ಐದು ಹೊರವಾರಗಳ ನಂತರ ಜಾತ್ರೆಗೂ ಮುನ್ನ ವಿಶೇಷ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಫೆ. 18ರಂದು ದೇವಿಗೆ ಬಣ್ಣಕ್ಕೆ ಕೊಡುವುದು, ಬಳಿಕ ಪ್ರತಿಷ್ಠಾಪಿಸಿ ತವರಮನೆಯಾದ ಪಕ್ಕದ ಗ್ರಾಮವಾದ ದಾಸ್ತಿಕೊಪ್ಪಕ್ಕೆ ಕಳಿಸಲಾಗುತ್ತದೆ.
ಕಲಘಟಗಿ:
ಪಟ್ಟಣದಲ್ಲಿ 3 ವರ್ಷಗಳಿಗೊಮ್ಮೆ ನಡೆಯುವ ಉತ್ತರ ಕರ್ನಾಟಕದ ಸುಪ್ರಸಿದ್ಧ ಜಾತ್ರೆಯಲ್ಲೊಂದಾದ ಪಟ್ಟಣದ ಶ್ರೀಗ್ರಾಮದೇವಿಯರ ಜಾತ್ರೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಜಾತ್ರೆ ಆರಂಭಕ್ಕೂ ಮುನ್ನ 5 ಹೊರವಾರ ಆಚರಿಸುವ ಪದ್ಧತಿ ದಶಕಗಳ ಹಿಂದೆಯೇ ರೂಢಿಯಲ್ಲಿದ್ದು, ಈ ಹೊರವಾರಗಳನ್ನು ಐದು ಊರುಗಳ ಭಕ್ತರು ಅತ್ಯಂತ ಭಕ್ತಿಯಿಂದ ಹಾಗೂ ಕಟ್ಟು ನಿಟ್ಟಾಗಿ ಆಚರಿಸಿದರು. ಐದು ಹೊರವಾರಗಳ ನಂತರ ಜಾತ್ರೆಗೂ ಮುನ್ನ ವಿಶೇಷ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಫೆ. 18ರಂದು ದೇವಿಗೆ ಬಣ್ಣಕ್ಕೆ ಕೊಡುವುದು, ಬಳಿಕ ಪ್ರತಿಷ್ಠಾಪಿಸಿ ತವರಮನೆಯಾದ ಪಕ್ಕದ ಗ್ರಾಮವಾದ ದಾಸ್ತಿಕೊಪ್ಪಕ್ಕೆ ಕಳಿಸಲಾಗುತ್ತದೆ. ಅವರು ದೇವಿಗೆ ಮಂಗಳಸೂತ್ರ, ಬಾಗೀನವನ್ನು ವಧುವಿನ ಮನೆಯವರು ತರುವ ಪದ್ಧತಿಯಿದೆ. ವರನ ಕಡೆಯವರನ್ನು ಊರ ಬಾಗಿಲಿನಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಿ, ಫೆ. 24ರಂದು ದೇವಸ್ಥಾನದಲ್ಲಿ ಕಳಾಕರ್ಷಣ, ಪುಣ್ಯಾಹವಾಚನ, ಕುಮಾರಿಕಾ ಪೂಜೆ ಪುರ್ಣಾಹುತಿ, ಮಂಗಳಸೂತ್ರ ಧಾರಣೆ ಮಾಡಿಸಿ ದೇವಿಯರಿಗೆ ಮಹಾಮಂಗಳಾರತಿ ಮಾಡಲಾಗುತ್ತದೆ. ಫೆ. 25ರಂದು ಭವ್ಯ ಮೆರವಣಿಗೆಯೊಂದಿಗೆ ಪಟ್ಟಣದ ಚೌತಮನಿಕಟ್ಟಿಗೆ ಪ್ರತಿಷ್ಠಾಪಿಸುವ ಮೂಲಕ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ.
ಜಾತ್ರೆಯ 9 ದಿನಗಳಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಪ್ರಸಿದ್ಧ ಕಲಾವಿದರು, ಸಂಗೀತ, ನೃತ್ಯ, ಜಾನಪದ, ದೊಡ್ಡಾಟಗಳನ್ನು ಪ್ರದರ್ಶನಕ್ಕೆ ಜಾತ್ರಾ ಕಮಿಟಿಯಿಂದ ವೇದಿಕೆ ಕಲ್ಪಸಲಾಗಿದೆ. ಊಡಿ ತುಂಬುವ ಕಾರ್ಯಕ್ರಮ, ಸಂಜೆ ಅಷ್ಠಾವಧಾನ ಮಂತ್ರಪುಷ್ಪ ನೆರವೇರಿಸಲಾಗುತ್ತದೆ. 9ನೇ ದಿನ ಬೆಳಗ್ಗೆ ಪೂಜೆ-ಪುನಸ್ಕಾರಗಳ ನಂತರ ಸಂಜೆ ದೇವಿಯರ ವಿಸರ್ಜನಾ ಕಾಯಕ್ರಮದೊಂದಿಗೆ ಜಾತ್ರಾ ಕಾರ್ಯಕ್ರಮ ಸಂಪನ್ನಗೊಳಿಸಲಾಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.