ಗ್ರಾಮ ಸಭಾಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು

KannadaprabhaNewsNetwork |  
Published : Feb 02, 2025, 11:45 PM IST
ತುಮಕೂರು ಜಿಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ವತಿಯಿಂದ ನಡೆದ ಪಂಚಾಯತ್‌ ರಾಜ್‌ ಕಾರ್ಯಕರ್ತರ ಅಧ್ಯಯನ ಶಿಬಿರವನ್ನು  ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಉದ್ಘಾಟಿಸಿದರು. ಜಿಲ್ಲಾದ್ಯಕ್ಷ ದೊಡ್ಡೇರಿ ವಿಜಯಕುಮಾರ್ , ಪದಾಧಿಕಾರಿಗಳಾದ ಆಯಿಶಾ , ಸಲಹೆಗಾರರಾದ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಗ್ರಾಮ ಪಂಚಾಯತಿಗಳು ಗ್ರಾಮ ಸಭಾದ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಮೂಲಕ ಜನರ ಕೈಗೆ ಅಧಿಕಾರ ನೀಡಬೇಕು ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಬೇಕು ಎಂದು ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಗ್ರಾಮ ಪಂಚಾಯತಿಗಳು ಗ್ರಾಮ ಸಭಾದ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಮೂಲಕ ಜನರ ಕೈಗೆ ಅಧಿಕಾರ ನೀಡಬೇಕು ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸಬೇಕು ಎಂದು ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.ಅವರು ತುಮಕೂರು ನಗರದ ಅನನ್ಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಲ್ಲೆಯ ಗ್ರಾಮ ಪಂಚಾಯತಿ ಸದಸ್ಯರಿಗೆ ಆಯೋಜಿಸಿದ್ದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಮಹಾತ್ಮ ಗಾಂಧಿಯವರ ಆಶಯ ಅಂಬೇಡ್ಕರ್ ಕನಸು ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಅಡಗಿದೆ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಜಾರಿಮಾಡುವ ಜವಾಬ್ದಾರಿ ಸ್ಥಳೀಯ ಜನಪ್ರತಿನಿಗಳ ಮೇಲಿದೆ. ಅದಕ್ಕಾಗಿ ಇಂತಹ ಅದ್ಯಯನ ಶಿಬಿರ ಅಗತ್ಯವಿದೆ ಎಂದರು. ಗ್ರಾಮ ಸಭಾದ ಸಭೆಯಂದರೆ ಜನರ ಬೇಡಿಕೆಗಳನ್ನು ಪಟ್ಟಿಮಾಡುವ ಸಮಾರಂಭವಲ್ಲ. ಅದು ರಾಜ್ಯದ ವಿಧಾನ ಸಭೆಯ ಹಾಗೆ ಹಳ್ಳಿಯ ವಿಧಾನ ಸಭೆ. ಹಳ್ಳಿಯ ಎಲ್ಲಾ ಮತದಾರರೂ ಆ ಸಭಾದ ಸದಸ್ಯರು. ಗ್ರಾಮ ಸಭಾವು ತಮ್ಮ ಗ್ರಾಮದ ಅಭಿವೃದ್ಧಿ ಯೋಜನೆಯ ತಯಾರಿಕೆ, ಅನುಷ್ಠಾನ, ಮೇಲುಸ್ತುವಾರಿ ಹಾಗೂ ಮೌಲ್ಯಮಾಪನ ಮಾಡುವ ಅಧಿಕಾರ ಹೊಂದಿದೆ. ಗ್ರಾಮ ಸಭಾದ ನಿರ್ಣಯ ಗಳಿಗೆ ಎಲ್ಲಾ ಹಂತದ ಸರ್ಕಾರಗಳು ಬದ್ಧವಾಗಿರಬೇಕು, ನಿರ್ಣಯವನ್ನು ಬದಲಿಸುವ ಅಧಿಕಾರ ಆ ಗ್ರಾಮ ಸಭಾಗೆ ಹೊರತಾಗಿ ಯಾರಿಗೂ ಇಲ್ಲ ಎಂದು ತಿಳಿಸಿದರು. ಶಿಬಿರದಲ್ಲಿ ಮಾತನಾಡಿದ ಜಿಲ್ಲಾ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ದೊಡ್ಡೇರಿ ವಿಜಯಕುಮಾರ್ ಮಹಾ ಒಕ್ಕೂಟದ ಹೋರಾಟದ ಕಾರಣದಿಂದಾಗಿ ಗ್ರಾಮ ಸಭೆ ನಿಯಮಗಳನ್ನು ರಾಜ್ಯ ಸರ್ಕಾರ ರೂಪಿಸಿದೆ. ನಿಯಮಾನುಸಾರ ಗ್ರಾಮ ಸಭೆಗಳನ್ನು ನಡೆಸುವ ಮೂಲಕ, ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಹಾಗೂ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳ ಆಯ್ಕೆಯನ್ನು ಗ್ರಾಮ ಸಭಾದ ಸಭೆಗಳಲ್ಲಿ ಮಾಡುವ ಮೂಲಕ , ಯೊಜನೆಗಳನ್ನು ರೂಪಿಸುವ ಮೂಲಕ ಜನಾಡಳಿತವನ್ನು ರಾಜ್ಯದಲ್ಲಿ ಸಾಕಾರಗೊಳಿಸೋಣ ಎಂದು ತಿಳಿಸಿದರು. ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌