ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಲ್ ಸೀಸನ್-೨ ರಲ್ಲಿ ಮೊದಲ ಪಂದ್ಯಾಟದಲ್ಲಿ ಕೂರ್ಗ್ ವಾರಿಯರ್ಸ್ ತಂಡ ಎಂಸಿಬಿ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಂಸಿಬಿ ತಂಡ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 80 ರನ್ ಕಲೆ ಹಾಕಿ 81 ರನ್ ನ ಟಾರ್ಗೆಟ್ ನೀಡಿತು. ಕೂರ್ಗ್ ವಾರಿಯರ್ ತಂಡದ ಪರವಾಗಿ ಮಿಥುನ್ ಕುದುಕುಳಿ ಅವರು 3 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡರು. ಎಂಸಿಬಿ ಪರವಾಗಿ ಡಾ. ಖುಷ್ವಂತ್ ಕೋಳಿಬೈಲು 29 ರನ್ ಕಲೆ ಹಾಕಿದರು. ಇದನ್ನು ಬೆನ್ನಟ್ಟಿದ ಕೂರ್ಗ್ ವಾರಿಯರ್ಸ್ ತಂಡ 6 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲವಿನ ದಡ ಸೇರಿತ್ತು.
ಕೂರ್ಗ್ ವಾರಿಯರ್ಸ್ ತಂಡದ ಪರವಾಗಿ ಅನಿಲ್ ಕುಡೆಕಲ್ 21 ಎಸೆತದಲ್ಲಿ 53 ರನ್ ಕಲೆ ಹಾಕಿದರು. ಗೋಪಿತ್ 15 ಎಸೆತದಲ್ಲಿ 26 ರನ್ ಕಲೆಹಾಕಿ ಗೆಲವಿನ ದಡ ಸೇರಿಸಿದರು.ದಿನದ ಎರಡನೇ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ 9 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿ ಕಿಂಗ್ಸ್ ಸಿದ್ಲಿಂಗಪುರ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿ 82 ರನ್ ಗಳ ಗುರಿ ನೀಡಿತು.
ಜಿ. ಕಿಂಗ್ಸ್ ಪರ ರಿಷಿ ಬೋಪಣ್ಣ 48 ರನ್ ಕಲೆ ಹಾಕಿ ಅರ್ಧ ಶತಕಕ್ಕೆ ಮೊದಲು ಪುತ್ತೂರು ಲೋಕೇಶ್ ಗೆ ವಿಕೆಟ್ ಒಪ್ಪಿಸಿದರು. ನವೀನ್ 14 ರನ್ ಗಳಿಸಿದರು. ಎಲೈಟ್ ಕ್ರಿಕೆಟ್ ಕ್ಲಬ್ ಪರವಾಗಿ ಶರತ್ ಚೊಕ್ಕಾಡಿ 2 ಓವರಿನಲ್ಲಿ 3 ವಿಕೆಟ್ ಮತ್ತು ಪುತ್ತೂರು ಲೋಕೇಶ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.ನಂತರ ಗುರಿ ಬೆನ್ನಟ್ಟಿದ ಎಲೈಟ್ ಕ್ರಿಕೆಟ್ ಕ್ಲಬ್ 7.4 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿ ಗೆಲವು ಪಡೆದರು. ಎಲೈಟ್ ತಂಡದ ಪರವಾಗಿ ಶರತ್ ಚೊಕ್ಕಾಡಿ 24 ಎಸೆತಕ್ಕೆ 28 ರನ್ ಗಳಿಸಿ ಕೊನೆಯವರೆಗೂ ಕ್ರೀಸಿನಲ್ಲಿದ್ದರು. ಪುತ್ತೂರು ಲೋಕೇಶ್ 11 ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಜೊತೆಗೆ 38 ರನ್ ಗಳಿಸಿ ತಂಡವನ್ನು ಗೆಲವಿನ ದಡ ಸೇರಿಸಿದರು.
ಜಿ. ಕಿಂಗ್ಸ್ ಪರ ಯಾಲದಾಳು ಮದನ್ ಒಂದು ವಿಕೆಟ್ ಪಡೆದರು.ಮೂರನೇ ಪಂದ್ಯದಲ್ಲಿ ಕೂರ್ಗ್ ವಾರಿಯರ್ಸ್ ತಂಡ ಫಿಯೋನಿಕ್ಸ್ ಫ್ಲೈಯರ್ಸ್ ತಂಡದ ವಿರುದ್ಧ 10 ರನ್ ಗಳ ಗೆಲವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ವಾರಿಯರ್ಸ್ ನಿಗದಿತ ೧೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ113 ರನ್ ಗಳಿಸಿತು. ಕುಡೇಕಲ್ಲು ಅನಿಲ್ 51 ರನ್ ಗಳಿಸಿದರು. ಕುಜಲ್ ಕಾರ್ಯಪ್ಪ 32 ರನ್ ಗಳಸಿದರು. ಫೀನಿಕ್ಸ್ ತಂಡದ ಪರ ಚಂದನ್ ರಾಜ್ ಬೇಕಲ್ ೩ ವಿಕೆಟ್ ಕಬಳಿಸಿದರು.
ಗುರಿ ಬೆನ್ನತ್ತಿದ ಫೀನಿಕ್ಸ್ ತಂಡ ನಿಗದಿತ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 103 ರನ್ ಗಳಿಸಲಷ್ಟೇ ಸಾಧ್ಯವಾಯಿತು. ತಂಡದ ಪರ ಚಂದನ್ ರಾಜ್ ಬೇಕಲ್ 35 ರನ್ ಗಳಸಿದರು.....................ಎರಡು ಅರ್ಧ ಶತಕ ಬಾರಿಸಿದ ಅನಿಲ್
ಕೂರ್ಗ ವಾರಿಯರ್ಸ್ ತಂಡದ ಅನಿಲ್ ಕುಡೇಕಲ್ಲು ಸತತ ಎರಡು ಅರ್ಧ ಶತಕಗಳನ್ನು ತಮ್ಮದಾಗಿಸಿಕೊಂಡರು. ಮೊದಲ ಪಂದ್ಯದಲ್ಲಿ ಎಂಸಿಬಿ ತಂಡದ ವಿರುದ್ಧ ಅರ್ಧ ಶತಕ ಗಳಿಸಿದ 53 (21) 8 ಫೋರ್, 2 ಸಿಕ್ಸರ್ ಬಾರಿಸಿದರು. ಎರಡನೇ ಅರ್ಧ ಶತಕ ಫಿಯೋನಿಕ್ಸ್ ಫ್ಲೈಯರ್ಸ್ ತಂಡದ ಎದುರು ಬಂದಿತು. ೨೪ ಎಸೆತದಲ್ಲಿ ೫೧ ರನ್. ೭ ಬೌಂಡರಿ, ೨ ಸಿಕ್ಸರ್ ಬಾರಿಸಿದರು.................
ಇಂದಿನ ಪಂದ್ಯಬೆಳಗ್ಗೆ 8.45: ಎಂಸಿಬಿ - ಫಿಯೋನಿಕ್ಸ್ ಫ್ಲೈಯರ್ಸ್
ಬೆಳಗ್ಗೆ 11.00: ಕೂರ್ಗ್ ವಾರಿಯರ್ಸ್ - ಜಿ. ಕಿಂಗ್ಸ್ಮಧ್ಯಾಹ್ನ 1.00: ಎಂಸಿಬಿ - ಎಲೈಟ್