ಗೌಡ ಫುಟ್ಬಾಲ್ : ಪ್ರೀ ಕ್ವಾರ್ಟರ್ ಹಂತಕ್ಕೆ 4 ತಂಡ

KannadaprabhaNewsNetwork |  
Published : May 11, 2025, 11:56 PM IST
ಗೌಡ ಫುಟ್ಬಾಲ್ | Kannada Prabha

ಸಾರಾಂಶ

ಎಂಟನೇ ವರ್ಷದ ಗೌಡ ಫುಟ್ಪಾಲ್‌ ಪಂದ್ಯಾವಳಿಯ ಭಾನುವಾರದ ಪಂದ್ಯಾಟದಲ್ಲಿ ಪ್ರೀ ಕ್ವಾಟರ್‌ ಹಂತಕ್ಕೆ ಚಂಡಿರ, ಪೂಳಕಂಡ, ಉಳುವರನ ಹಾಗೂ ಕೊಳಂಬೆ ತಂಡ ಪ್ರವೇಶ ಪಡೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿಯ ಭಾನುವಾರದ ಪಂದ್ಯಾಟದಲ್ಲಿ ಪ್ರೀ ಕ್ವಾಟರ್ ಹಂತಕ್ಕೆ ಚಂಡಿರ, ಪೂಳಕಂಡ, ಉಳುವರನ ಹಾಗೂ ಕೊಳಂಬೆ ತಂಡ ಪ್ರವೇಶ ಪಡೆದಿದೆ.

ಭಾನುವಾರ ದಿನದ ಮೊದಲನೇ ಪಂದ್ಯ ಕುಂಬನ ಹಾಗೂ ಕೂಡಕಂಡಿ ತಂಡಗಳ ನಡುವೆ ನಡೆಯಿತು. ಕುಂಬನ - 1 ಗೋಲ್ ಹಾಗೂ ಕೂಡಕಂಡಿ - 1 ಗೋಲ್ಗಳೊಂದಿಗೆ ಸಮಬಲ ಸಾಧಿಸಿದ್ದು ಟ್ರೈ ಬ್ರೇಕರ್ ನಲ್ಲಿ ಕುಂಬನ ತಂಡ ಜಯಗಳಿಸಿತು.

ದಂಬೆಕೋಡಿ ಹಾಗೂ ಪೂಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಪೂಳಕಂಡ 1 ಗೋಲ್ ಗಳಿಸಿಕೊಂಡು ಜಯಗಳಿಸಿತು. ಹುದೇರಿ ಹಾಗೂ ಉಡುದೊಳಿರ ತಂಡಗಳ ನಡುವಿನ ಪಂದ್ಯದಲ್ಲಿ ಹುದೇರಿ ಮತ್ತು ಉಡುದೊಳಿರ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿತು. ಟ್ರೈ ಬ್ರೇಕರ್ ನಲ್ಲಿ ಹುದೇರಿ ತಂಡ ಜಯಗಳಿಸಿತು.

ಬಾಲಡಿ ಹಾಗೂ ಕೋಟೆರ ತಂಡಗಳ ನಡುವಿನ ಪಂದ್ಯದಲ್ಲಿ ಬಾಲಡಿ ತಂಡ 3 ಗೋಲ್ ಗಳಿಂದ ಜಯಗಳಿಸಿತು. ಉಳುವರನ ಹಾಗೂ ಕೊಂಬಂಡ ತಂಡಗಳ ನಡುವಿನ ಪಂದ್ಯದಲ್ಲಿ ಉಳುವರನ ತಂಡ 6 ಗೋಲ್ ಗಳಿಂದ ಜಯಗಳಿಸಿತು.

ಹುದೇರಿ ಹಾಗೂ ಕೊಳಂಬೆ ತಂಡಗಳ ನಡುವಿನ ಪಂದ್ಯದಲ್ಲಿ ಕೊಳಂಬೆ 5 ಗೋಲ್ ಹಾಗೂ ಹುದೇರಿ ತಂಡ 2 ಗೋಲ್ ಗಳಿಸಿತು. ಕೊಳಂಬೆ ತಂಡ ಜಯಗಳಿಸಿತು.

ಕಾಂಗೀರ ಹಾಗೂ ಆಮೆಮನೆ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಗೀರ ತಂಡ 1 ಗೋಲ್ ಹೊಡೆದು ಜಯಗಳಿಸಿತು. ಚಂಡಿರ ಹಾಗೂ ಮುಕ್ಕಾಟಿ(ಬಿ) ತಂಡಗಳ ನಡುವಿನ ಪಂದ್ಯದಲ್ಲಿ 1-1 ಗೋಲ್ ಗಳಿಂದ ಸಮಬಲ ಸಾಧಿಸಿತು ಟ್ರೈ ಬ್ರೇಕರ್ ನಲ್ಲಿ ಚಂಡಿರ ತಂಡ ಜಯಗಳಿಸಿತು.‌ ಪೂಳಕಂಡ ಹಾಗೂ ಕುಂಬನ ತಂಡಗಳ ನಡುವಿನ ಪಂದ್ಯದಲ್ಲಿ 1-1 ಗೋಲ್ ಗಳಿಂದ ಸಮಬಲ ಸಾಧಿಸಿತು. ಟ್ರೈ ಬ್ರೇಕರ್ ನಲ್ಲಿ ಪೂಳಕಂಡ ತಂಡ ಜಯಗಳಿಸಿತು.

ಕೊಳಂಬೆ ಹಾಗೂ ಬಾಲಡಿ ತಂಡಗಳ ನಡುವಿನ ಪಂದ್ಯದಲ್ಲಿ ಬಾಲಡಿ ತಂಡ 1 ಗೋಲ್ ಕೊಳಂಬೆ ತಂಡ 2 ಗೋಲ್ ಗಳಿಸಿಕೊಂಡು ಮುಂದಿನ ಹಂತಕ್ಕೆ ಪ್ರವೇಶ ಪಡಿಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ