ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಸಭೆ ಕಂದಾಯ ವಿಭಾಗದಲ್ಲಿ ಕೃಷಿ ಭೂಮಿಗೆ ಅಕ್ರಮವಾಗಿ ಇ-ಸ್ವತ್ತು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲಾ ಹಗರಣಗಳ ಕುರಿತ ಕಡತಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಹಗರಣಗಳ ಬಗ್ಗೆ ಒಂದೇ ದಿನದಲ್ಲಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಬೆಳಗಾವಿ ಅಧಿವೇಶನದ ನಂತರ ಮತ್ತೊಮ್ಮೆ ಪುರಸಭೆಗೆ ಭೇಟಿ ನೀಡಿ ಕಡತಗಳ ಕುರಿತು ಆಳವಾಗಿ ಪರಿಶೀಲನೆ ಮಾಡಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧಿಕಾರಿ ಅಮಿತ್ ತಾರದಾಳೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಇ-ಸ್ವತ್ತು ಹಗರಣದ ಬಗ್ಗೆ ಮುಖ್ಯಾಧಿಕಾರಿ ಮೀನಾಕ್ಷಿ ಹೆಸರು ಉಲ್ಲೇಖ: ಜೆಡಿಎಸ್ ಸದಸ್ಯರಿಗೆ ತರಾಟೆ
ಪುರಸಭೆಯಲ್ಲಿನ ಹಗರಣದ ಬಗ್ಗೆ ಪೌರಾಡಳಿತ ನಿರ್ದೇಶನಲಯದ ತನಿಖಾಧಿಕಾರಿಗಳ ತಂಡಕ್ಕೆ ದೂರು ನೀಡುವಾಗ ತಮ್ಮ ಹೆಸರನ್ನು ಉಲ್ಲೇಖ ಮಾಡಿರುವ ಬಗ್ಗೆ ಮುಖ್ಯಾಧಿಕಾರಿ ಮೀನಾಕ್ಷಿ ಜೆಡಿಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆಯಿತು.
ಈ ವೇಳೆ ಜೆಡಿಎಸ್ ಸದಸ್ಯರು ಹಾಗೂ ಮುಖ್ಯಾಧಿಕಾರಿ ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆಯಿತು. ಹಗರಣ ನಡೆದ ವೇಳೆ ನಾನು ಪುರಸಭೆ ಮುಖ್ಯಾಧಿಕಾರಿಯಾಗಿಲಿಲ್ಲ. ಆದರೂ ಸಹ ಪ್ರಸನ್ನಕುಮಾರ್ ಅವರ ಖಾತೆಗೆ ಸಂಬಂಧಿಸಿದಂತೆ ದಾಖಲೆ ನಾಶಪಡಿಸಲಾಗಿದೆ ಎಂದು ತಮ್ಮ ವಿರುದ್ಧ ದೂರು ನೀಡಿರುವ ಬಗ್ಗೆ ಮೀನಾಕ್ಷಿ ತನಿಖಾಧಿಕಾರಿಗಳ ಎದುರೇ ಜೆಡಿಎಸ್ ಸದಸ್ಯರಾದ ಮಹೇಶ್, ಪ್ರಿಯಾಂಕಾ, ಮನೋಜ್ ಕುಮಾರ್ ಹಾಗೂ ನಂದೀಶ್ ವಿರುದ್ಧ ಹರಿಹಾಯ್ದರು.