿದೆ. ನೀರು ಟ್ಯಾಂಕಿಗೆ ಹತ್ತುತ್ತಿಲ್ಲ ಎಂದು ತಿಳಿಸುವ ಗುತ್ತಿಗೆದಾರನ ನಿರ್ಲಕ್ಷ್ಯ ಬಗ್ಗೆ ಎಚ್ಚರಿಸಿ, ಹಣದ ಕೊರತೆಯಾದರೆ ತಿಳಿಸಿ ಎಂದು ಹೇಳಿದ್ದೇನೆ. ನಮಗೆ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಆಗಬಾರದು ಅಷ್ಟೆ ಎಂದರು.
ಸುದ್ದಿಗೋಷ್ಠಿಯ ನಂತರ ಮಲ್ಲಪ್ಪನಹಳ್ಳಿ ರಸ್ತೆಯಲ್ಲಿ ಸಾಗಿರುವ ಕಾಲುವೆಯಲ್ಲಿ ಬೆಳೆದ ಗಿಡಗಂಟೆಗಳು ಹಾಗೂ ಹೂಳು ತೆಗೆಯುವುದನ್ನು ಪರಿಶೀಲನೆ ನಡೆಸಿ ಹಿಟಾಚಿ ಚಾಲಕನಿಗೆ ಹಾಗೂ ಮೇಲ್ವಿಚಾರಕರಿಗೆ ಕೆಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.-------------
22ಎಚ್ಎಸ್ಎನ್13
ಹೊಳೆನರಸೀಪುರ ತಾ. ಮಲ್ಲಪ್ಪನಹಳ್ಳಿ ರಸ್ತೆಯಲ್ಲಿ ಸಾಗಿರುವ ಕಾಲುವೆಯಲ್ಲಿ ಬೆಳೆದ ಗಿಡಗಂಟೆಗಳು ಹಾಗೂ ಹೂಳು ತೆಗೆಯುವುದನ್ನು ಶಾಸಕ ಎಚ್.ಡಿ.ರೇವಣ್ಣ ಪರಿಶೀಲನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.