ನಾಳೆ....ನಾಡು, ನುಡಿ ನೆಲ ಜಲದ ರಕ್ಷಣೆಗೆ ಸರ್ಕಾರ ಬದ್ದ: ರಾಜೇಶ್ ಕುಮಾರ್

KannadaprabhaNewsNetwork | Published : Nov 2, 2024 1:38 AM

ಸಾರಾಂಶ

Govt committed to protect Nadu, Nudi ground water: Rajesh Kumar

ಕನ್ನಡಪ್ರಭ ವಾರ್ತೆ ಹಿರಿಯೂರು

ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಪ್ರಾಚೀನ ಪರಂಪರೆ ಇದೆ. ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪ್ರಕೃತಿ, ಪರಿಸರ, ಭಾಷೆ, ಬರಹ ಧರ್ಮ ಇವೆಲ್ಲವುಗಳಲ್ಲಿ ಒಲವು-ಚೆಲುವು ತುಂಬಿರುವುದು ಹೆಮ್ಮೆಯ ಸಂಗತಿ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ನಾಡು-ನುಡಿ,ಕಲೆ, ಸಂಸ್ಕೃತಿ ಬೆಳೆಸಲು ಬದ್ಧವಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಸಾಹಿತಿ ಕುವೆಂಪು, ಬಿ.ಎಂ.ಶ್ರೀಕಂಠಯ್ಯ, ಶಿವರಾಮ್ ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅನಕೃ ಅನೇಕ ಗಣ್ಯರ ಹೋರಾಟದ ಫಲವಾಗಿ ಕನ್ನಡನಾಡು ರಚನೆಯಾಗಿದೆ.

ನಾಡು ನುಡಿ, ಸಾಹಿತ್ಯಕ್ಕಾಗಿ ದುಡಿದ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಭಾಷೆಯ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಿ ಕಲಾವಿದರಿಗೆ ಸಂಭಾವನೆ, ಪಿಂಚಣಿ ನೀಡಿ ಗೌರವಿಸಲಾಗುತ್ತಿದೆ. ನಾಡು, ನುಡಿ, ಗಡಿ, ನೆಲ, ಜಲದ ರಕ್ಷಣೆಯ ಬಗ್ಗೆ ಕಾಳಜಿ ವಹಿಸೋಣ ಎಂದರು.

ಪತ್ರಿಕೋದ್ಯಮದಿಂದ ಪ್ರಕಾಶ್ ಬಬ್ಬೂರು, ಬಸವರಾಜ್ ಖಂಡೇನಹಳ್ಳಿ, ಸಾಹಿತ್ಯ ಕ್ಷೇತ್ರದಿಂದ ರವೀಶ್, ಶಫೀವುಲ್ಲಾ, ರಂಗೋಲಿ ಕ್ಷೇತ್ರದಿಂದ ಉಷಾರಾಣಿ ಆಲೂರು, ಕ್ರೀಡಾಪಟು ಎಂ.ಎನ್.ಕೀರ್ತಿ, ಸೇವಾಕ್ಷೇತ್ರದಿಂದ ಎಲ್.ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಎಂ.ನಾಗೇಶ್, ನಗರಸಭೆ ಪೌರಾಯುಕ್ತ ಎ.ವಾಸಿo, ಕ್ಷೇತ್ರಶಿಕ್ಷಣಾಧಿಕಾರಿ ಸಿಎಂ.ತಿಪ್ಪೇಸ್ವಾಮಿ,ಡಿವೈಎಸ್ ಪಿ ಶಿವಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ರೈತ ಮುಖಂಡರಾದ ಹೊರಕೇರಪ್ಪ, ನಗರಸಭೆ ಸದಸ್ಯರಾದ ಶಿವರಂಜಿನಿ, ಬಿಎನ್.ಪ್ರಕಾಶ್, ಎಂಡಿ.ಸಣ್ಣಪ್ಪ, ವಿಠ್ಠಲ್, ಜಗದೀಶ್, ಅನಿಲ್, ಗಿರೀಶ್, ವಿಶಾಲಾಕ್ಷಮ್ಮ, ಕವಿತಾ, ಸುರೇಖಾಮಣಿ, ಮೊದಲಮೇರಿ, ರಕ್ಷಣಾ ವೇದಿಕೆ ಅಧ್ಯಕ್ಷ ರಾಮಕೃಷ್ಣಪ್ಪ, ಬಸವರಾಜ್, ಲಕ್ಷ್ಮೀಕಾಂತ್ ಇದ್ದರು.

-----

ಫೋಟೊ: ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾಜೇಶ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

Share this article