ಗ್ರಾಮಾಭಿವೃದ್ಧಿಯಲ್ಲಿ ಗ್ರಾಮಸಭೆ ನಿರ್ಣಯವೇ ಅಂತಿಮ: ಪ್ರಮೋದ ಹೆಗಡೆ

KannadaprabhaNewsNetwork |  
Published : Feb 10, 2025, 01:47 AM IST
ಪ್ರಮೋದ ಹೆಗಡೆ  | Kannada Prabha

ಸಾರಾಂಶ

ಜನಸಾಮಾನ್ಯರಿಗಾಗಿ ರೂಪುಗೊಂಡಿರುವ ಕಾನೂನಿನಿಂದ ಗ್ರಾಮಸಭೆಗಳು ಸಂಪೂರ್ಣ ಸ್ವಾಯತ್ತವಾಗಿ ಕಾರ್ಯನಿರ್ವಹಿಸುವಂತಾಗಿವೆ.

ಯಲ್ಲಾಪುರ: ಗ್ರಾಮಾಭಿವೃದ್ಧಿಯ ಸದುದ್ದೇಶದಿಂದ ಗ್ರಾಮಸಭೆಗಳಲ್ಲಿ ಕೈಗೊಳ್ಳುವ ನಿರ್ಣಯವೇ ಅಂತಿಮವಾಗಲಿದೆ ಎಂದು ಪಂಚಾಯತ ರಾಜ್ ವಿಕೇಂದ್ರೀಕರಣ ಮತ್ತು ಗ್ರಾಮಾಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.ಫೆ.೯ರಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಾಗಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಚುರಪಡಿಸಿ ಮಾತನಾಡಿ,

ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ನಜೀರ್‌ಸಾಬ್‌ರ ನೇತೃತ್ವದಲ್ಲಿ ೧೯೮೩ರಲ್ಲಿ ಅನುಷ್ಠಾನಗೊಳಿಸಿದ್ದ ಜಿಲ್ಲಾ ಪರಿಷತ್ತಿನ ಗ್ರಾಮ ಸ್ವರಾಜ್ಯದ ನೂತನ ಪರಿಕಲ್ಪನೆಗೆ ಆಕರ್ಷಿತರಾಗಿ ಪ್ರಧಾನಿಯಾಗಿದ್ದ ರಾಜೀವ ಗಾಂಧಿ ಮತ್ತು ನರಸಿಂಹ ರಾವ್ ಜಾರಿಗೊಳಿಸಿದ ಸಂವಿಧಾನ ತಿದ್ದುಪಡಿಯ ನಂತರವೂ ವಿಕೇಂದ್ರೀಕರಣದ ಯಾವ ಲಕ್ಷಣವೂ ರೂಪುಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಎಚ್.ಕೆ. ಪಾಟೀಲ ಅವರು ಇದೀಗ ಸರ್ಕಾರ ಗ್ರಾಮ ಸರ್ಕಾರವಾಗಿ ಪರಿವರ್ತನೆಗೊಂಡು ಉಪಯುಕ್ತ ಕ್ರಾಂತಿಯ ಹೊಸ್ತಿಲಲ್ಲಿದೆ ಎಂದರು. ಜನಸಾಮಾನ್ಯರಿಗಾಗಿ ರೂಪುಗೊಂಡಿರುವ ಕಾನೂನಿನಿಂದ ಗ್ರಾಮಸಭೆಗಳು ಸಂಪೂರ್ಣ ಸ್ವಾಯತ್ತವಾಗಿ ಕಾರ್ಯನಿರ್ವಹಿಸುವಂತಾಗಿವೆ ಎಂದರು.ಇದುವರೆಗಿನ ವ್ಯವಸ್ಥೆ ಮೇಲ್ಮಟ್ಟದಿಂದ ಪ್ರಾರಂಭಗೊಂಡು ತಳಮಟ್ಟಕ್ಕೆ ತಲುಪುತ್ತಿತ್ತು. ಆದರೆ ಬದಲಾದ ವಿಕೇಂದ್ರೀಕರಣ ವ್ಯವಸ್ಥೆಯ ಮೂಲಕ ಗ್ರಾಮಮಟ್ಟದಿಂದ ಕೇಂದ್ರದವರೆಗೆ ತಲುಪುವ ವ್ಯವಸ್ಥೆ ಗಟ್ಟಿಗೊಳ್ಳುತ್ತಾ ಸಾಗಿದೆ. ಅದರ ಫಲವೇ ಅಮೆಂಡ್‌ಮೆಂಟ್ ೩ಇ. ಪ್ರತಿ ಗ್ರಾಮ ಪಂಚಾಯಿತಿ ಸಭೆಗಳೇ ಸರ್ಕಾರಗಳಾಗಿ ರೂಪುಗೊಂಡು ಸ್ವಂತ ನಿರ್ಣಯವನ್ನು ಕೈಗೊಳ್ಳುವ ಶಕ್ತಿ ಈ ಕಾನೂನಿಂದ ಸಾಧ್ಯವಾಗಲಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಅಮೂಲಾಗ್ರ ಬದಲಾವಣೆಯಾಗಿದ್ದು, ಭವಿಷ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಹೊಸ ಅರ್ಥ ಬರಲಿದೆ ಎಂದರು.ಈ ಸಾರ್ಥಕ ಕಾಯಕದಲ್ಲಿ ನನ್ನೊಂದಿಗೆ ತಜ್ಞರಾದ ಬಿ.ಆರ್. ಪಾಟೀಲ, ನಾರಾಯಣ ಸ್ವಾಮಿ, ಘೋರ್ಪಡೆ, ಸತೀಶ ಕಾಡಶೆಟ್ಟಿಹಳ್ಳಿ ಕೈಜೋಡಿಸಿದ್ದು ಯಶಸ್ಸಿಗೆ ಕಾರಣರಾಗಿದ್ದಾರೆ. ದೂರದೃಷ್ಟಿ ಯೋಜನೆ ಜಾರಿಗೊಂಡು ಕರ್ನಾಟಕಕ್ಕೆ ಸುವರ್ಣಕಾಲ ಸನ್ನಿಹಿತವಾಗಲಿದೆ ಎಂದರು.ಗ್ರಾಪಂ ಸಿಬ್ಬಂದಿ ಮೇಲೆ ಹಲ್ಲೆ: ದೂರು ದಾಖಲು

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ(ಕರ ವಸೂಲಿಗಾರ) ಸ್ಥಳೀಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಬಗ್ಗೆ ಕಳೆದ ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಖರ್ವಾ ಗ್ರಾಪಂ ಸಿಬ್ಬಂದಿ ಖರ್ವಾ ಕೊರೆಯ ನಾರಾಯಣ ಅಮಕೂಸ ಗೌಡ ಅವರು ಗ್ರಾಪಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ತನುಜಕುಮಾರ ಗಣಪತಿ ನಾಯ್ಕ ಎಂಬವರು ಅವಾಚ್ಯ ಶಬ್ದದಿಂದ ನಿಂದಿಸಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾರಾಯಣ ಅಮಕೂಸ ಗೌಡ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ