ನಾಳೆ ಕಲಬುರಗಿಯಲ್ಲಿ ಗ್ರಾಮ ವಿಕಾಸ ಸಂಭ್ರಮ

KannadaprabhaNewsNetwork |  
Published : Nov 14, 2026, 01:15 AM IST
ಫೋಟೋ- ಪಿಡಿಒ ಪಿಡಿಒ ಪಿಡಿಒಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದಿಂದ ಅಧ್ಯಕ್ಷ ರಮೇಶ ನಡಗೇರಿ, ಉಪಾಧ್ಯಕ್ಷೆ (ಮಹಿಳಾ ಘಕ) ರಾಜೇಶ್ವರಿ ಸಾಹು ಹಾಗೂ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಬಾಕಿ ಇರುವ ಎಲ್ಲ 3,827 ಹುದ್ದೆಗಳ ಏಕಕಾಲದ ಉನ್ನತೀಕರಣಕ್ಕಾಗಿ ವಿಳಂಬವಿಲ್ಲದೆ ಏಕಕಾಲಕ್ಕೆ ಗ್ರೂಪ್ ''''ಬಿ'''' (ಗೆಜೆಟೆಡ್) ವೃಂದಕ್ಕೆ ಮೇಲ್ದರ್ಜೆಗೇರಿಸಿ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಬೇಕು ಎಂದು ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದಲ್ಲಿ ಬಾಕಿ ಇರುವ ಎಲ್ಲ 3,827 ಹುದ್ದೆಗಳ ಏಕಕಾಲದ ಉನ್ನತೀಕರಣಕ್ಕಾಗಿ ವಿಳಂಬವಿಲ್ಲದೆ ಏಕಕಾಲಕ್ಕೆ ಗ್ರೂಪ್ ''''''''ಬಿ'''''''' (ಗೆಜೆಟೆಡ್) ವೃಂದಕ್ಕೆ ಮೇಲ್ದರ್ಜೆಗೇರಿಸಿ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಬೇಕು ಎಂದು ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘ ಆಗ್ರಹಿಸಿದೆ.

ಇದೇ ವಿಷಯ ಮುಂದಿಟ್ಟುಕೊಂಡು ಪಿಡಿಒ ಸಂಘಟನೆಯಿಂದಲೇ ಗ್ರಾಮ ವಿಕಾಸ ಸಂಗಮ- 2026 ಎಂಬ ವಿನೂತನ ಸಮಾವೇಶ ಕಲಬುರಗಿಯಲ್ಲಿ ನ.15ರಂದು ಆಯೋಜಿಸಲಾಗಿದ್ದು ಸಚಿವರು, ಶಾಸಕರೆಲ್ಲರನ್ನೂ ಆಹ್ವಾನಿಸಲಾಗುತ್ತಿದೆ ಎಂದು ಪಿಡಿಒಗಳ ಸಂಘದ ರಾಜ್ಯಾಧ್ಯಕ್ಷ ರಮೇಶ ನಡಿಗೇರಿ, ರಾಜ್ಯ ಉಪಾಧ್ಯಕ್ಷೆ (ಮಹಿಳಾ ಘಟಕ) ರಾಜೇಶ್ವರಿ ಸಾಹು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ನರೇಗಾ, ಕೆಟಿಪಿಪಿ ಕಾಯ್ದೆ, ಆರ್ಥಿಕ ಮತ್ತು ಖಜಾನೆ ಸಂಹಿತೆ, ಜನನ-ಮರಣ ಹಾಗೂ ವಿವಾಹ ನೋಂದಣಿ, ಮಾಹಿತಿ ಹಕ್ಕು, ವಿಪತ್ತು ನಿರ್ವಹಣೆ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ 19ಕ್ಕೂ ಹೆಚ್ಚು ಶಾಸನಬದ್ಧ ಕಾಯ್ದೆಗಳನ್ನು ಹಾಗೂ ವಾರ್ಷಿಕ ಕೋಟ್ಯಂತರ ರುಪಾಯಿ ಅನುದಾನವನ್ನು ತಳಮಟ್ಟದಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಪಿಡಿಒಗಳಿಗೆ ಜವಾಬ್ದಾರಿಗೆ ತಕ್ಕ ಸ್ಥಾನಮಾನ ಸಿಗಬೇಕಿದೆ ಎಂದೂ ರಮೇಶ ನಡಿಗೇರಿ, ರಾಜೇಶ್ವರಿ ಸಾಹು ಹೇಳಿದರು.

*ಬಾಕಿ ಉಳಿದ 3, 827 ಪಿಡಿಒ ಹುದ್ದೆ ಉನ್ನತೀಕರಿಸಿ: ರಾಜ್ಯದಲ್ಲಿ ಮಂಜೂರಾದ ಒಟ್ಟು 6,021 ಪಿಡಿಒ ಹುದ್ದೆಗಳ ಪೈಕಿ ಈಗಾಗಲೇ 1,500 ಹುದ್ದೆಗಳಿಗೆ ''''''''ಬಿ-ಗ್ರೇಡ್'''''''' ಆದೇಶವಾಗಿದ್ದು, 694 ಹುದ್ದೆಗಳ ಬಗ್ಗೆ ಸಚಿವರು ಘೋಷಿಸಿದ್ದಾರೆ. ಉಳಿದಂತೆ ಪ್ರಸ್ತುತ ಬಾಕಿ ಇರುವ ಎಲ್ಲ 3,827 ಪಿಡಿಒ ಹುದ್ದೆಗಳನ್ನು ಉನ್ನತಿರಕರಿಸಿ ಆದೇಶ ಮಾಡಬೇಕಿದೆ ಎಂದರು.

ಬಾಕಿ ಇರುವ ಎಲ್ಲಾ 3,827 ಹುದ್ದೆಗಳ ಏಕಕಾಲದ ಉನ್ನತೀಕರಣದ ಕಡತ 2017ರಲ್ಲಿ ಅಂತಿಮ ಹಂತಕ್ಕೆ ತಲುಪಿದ್ದರೂ ಚುನಾವಣಾ ನೀತಿ ಸಂಹಿತೆ ಹಾಗೂ ಸರ್ಕಾರದ ಅವಧಿ ಮುಕ್ತಾಯದ ಕಾರಣ ನೆಪಥ್ಯಕ್ಕೆ ಸರಿದಿದ್ದ ಉನ್ನತೀಕರಣದ ಕಡತ ತಕ್ಷಣ ಮರುಪರಿಶೀಲಿಸಿ, ಶೀಘ್ರವೇ ಅಧಿಕೃತ ಆದೇಶ ನೀಡಬೇಕು ಎಂದೂ ಅವರು ಒತ್ತಾಯಿಸಿದರು.

*ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆಯಿಲ್ಲ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಅಧಿಕಾರಿಗಳು ಹಲವು ವರ್ಷಗಳ ಸೇವೆಯಿಂದಾಗಿ ಈಗಾಗಲೇ ಹೆಚ್ಚಿನ ಮೂಲ ವೇತನ ಪಡೆಯುತ್ತಿದ್ದಾರೆ. ಆದ್ದರಿಂದ ಅವರನ್ನು ಗ್ರೂಪ್ ''''''''ಬಿ'''''''' ವೃಂದಕ್ಕೆ ಉನ್ನತೀಕರಿಸುವುದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ.

ಜ್ಯೇಷ್ಠತಾ ಪಟ್ಟಿಯ ನ್ಯಾಯಾಲಯ ವ್ಯಾಜ್ಯಗಳಿಂದಾಗಿ 15 ವರ್ಷಗಳಿಂದ ಪಿಡಿಒಗಳಿಗೆ ಯಾವುದೇ ಮುಂಬಡ್ತಿ ಸಿಗದೆ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಡ್ತಿಯಿಲ್ಲದೆ ತೀವ್ರ ಮಾನಸಿಕ ವೇದನೆ ಹಾಗೂ ಹತಾಶೆ ಅನುಭವಿಸುತ್ತಿರುವ ಅಧಿಕಾರಿಗಳಿಗೆ ಈ ಹುದ್ದೆ ಉನ್ನತೀಕರಣವೇ ಏಕೈಕ ಪರಿಹಾರ ಎಂದು ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ ಸಾಹು ಹೇಳಿದರು.

ನಾಳೆ ಕಲಬುರಗಿಯಲ್ಲಿ ಸಮಾವೇಶ: ದಶಕಗಳ ಬೇಡಿಕೆ ಈಡೇರಿಸಲು ಹಾಗೂ ನಮ್ಮ ಕೆಲಸದ ಹಲವು ವಿಷಯಗಳನ್ನು ಚರ್ಚಿಸಲೆಂದೇ ನ. 15ರಂದು ಪಿಡಿಒಗಳ ರಾಜ್ಯಮಟ್ಟದ ಗ್ರಾಮ ವಿಕಾಸ ಸಂಗಮ-2026 ಸಮಾವೇಶ ಆಳಂದ ಸ್ತೆಯ ಎಸ್‌ಬಿ ಕನ್ವೇಷನ್‌ ಹಾಲ್‌ನಲ್ಲಿ ಬೆ. 11ರಿಂದ ಇಡೀ ದಿನ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಆರ್‌ಡಿಪಿಆರ್‌ ಮಂತ್ರಿಗಳನ್ನು ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಟ್ಟು ಈಡೇರಿಸಲು ಕೋರುತ್ತೇವೆ. ಗ್ರಾಮೀಣಾಡಳಿತದ ನೌಕರರ ಈ ನ್ಯಾಯಯುತ ಬೇಡಿಕೆ ಬೇಗ ಈಡೇರಿಸುವ ಭರವಸೆ ತಮಗಿದೆ ಎಂದು ರಮೇಶ ನಡಗೇರಿ ಹಾಗೂ ರಾಜೇಶ್ವರಿ ಸಾಹು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ