ರಾಷ್ಟ್ರೀಯ ಕ್ರೀಡಾ ಜ್ಞಾನ ಪರೀಕ್ಷೆಯಲ್ಲಿ ಯಶ್ಮಿತ್‌ಗೆ 4ನೇ ಬಹುಮಾನ

KannadaprabhaNewsNetwork |  
Published : Sep 23, 2026, 01:45 AM IST
22ಎಚ್ಎಸ್ಎನ್11 : ಕ್ರೀಡಾ ಭಾರತಿ ಕ್ರೀಡಾ ಜ್ಞಾನ ಪರೀಕ್ಷೆಯಿಂದ ಚತುರ್ತ ಬಹುಮಾನ ೧೧ ಸಾವಿರ ನಗದು ಪಡೆದ ಚನ್ನರಾಯಪಟ್ಟಣದ ಜ್ಞಾನ ಸಾಗರ ಶಾಲಾ ವಿದ್ಯಾರ್ಥಿ ಯಶ್ನಿತ್ ಹಾಗ ಡೀನ್ ಸುಜಾಫಿಲಿಪ್ ರನ್ನು ಕ್ರೀಡಾ ಭಾರತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಯುವ ಸಮುದಾಯ ಇತ್ತೀಚಿನ ದಿವಸಗಳಲ್ಲಿ ಅಧುನಿಕ ವಸ್ತುವಿನ ದಾಸರಾಗುತ್ತಿದ್ದಾರೆ. ಕ್ರೀಡೆ ಎಂದರೆ ಮೊಬೈಲ್ ಹಾಗೂ ಕಂಪ್ಯೂಟರ್ ಗೇಮ್‌ಗೆ ಮಾತ್ರ ಸೀಮಿತರಾಗಿರುತ್ತಿದ್ದಾರೆ. ಇದನ್ನು ಅರಿತ ಕ್ರೀಡಾ ಭಾರತಿ ಸಂಘಟನೆಯು ಕೊಠಡಿಯಿಂದ ಮೈದಾನಕ್ಕೆ ಮಕ್ಕಳನ್ನು ಕರೆದು ತರುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭವಾರ್ತೆ, ಚನ್ನರಾಯಪಟ್ಟಣ

ಯಾವ ವಿದ್ಯಾರ್ಥಿ ಪಠ್ಯದ ಜೊತೆಯಲ್ಲಿ ಕ್ರೀಡೆಯಲ್ಲೂ ಸಾಧನೆ ಮಾಡುತ್ತಾನೋ ಅವನಿಗೆ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗ ಪಡೆಯುವಾಗ ಮೀಸಲಾತಿ ದೊರೆಯುತ್ತದೆ. ಇದನ್ನು ಅರಿತು ಕ್ರಿಡೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕ್ರೀಡಾ ಭಾರತಿ ಹಾಸನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಶಾಮಸುಂದರ್ ತಿಳಿಸಿದರು.

ರಾಷ್ಟ್ರೀಯ ಕ್ರೀಡಾ ದಿವಸದ ಅಂಗವಾಗಿ ಕೇಂದ್ರ ಕ್ರೀಡಾ ಭಾರತಿ ಸಂಘಟನೆಯಿಂದ ನಡೆದ ರಾಷ್ಟ್ರೀಯ ಕ್ರೀಡಾ ಜ್ಞಾನ ಪರೀಕ್ಷೆಯಲ್ಲಿ ಪಟ್ಟಣದ ಜ್ಞಾನ ಸಾಗರ ಇಂಟರ್ ನ್ಯಾಷಿನಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿ ೧೧ ಸಾವಿರ ನಗದು ಬಹುಮಾನ ಪಡೆದಿರುವುದರಿಂದ ವಿದ್ಯಾರ್ಥಿ ಹಾಗೂ ನಾಗೇಶ್ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣಾಧಿಕಾರಿಯನ್ನು ಸನ್ಮಾನಿಸಿ ಅವರು ಮಾತನಾಡಿದರು, ವಿದ್ಯಾರ್ಥಿಗಳು ಹಾಗೂ ಪೋಷಕರು ಅಂಕದ ಹಿಂದೆ ಓಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಮಕ್ಕಳು ಸದೃಢರಾಗುತ್ತಿಲ್ಲ. ಇದನ್ನು ಅರಿತು ಕ್ರೀಡೆಯಲ್ಲಿ ಮಕ್ಕಳು ತೊಡಗುವಂತೆ ಮಾಡಬೇಕು ಎಂದು ತಿಳಿಸಿದರು. ಕೀಡಾ ಭಾರತಿ ನಡೆಸಿದ ಕ್ರಿಡಾ ಜ್ಞಾನ ಪರೀಕ್ಷೆಯಿಂದ ದೇಶದ ೩೦ ರಾಜ್ಯಗಳಲ್ಲಿ ಸುಮಾರು ೨.೧೩ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಇದರಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದಿಂದ ೫೨೯೦ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಪಟ್ಟಣದ ಜ್ಞಾನ ಸಾಗರ ಪಬ್ಲಿಕ್ ಶಾಲೆ ವಿದ್ಯಾರ್ಥಿ ಯಶ್ಮಿತ್ ವಿ. ಗೌಡ ನಾಲ್ಕನೇ ಬಹುಮಾನ ೧೧ ಸಾವಿರ ನಗುದನ್ನು ತನ್ನದಾಗಿಸಿಕೊಳ್ಳುವ ಮೂಲಕ ಕ್ರೀಡಾ ಕ್ಷೇತ್ರ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದರಿಂದ ತಾಲೂಕಿಗೆ ಕೀರ್ತಿತಂದಂತಾಗಿದೆ ಎಂದು ತಿಳಿಸಿದರು.

ಯುವ ಸಮುದಾಯ ಇತ್ತೀಚಿನ ದಿವಸಗಳಲ್ಲಿ ಅಧುನಿಕ ವಸ್ತುವಿನ ದಾಸರಾಗುತ್ತಿದ್ದಾರೆ. ಕ್ರೀಡೆ ಎಂದರೆ ಮೊಬೈಲ್ ಹಾಗೂ ಕಂಪ್ಯೂಟರ್ ಗೇಮ್‌ಗೆ ಮಾತ್ರ ಸೀಮಿತರಾಗಿರುತ್ತಿದ್ದಾರೆ. ಇದನ್ನು ಅರಿತ ಕ್ರೀಡಾ ಭಾರತಿ ಸಂಘಟನೆಯು ಕೊಠಡಿಯಿಂದ ಮೈದಾನಕ್ಕೆ ಮಕ್ಕಳನ್ನು ಕರೆದು ತರುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.ಕ್ರೀಡಾ ಭಾರತಿ ಮುಖ್ಯಸ್ಥ ಲೋಕೇಶ್ ಜಮ್ಮರಡಿಗಿ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ತೊಡುವುದಲ್ಲದೆ ಪರಿಸರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಬೇಕು, ಕ್ರೀಡಾ ಜ್ಞಾನ ಪರೀಕ್ಷೆಯ ಪ್ರಥಮ ಬಹುಮಾನ ಒಂದು ಲಕ್ಷ ನಗದು ತಮಿಳುನಾಡಿಗೆ ದೊರೆತರೆ ದ್ವಿತೀಯ ಬಹುಮಾನ ೫೦ ಸಾವಿರ ಗುಜರಾತ್ ಹಾಗೂ ಜೋದ್‌ಪುರ್ ತನ್ನದಾಗಿಸಿಕೊಂಡಿವೆ. ತೃತೀಯ ಬಹುಮಾನ ಮಹಾರಾಷ್ಟ್ರ, ಉತ್ತರ ಪ್ರದೇಶ್, ಒಡಿಶಾ ರಾಜದ ವಿದ್ಯಾರ್ಥಿಗಳು ಪಡೆದಿದ್ದಾರೆ. ಚತುರ್ಥ ಬಹುಮಾನ ತಮಿಳುನಾಡು, ಬಿಹಾರ್, ಕರ್ನಾಟಕ, ಅಸ್ಸಾಂ, ಮೀರತ್ ಪ್ರಾಂತ್, ಮಧ್ಯಬೆಂಗಾಲ್‌ ವಿದ್ಯಾರ್ಥಿಗಳಿಗೆ ದೊರೆತಿದೆ ಎಂದು ಹೇಳಿದರು.

ಜ್ಞಾನ ಸಾಗರ ಶಾಲೆ ವಿದ್ಯಾರ್ಥಿ ಯಶ್ಮಿತ್ ವಿ. ಗೌಡ, ನಾಗೇಶ್ ಎಜುಕೇಷನ್ ಟ್ರಸ್ಟ್ ಶಿಕ್ಷಣಾಧಿಕಾರಿ ಸುಜಾಫಿಲಿಪ್ ಅವರನ್ನು ಕ್ರೀಡಾ ಭಾರತಿಯಿಂದ ಗೌರವಿಸಲಾಯಿತು. ಪ್ರಾಂತ ಕಾರ್ಯದರ್ಶಿ ಮೋಹನ್, ವಿಭಾಗ ಸಂಯೋಜಕರಾದ ಅಶ್ವಿನಿ, ಜಿಲ್ಲಾ ಮಹಿಳಾ ಪ್ರಮುಕ್ ಸ್ನೇಹಾ, ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಶೋಭಾ, ಚಂದ್ರಪ್ಪ, ಪ್ರವೀಣ್, ಶ್ರೀಕಾಂತ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸಿ
ಪಡಿತರ ಪದಾರ್ಥ ಪಡೆಯಲು ದೂರದ ಊರಿಗೆ ಹೋಗಬೇಕಿಲ್ಲ: ಸಚ್ಚಿನ್ ಚಲುವರಾಯಸ್ವಾಮಿ