ಕದಂಬ ನೌಕಾನೆಲೆಯಲ್ಲಿ ನೌಕಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿ

KannadaprabhaNewsNetwork | Published : Dec 5, 2024 12:32 AM

ಸಾರಾಂಶ

ನೌಕಾಸೇನೆಯ ಬ್ಯಾಂಡ್ ತಂಡದಿಂದ ನುಡಿಸಿದ ದೇಶಭಕ್ತಿಗೀತೆ ಕೇಳುಗರ ಮನಸೂರೆಗೊಳಿಸಿತು. ಮಕ್ಕಳ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಕಾರವಾರ: ತಾಲೂಕಿನ ಅರಗಾದ ಕದಂಬ ನೌಕಾನೆಲೆಯ ನೇವಿ ಹೌಸ್‌ನಲ್ಲಿ ಬುಧವಾರ ಭಾರತೀಯ ನೌಕಾ ದಿನ ಕಾರ್ಯಕ್ರಮ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರ ಸಮ್ಮುಖದಲ್ಲಿ ಜರುಗಿತು.ನೌಕಾಸೇನೆಯ ಬ್ಯಾಂಡ್ ತಂಡದಿಂದ ನುಡಿಸಿದ ದೇಶಭಕ್ತಿಗೀತೆ ಕೇಳುಗರ ಮನಸೂರೆಗೊಳಿಸಿತು. ಮಕ್ಕಳ ನೃತ್ಯ ಕಾರ್ಯಕ್ರಮಗಳು ಜನರುಗಿತು.

ಇದಕ್ಕೂ ಮುನ್ನ ರಾಜ್ಯಪಾಲರು ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ೧೯೬೧ರಲ್ಲಿ ಪೋರ್ಚುಗೀಸ್ ಅವರಿಂದ ಅಂಜದೀಪ್ ದ್ವೀಪವನ್ನು ವಿಮೋಚನೆಗೊಳಿಸಿದ ವೀರ ಯೋಧರಿಗೆ ನೌಕಾನೆಲೆಯಲ್ಲಿ ಇರುವ ಸ್ಮಾರಕದಲ್ಲಿ ಪುಷ್ಪಗುಚ್ಛವಿರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ರಿಯರ್ ಅಡ್ಮಿರಲ್ ಕೆ.ಎಂ. ರಾಮಕೃಷ್ಣನ್ ವಿ.ಎಸ್.ಎಂ., ಕ್ಯಾಪ್ಟನ್ ಬೀರೇಂದ್ರ ಎಸ್. ಬೈನ್ಸ್ ಇದ್ದರು.೧೮ರಿಂದ ಬೀಚ್ ಕಾರ್ನಿವಲ್, ಕಡಲ ಉತ್ಸವ

ಕಾರವಾರ: ನಗರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಡಿ. ೧೮ರಿಂದ ೨೨ರ ವರೆಗೆ ಬೀಚ್ ಕಾರ್ನಿವಲ್, ಕಡಲ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಲ್ಲಿನ ಸ್ಟಾರ್ ಚಾಯ್ಸ್ ಸಂಸ್ಥೆಯ ರಾಜನ್ ಬಾನವಾಳಿಕರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ ಆಕರ್ಷಕ ಅಮ್ಯೂ ಸ್ಟೆಂಟ್ ಪಾರ್ಕ್ ಮತ್ತು ಸ್ಮಾಲ್‌ಗಳನ್ನು ಹಾಕಲಾಗುವುದು. ಮಯೂರವರ್ಮ ವೇದಿಕೆಯಲ್ಲಿ ಯಕ್ಷಗಾನ, ಭರತನಾಟ್ಯ, ರೂಪಕ ನೃತ್ಯ, ಡೊಳ್ಳು ಕುಣಿತ, ಜಾನಪದ ಉತ್ಸವ, ರಸಮಂಜರಿಯಂತಹ ಮನರಂಜನಾ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.ಡಿ. ೨೨ರಂದು ಬೆಳಗ್ಗೆ ೭ ಗಂಟೆಗೆ ಬೀಚ್ ರನ್ನಿಂಗ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಈ ಐದು ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್, ಸ್ಯಾಂಡಲ್‌ವುಡ್ ಗಾಯಕರು ಕಲಾ ಪ್ರದರ್ಶನ ನೀಡಲಿದ್ದಾರೆ ಎಂದರು.ಪ್ರಕಾಶ ನಾಯ್ಕ, ಸುನೀಲ್ ಥಾಮ್ಸೆ, ರೂಪಲ್ ನೇತಳಕರ್, ಶ್ರೀಪಾದ ನಾಯ್ಕ, ರೋಹಿದಾಸ್ ಬಾನಾವಳಿ, ಜ್ಯೋತಿ ನಾಯ್ಕ, ಯಶೋಧ ಶೇಖರ್, ಆಶಾ ನಾಯ್ಕ ಮೊದಲಾದವರು ಇದ್ದರು.

Share this article