ಗ್ರಾಪಂ ಗಣಕಯಂತ್ರ ನಿರ್ವಾಹಕರ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Dec 28, 2025, 03:45 AM IST
26ಕೆಪಿಎಲ್21 ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಆಯೋಜಿಸಿದ್ದ ಕಂಪ್ಯೂಟರ್ ಆಪರೇಟರ್ ದಿನಾಚರಣೆ | Kannada Prabha

ಸಾರಾಂಶ

ಕಂಪ್ಯೂಟರ್‌ ಪಿತಾಮಹ ಚಾರ್ಲ್ಸ್‌ ಬ್ಯಾಬೇಜ್‌ ಕಂಪ್ಯೂಟರ್‌ ಕಂಡು ಹಿಡಿದ ಪರಿಣಾಮ ಎಲ್ಲ ಇಲಾಖೆಗಳಲ್ಲಿ ಮಾಹಿತಿಯು ಗಣಕೀಕರಣವಾಗಿರುವರಿಂದ ಇಲಾಖೆಯ ಸೇವೆಗಳ ಮಾಹಿತಿ

ಕೊಪ್ಪಳ: ಪ್ರಸಕ್ತ ಎಲ್ಲ ಸೇವೆಗಳು ಗಣಕಿಕೃತವಾಗಿರುವದರಿಂದ ಗ್ರಾಪಂ ಆಪರೇಟರ್‌ ಪಾತ್ರ ಶ್ಲಾಘನೀಯವಾಗಿದೆ ಎಂದು ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹೇಳಿದ್ದಾರೆ.

ಕೊಪ್ಪಳ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಕಂಪ್ಯೂಟರ್‌ ಪಿತಾಮಹ ಚಾರ್ಲ್ಸ್‌ ಬ್ಯಾಬೇಜ್‌ ಕಂಪ್ಯೂಟರ್‌ ಕಂಡು ಹಿಡಿದ ಪರಿಣಾಮ ಎಲ್ಲ ಇಲಾಖೆಗಳಲ್ಲಿ ಮಾಹಿತಿಯು ಗಣಕೀಕರಣವಾಗಿರುವರಿಂದ ಇಲಾಖೆಯ ಸೇವೆಗಳ ಮಾಹಿತಿ, ಜಗತ್ತಿನ ಬಗ್ಗೆ ಮಾಹಿತಿ ನಾವು ಒಂದು ಕ್ಷಣದಲ್ಲಿ ಪಡೆಯಬಹುದಾಗಿದೆ ಎಂದರು.

ಗ್ರಾಪಂ ಎಲ್ಲ ಸೇವೆಗಳು ಆನ್‌ ಲೈನ್‌ ಇರುವದರಿಂದ ಗ್ರಾಪಂಯಿಂದ ಸಾರ್ವಜನಿಕರಿಗೆ ಹಲವಾರು ಸೇವೆಗಳು ಸಕಾಲದಲ್ಲಿ ದೊರೆಯುತ್ತಿವೆ.ಈ ಮುಂಚೆ ಗ್ರಾಪಂ ಕೈ ಬರವಣಿಗೆಯ ರೂಪದಲ್ಲಿ ದಾಖಲಾತಿಗಳು ಲಭ್ಯವಿದ್ದವು. ಮಹಾತ್ಮ ಗಾಂಧಿ ನರೇಗಾ ಯೋಜನೆ ಜಾರಿಯಾದಾಗಿನಿಂದ ಪ್ರತಿ ಗ್ರಾಪಂ ಕಂಪ್ಯೂಟರ್‌ ಆಪರೇಟರ್ ಹುದ್ದೆ ಅವಶ್ಯವಿದ್ದ ಪ್ರಯುಕ್ತ ಈ ಹುದ್ದೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೊಸದಾಗಿ ಸೃಜಿಸಿತು.ಇದರ ಪರಿಣಾಮವಾಗಿ ಎಲ್ಲ ಗ್ರಾಪಂಗಳಲ್ಲಿ ಗಣಕಯಂತ್ರ ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಯಿತು. ಗ್ರಾಪಂಯಿಂದ ದೊರೆಯುವ ಎಲ್ಲ ಸೇವೆಗಳು ಸಕಾಲದಲ್ಲಿ ಎಲ್ಲರಿಗೂ ದೊರೆಯುವಂತಾಗಬೇಕಾದರೆ ನೀವುಗಳು ಸದಾಕಾಲ ಸಕ್ರಿಯರಾಗಿರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ಚಾರ್ಲ್ಸ್‌ ಬ್ಯಾಬೇಜ್‌ ಪಾತ್ರ ಗಣನೀಯವಾಗಿರುತ್ತದೆ.ಗಣಕಯಂತ್ರ ನಿರ್ವಾಹಕರು ಪ್ರಸಕ್ತ ಕೆಲಸದಲ್ಲಿ ಹೆಚ್ಚು ಆಸಕ್ತಿ ವಹಿಸಿ ನಿರ್ವಹಿಸುತ್ತಿರುವರಿಂದ ಎಲ್ಲ ಯೋಜನೆಗಳು ತಾಲೂಕಿನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ.ಇದೇ ರೀತಿ ನೀವು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಎಲ್ಲ ಯೋಜನೆಗಳಲ್ಲಿ ಕೊಪ್ಪಳ ತಾಲೂಕು ಹೆಚ್ಚು ಪ್ರಗತಿ ಸಾಧಿಸಲು ಕಾರ್ಯನಿರತರಾಗಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಚಾರ್ಲ್ಸ್‌ ಬ್ಯಾಬೇಜ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ಮರಿಸಲಾಯಿತು.ನಂತರ ಕೇಕ್ ಕತ್ತರಿಸುವ ಮೂಲಕ ಕಂಪ್ಯೂಟರ್‌ ಆಪರೇಟರ್‌ ದಿನ ಆಚರಿಸಲಾಯಿತು. ಬಿಸರಳ್ಳಿ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ನಿಸಾರ ಅಹಮದ್ ಮತ್ತು ಮಾರುತಿ ಹಣವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂದನಾರ್ಪಣೆಯನ್ನು ಶಿವಪುರ ಗ್ರಾಪಂ ಡಿಇಒ ಮಂಜುಳಾ ನಿರ್ವಹಿಸಿದರು. ಕಾರ್ಯಕ್ರಮವನ್ನು ಹಲಗೇರಿ ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡ ಪೊಲೀಸ್ ಪಾಟೀಲ್ ನಿರ್ವಹಿಸಿದರು

ಕಾರ್ಯಕ್ರಮದಲ್ಲಿ ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಮಹೇಶ್, ಸಹಾಯಕ ನಿರ್ದೇಶಕಿ(ಗ್ರಾಉ) ಸೌಮ್ಯ ಕೆ, ‌ತಾಲೂಕಿನ ಎಲ್ಲ ಗ್ರಾಪಂ ಕಂಪ್ಯೂಟರ್‌ ಆಪರೇಟರ್, ತಾಪಂ ಸಿಬ್ಬಂದಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪದ ಉಳಿಯಲು ಸಂಘ-ಸಂಸ್ಥೆಗಳಿಂದ ಸಾಧ್ಯ
ಪ್ರವಾಸಿಗರಿಂದ ತುಂಬಿದ ಗೋಕರ್ಣ