ಕುಕನೂರು: ಧಾರ್ಮಿಕ ಶಕ್ತಿ ಫಲವಾಗಿ ಭಾರತ ಶಾಂತಿ ರಾಷ್ಟ್ರವಾಗಿದೆ. ಬಾಂಗ್ಲಾ, ಪಾಕಿಸ್ಥಾನ, ಇನ್ನಿತರ ರಾಷ್ಟ್ರಗಳು ಭಾರತದಷ್ಟು ಶಾಂತಿ ಹೊಂದಿಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಯರೇಹಂಚಿನಾಳ ಗ್ರಾಮದ ಜನರ ಭಕ್ತಿ ಅಪಾರ. ದೇವಸ್ಥಾನಗಳು ಭಕ್ತಿಯ ಸಂಕೇತ. ದೇವಸ್ಥಾನ ನಿರ್ಮಾಣದಿಂದ ಗ್ರಾಮಾಭಿವೃದ್ಧಿ ಹೆಚ್ಚುತ್ತದೆ. ದೇವಸ್ಥಾನಗಳ ಗ್ರಾಮಗಳ ಕಿರೀಟವಿದ್ದಂತೆ ಎಂದರು.
ಗ್ರಾಮದಿಂದ ಶ್ರೀ ಪತ್ರೇಶ್ವರ ದೇವಸ್ಥಾನದ ವರೆಗೆ ಸಾನ್ನಿಧ್ಯ ವಹಿಸಿದ್ದ ಡಾ. ಹಿರಿಯ ಶಾಂತವೀರ ಸ್ವಾಮೀಜಿ ಹಾಗೂ ಗಣ್ಯರನ್ನು ಗ್ರಾಮಸ್ಥರು ಸ್ವಾಗತಿಸಿದರು. ಈ ವೇಳೆ ನಾನಾ ಗ್ರಾಮದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.ಕನ್ನಡ ಉಪನ್ಯಾಸಕ ಮತ್ತು ಖ್ಯಾತ ಜಾನಪದ ನಿವೃತ್ತ ಸಾಹಿತಿ ಡಾ. ಶಂಭು ಬಳಿಗಾರ ಮಾತನಾಡಿ, ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದು ಗ್ರಾಮದ ಹಿರಿಮೆ ಸಂಕೇತ ಎಂದರು.
ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ತಹಸೀಲ್ದಾರ, ನಿವೃತ್ತಿ ಹೊಂದಿದ ಉಪನ್ಯಾಸಕ ಡಾ. ದಾನಯ್ಯ ಎಂ. ಹಿರೇಮಠ, ಕರಬಸಪ್ಪ ವಿ. ಹಂಚಿನಾಳ, ಕಳಕನಗೌಡ ಕಲ್ಲೂರು, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪ್ರಮುಖರಾದ ಈಶಪ್ಪ ಆರೇರ, ಶಿವಣ್ಣ ಯಾಳಗಿ, ಈರಪ್ಪ ಬ. ಬಿಸನಳ್ಳಿ, ಎ.ಕೆ. ಹೊಸ ಅಂಗಡಿ, ಮಹಾದೇವಪ್ಪ ಬಟ್ಟೂರು, ಅಂದಪ್ಪ ಕೋಳೂರು ಇತರರಿದ್ದರು.