ಕನ್ನಡಪ್ರಭ ವಾರ್ತೆ ಮೈಸೂರು
ಈ ಕಾರ್ಯಕ್ರಮ ಉದ್ಘಾಟಿಸಿದ ವೃತ್ ಇಂಡಸ್ಟ್ರೀಸ್ ಮಾನವ ಸಂಪನ್ಮೂಲ ವಿಭಾಗದ ನಿವೃತ್ತ ಮುಖ್ಯಸ್ಥ ಗೋಪಾಲಕೃಷ್ಣ ಶಾಸ್ತ್ರಿ ಮಾತನಾಡಿ, ಪುಸ್ತಕದ ಜ್ಞಾನದ ಜೊತೆಗೆ ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯಗಳ ಮಹತ್ವ ಮತ್ತು ವೃತ್ತಿಗಳ ಬಗೆಗಿನ ಜ್ಞಾನವು ಅಗತ್ಯವಾಗಿದೆ. ಹಾಗಾದರೆ ಮಾತ್ರವೇ ಇಂದಿನ ಮಾರುಕಟ್ಟೆಯ ಪ್ರಪಂಚದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ವೃತ್ತಿ ಗುರಿಯನ್ನು ಸಾಧಿಸಲು ಜೀವನದಲ್ಲಿ ಹಲವಾರು ಅಡೆತಡೆಗಳು ಮತ್ತು ಸವಾಲುಗಳು ಸಾಮಾನ್ಯವಾಗಿ ಬರುತ್ತವೆ. ಅವುಗಳಿಗೆ ಅಂಜದೆ ಛಲದಿಂದ ಸಾಧಿಸುವಡೆಗೆ ಮಾತ್ರವೇ ನಮ್ಮ ಗಮನ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ಕೇವಲ ಎಂಜಿನಿಯರ್ ಮತ್ತು ವೈದ್ಯರು ವೃತ್ತಿಗಳಷ್ಟೇ ಅಲ್ಲ ಎಲ್ಲಾ ರೀತಿಯ ಕೌಶಲ್ಯಗಳಿಗೂ ಜಾಗತಿಕ ಮಾರುಕಟ್ಟೆಯ ಮೌಲ್ಯವಿದೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಸೃಷ್ಟಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ತರಬೇತಿಯ ಮೂಲಕ ಉತ್ತಮ ಗುರಿಯನ್ನು ಪ್ರೌಢಶಾಲಾ ಹಂತದಲ್ಲಿ ಹೊಂದಬೇಕು ಎಂದು ತಿಳಿಸಿದರು.