ಗೌಡ ಪ್ರೀಮಿಯರ್ ಲೀಗ್ : ಎಮ್ ಸಿ ಬಿ ಗೋಳಿಕಟ್ಟೆ ವಿನ್ನರ್, ಪಾಕ ಬಾಯ್ಸ್ ರನ್ನರ್

KannadaprabhaNewsNetwork |  
Published : Apr 12, 2026, 03:00 AM IST
ಚೇರಂಬಾಣೆಗೌಡಸಮಾಜ ಹಾಗೂ ಚೇರಂಬಾಣೆ ಗೌಡಯುವ ವೇದಿಕೆ ಕಾರುಗುಂದ ಇವರಆಶಯದಲ್ಲಿ ನಡೆದ ಪ್ರಥಮ ವರ್ಷದಗೌಡ ಪ್ರೀಮಿಯರ್ ಲೀಗ್  ಒಂದರವಿನ್ನರ್ ಎಮ್ ಸಿ ಬಿಗೋಳಿಕಟ್ಟೆ . | Kannada Prabha

ಸಾರಾಂಶ

ಇಲ್ಲಿಗೆ ಸಮೀಪದ ಚೇರಂಬಾಣೆಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಇವರ ಆಶಯದಲ್ಲಿ ನಡೆದ ಪ್ರಥಮ ವರ್ಷದ ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಭಿಮಾನಿಗಳ ಸೇರುವುವಿಕೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಚೇರಂಬಾಣೆಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಇವರ ಆಶಯದಲ್ಲಿ ನಡೆದ ಪ್ರಥಮ ವರ್ಷದ ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಭಿಮಾನಿಗಳ ಸೇರುವುವಿಕೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಿದ ಕ್ರೀಡಾಕೂಟವನ್ನು ಗೌಡ ಸಮಾಜ ಚೇರಂಬಾಣೆ ಕಾರುಗುಂದ

ಇದರ ಅಧ್ಯಕ್ಷರಾದ ಕೊಡಪಾಲು ಗಣಪತಿ ಉದ್ಘಾಟನೆಗೊಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಕೆ ಕೇಕಡ ದಿನೇಶ್ ಹಾಗೂ ಕಾರ್ಯದರ್ಶಿಗಳಾದ ಬೆಳ್ಳಿಯನ ಚಂದ್ರಶೇಖರ್ , ಯುವ ವೇದಿಕೆ ಅಧ್ಯಕ್ಷರಾದ ಪರೆಮಜುಲು ಪ್ರದೀಪ್, ಕಾರ್ಯದರ್ಶಿ ಕೇಟೋಳಿ ಯಶವಂತ್ ಅವರು ಉಪಸ್ಥಿತರಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಸಮಾಜಸೇವಕ ಎಡಿಕೇರಿ ಪ್ರಸನ್ನ, ಗೌಡ ಸಮಾಜ ಚೇರಂಬಾಣೆ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್, ಮಡಿಕೇರಿ ಯುವ ವೇದಿಕೆ ಅಧ್ಯಕ್ಷರಾದ ಬಾಲಾಡಿ ಮನೋಜ್ ಕುಮಾರ್ ಹಾಗೂ ಮಡಿಕೇರಿಯ ಯುವ ವೇದಿಕೆ ಕಾರ್ಯದರ್ಶಿಯಾದ ಪುದಯನೆರವನ ರಿಷಿತ್ ಮಾದಯ್ಯ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಅಧ್ಯಕ್ಷರಾದ ಪ್ರದೀಪ್ ಪಾರಮಜುಲ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿ ಮಾತನಾಡಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ 10 ತಂಡಗಳು ಭಾಗವಹಿಸಿದ್ದು ಇದರಲ್ಲಿ ಗೌಡ ಪ್ರೀಮಿಯರ್ ಲೀಗ್ ವಿನ್ನರ್ ಎಮ್ ಸಿ ಬಿ ಗೋಳಿಕಟ್ಟೆ , ರನ್ನರ್‌ ಆಗಿ ಪಾಕ ಬಾಯ್ಸ್ ಮೂರನೇ ಸ್ಥಾನವನ್ನು ಆರ್‌ಸಿಬಿ ಭಾಗಮಂಡಲ ಪಡೆದುಕೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗಳ ಮಾನ್ಯತೆ ಮತ್ತೊಮ್ಮೆ ಪರಿಶೀಲಿಸಿ: ಸಂಸದ ರಮೇಶ ಜಿಗಜಿಣಗಿ
ಪ್ರತಿಯೊಬ್ಬರಲ್ಲೂ ಸಮಷ್ಠಿ ಪ್ರಜ್ಞೆ ಇರಲಿ