ಕನ್ನಡ ಪ್ರಭ ವಾರ್ತೆ ಮುಧೋಳ
ಪದವಿ ಶಿಕ್ಷಣವೆಂಬುವುದು ಜೀವನದ ಅತ್ಯಂತ ಪ್ರಮುಖ ಘಟ್ಟ. ಆದ ಕಾರಣ ತಾವು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಯ ಜೀವನವು ಬಂಗಾರದಂತೆ ರೂಪಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಶೋಕ ಐ. ಗಂಗನ್ನವರ ತಿಳಿಸಿದರು.ಮುಧೋಳ ಮೇತ್ರಿ ಫೌಂಡೇಶನ್‌ದ ಸ್ಯಾಮುವೆಲ್ ವಾಣಿಜ್ಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಉದ್ಘಾಟನೆ ಹಾಗೂ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿ ಸ್ಥಾನವಹಿಸಿದ್ದ ತಾಲೂಕಿನ ನಾಗರಾಳದ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ದ ಉಪನ್ಯಾಸಕ ಜಿ.ಎಚ್.ಬಡಿಗೇರ ಮಾತನಾಡಿ, ಇಂದಿನ ದಿನಮಾನದಲ್ಲಿ ವಾಣಿಜ್ಯ ವಿಭಾಗವು ಸರ್ವ ಕ್ಷೇತ್ರಗಳ ರೂವಾರಿಯಾಗಿದೆ. ನಿರ್ವಹಣಾ ಮೂರ್ತಿಯೆಂದು ಕರೆಸಿಕೊಂಡಿದ್ದು ಆದ ಕಾರಣ ವಿದ್ಯಾರ್ಥಿಗಳು ಈ ವಿಭಾಗವನ್ನು ಆಯ್ಕೆಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಮೇತ್ರಿ ಫೌಂಡೇಶನ್ ಅಧ್ಯಕ್ಷ ಹಾಗೂ ಪ್ರಾಚಾರ್ಯ ಸಿ.ಎಂ.ಮೇತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಗುಣಾತ್ಮಕ ಶಿಕ್ಷಣ ಹಾಗೂ ಶಿಸ್ತಿನ ಅವಶ್ಯಕತೆಯೊಂದಿಗೆ ತಂತ್ರಜ್ಞಾನದ ಮೂಲಕ ಜ್ಞಾನವನ್ನು ರೂಪರಿಸಲು ಬೇಕಾಗುವ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯೂ ಸದಾಕಾಲ ಒದಗಿಸುತ್ತದೆ. ಅವುಗಳನ್ನು ತಾವುಗಳು ಸದುಪಯೋಗ ಪಡೆದುಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ಮೇತ್ರಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪೂಜಾ ಪಾಟೀಲ ಉಪಸ್ಥಿತರಿದ್ದರು.
ಸೃಷ್ಟಿ ಕಡಗದ ಸ್ವಾಗತಿಸಿದರು. ಪೂಜಾ ಪಾಟೀಲ ಪರಿಚಯಿಸಿದರು. ಸುಷ್ಮಾ ಹಾಗೂ ಶಗುಪ್ತ ಪ್ರಾರ್ಥನೆ ಗೀತೆ ಹಾಡಿದರು. ರುಚಿತಾ ಪಾಟೀಲ ಸ್ವಾಗತ ನೃತ್ಯಮಾಡಿದರು. ದಾನಮ್ಮ ಡುಮಕಿ ಮಠ ವಂದಿಸಿದರು. ಐಶ್ವರ್ಯ ಹಾಗೂ ತೇಜಸ್ವಿನಿ ದಡ್ಡಿ ನಿರೂಪಿಸಿದರು.