ಹೊಳೆನರಸೀಪುರದಲ್ಲಿ ಅದ್ಧೂರಿ ಹನುಮ ಜಯಂತಿ

KannadaprabhaNewsNetwork |  
Published : Dec 14, 2025, 02:45 AM IST
13ಎಚ್ಎಸ್ಎನ್9 : ಹೊಳೆನರಸೀಪುರದ ನಗರದ ಗಣ್ಯರು, ಹಿರಿಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶ್ರೀ ಹನುಮ ಜಯಂತಿ ಆಚರಣೆ ಸೇವಾ ಸಮಿತಿಯ ಉಪಸ್ಥಿತಿಯಲ್ಲಿ ಅದ್ಧೂರಿಯ ಶ್ರೀ ಹನುಮಂತೋತ್ಸಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಶ್ರೀ ಹನುಮ ಜಯಂತ್ಯುತ್ಸವದ ಪ್ರಯುಕ್ತ ಪಟ್ಟಣವನ್ನು ತಳಿರುತೋರಣ ಹಾಗೂ ಕೇಸರಿ ಧ್ವಜಗಳಿಂದ ಸಿಂಗರಿಸಿ, ಮೈಸೂರು ದಸರಾದಂತೆ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಹೊಸ ಇತಿಹಾಸ ಸೃಷ್ಠಿಸುತ್ತಿರುವ ಸಿದ್ಧತೆಗಳು ವರ್ಷದಿಂದ ವರ್ಷಕ್ಕೆ ವೈಭವ ಹಾಗೂ ಅದ್ಧೂರಿತನ ಹೆಚ್ಚಿಸಿಕೊಳ್ಳುತ್ತಿರುವ ಜಯಂತ್ಯುತ್ಸವ ಸಾವಿರಾರು ಜನರ ಹರ್ಷೋದ್ಗಾರ ಹಾಗೂ ಆನಂದಭಾಷ್ಪಕ್ಕೆ ಸಾಕ್ಷಿಯಾಯಿತು. ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಶ್ರೀ ರಾಮ ಹಾಗೂ ಆಂಜನೇಯಮೂರ್ತಿಗಳ ಸ್ತಬ್ಧ ಚಿತ್ರಗಳು, ವಾದ್ಯಘೋಷಗಳು ಹಾಗೂ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದಲ್ಲಿ ಶ್ರೀ ಹನುಮ ಜಯಂತಿ ಆಚರಣಾ ಸೇವಾ ಸಮಿತಿಯವರು ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಆಚರಿಸಿದ ಶ್ರೀ ಹನುಮ ಜಯಂತ್ಯುತ್ಸವದ ಅದ್ಧೂರಿ ಮೆರವಣಿಗೆಯು ಸಾವಿರಾರು ಭಕ್ತರ ಶ್ರೀ ರಾಮನ ಜಯಘೋಷದೊಂದಿಗೆ ವೈಭವದಿಂದ ನಡೆಯಿತು. ಶ್ರೀ ಹನುಮ ಜಯಂತ್ಯುತ್ಸವದ ಪ್ರಯುಕ್ತ ಪಟ್ಟಣವನ್ನು ತಳಿರುತೋರಣ ಹಾಗೂ ಕೇಸರಿ ಧ್ವಜಗಳಿಂದ ಸಿಂಗರಿಸಿ, ಮೈಸೂರು ದಸರಾದಂತೆ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಹೊಸ ಇತಿಹಾಸ ಸೃಷ್ಠಿಸುತ್ತಿರುವ ಸಿದ್ಧತೆಗಳು ವರ್ಷದಿಂದ ವರ್ಷಕ್ಕೆ ವೈಭವ ಹಾಗೂ ಅದ್ಧೂರಿತನ ಹೆಚ್ಚಿಸಿಕೊಳ್ಳುತ್ತಿರುವ ಜಯಂತ್ಯುತ್ಸವ ಸಾವಿರಾರು ಜನರ ಹರ್ಷೋದ್ಗಾರ ಹಾಗೂ ಆನಂದಭಾಷ್ಪಕ್ಕೆ ಸಾಕ್ಷಿಯಾಯಿತು. ಶ್ರೀ ಹನುಮ ಜಯಂತಿ ಆಚರಣಾ ಸೇವಾ ಸಮಿತಿವತಿಯಿಂದ ಶನಿವಾರ ಶ್ರೀ ಹನುಮ ಜಯಂತ್ಯುತ್ಸವದ ಅಂಗವಾಗಿ ಸಂಪ್ರದಾಯದಂತೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಿದ ನಂತರ ಹನುಮೋತ್ಸವದ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿ, ವೈಭವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಮುಂಭಾಗದಿಂದ ಪ್ರಾರಂಭವಾದ ಶ್ರೀ ವೀರ ಹನುಮಾನ್ ವೈಭವದ ಮೆರವಣಿಗೆಯೂ ಮಹಾತ್ಮಗಾಂಧಿ ವೃತ್ತ, ರಿವರ್‌ ಬ್ಯಾಂಕ್ ರಸ್ತೆ, ಚೆನ್ನಾಂಬಿಕ ವೃತ್ತದ ಮೂಲಕ ಪೇಟೆ ಮುಖ್ಯ ರಸ್ತೆಯಲ್ಲಿ ಮೂಲಕ ಡಾ. ಬಿ.ಆರ್.ಅಂಬೇಡ್ಕರ್‌ ವೃತ್ತ, ಅಂಬೇಡ್ಕರ್ ನಗರ, ಹೌಸಿಂಗ್ ಬೋರ್ಡ್ ಮೂಲಕ ಮೆರವಣಿಗೆ ಸಾಗಿತು. ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಶ್ರೀ ರಾಮ ಹಾಗೂ ಆಂಜನೇಯಮೂರ್ತಿಗಳ ಸ್ತಬ್ಧ ಚಿತ್ರಗಳು, ವಾದ್ಯಘೋಷಗಳು ಹಾಗೂ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು. ವಿವಿಧ ಸ್ಥಳಗಳು ಹಾಗೂ ದೇವಾಲಯಗಳ ಮುಂಭಾಗದಲ್ಲಿ ಶ್ರೀರಾಮನ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರೀ ಹನುಮನ ಭಕ್ತರಿಗೆ ಮಜ್ಜಿಗೆ ನೀಡಿ ಸತ್ಕರಿಸಿದರು. ಶ್ರೀ ಹನುಮ ಜಯಂತ್ಯುತ್ಸವ ಪ್ರಯುಕ್ತ ಹಗಲು- ರಾತ್ರಿ ಅನ್ನದೇ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಆಸಿಫ್, ನರೇಂದ್ರಬಾಬು, ಪ್ರಸನ್ನ ಐಯ್ಯಂಗಾರ್, ಶ್ರೀನಿವಾಸ, ದಯಾನಂದ, ಮನೋಹರ್, ಬಾವೇಶ್, ಪ್ರದೀಪ್, ರಾಜೀವ, ಚಿರಂಜೀವಿ, ಸುಮನ್, ಚಂದು, ಅನ್ವಿತ್, ಪುನೀತ್, ನಿದರ್ಶನ್, ಅಭಿಲಾಷ್, ಹಾಗೂ ಇತರರ ಕಾರ್ಯಕ್ಕೆ ಶ್ರೀರಾಮನ ಭಕ್ತರು ಪ್ರಶಂಸೆ ವ್ಯಕ್ತಪಡಿಸಿದರು. ಜವಹಾರ್ ನವೋದಯ ವಿದ್ಯಾಸಂಸ್ಥೆಯ ಪ್ರವೇಶ ಪರೀಕ್ಷೆ ನಡೆಯುತ್ತಿದ್ದ ಸೆಂಟರ್ ಸಮೀಪ ಪರೀಕ್ಷೆ ಪ್ರಾರಂಭಗೊಳ್ಳುತ್ತಿದ್ದಂತೆ ಡಿಜೆಗಳನ್ನು ಆಫ್ ಮಾಡಿಸಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಹಕಾರ ನೀಡಲಾಯಿತು.ನಗರದ ಗಣ್ಯರು, ಹಿರಿಯರು, ಮಾಜಿ ಪುರಸಭಾಧ್ಯಕ್ಷರು ಹಾಗೂ ಮಾಜಿ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶ್ರೀ ಹನುಮ ಜಯಂತಿ ಆಚರಣೆ ಸೇವಾ ಸಮಿತಿಯ ಎ.ಶ್ರೀಧರ್‌, ಎಚ್.ವಿ.ಸುರೇಶ್ ಕುಮಾರ್, ಅಮಿತ್, ಎಚ್.ಎಸ್.ಸುದರ್ಶನ್, ರಂಗನಾಥ್, ರಾಘವೇಂದ್ರ, ಹೇಮಂತ್, ತಟ್ಟೆಬಾಬು, ಗೋವಿಂದ, ಭರತ್, ಅನಂತ, ನರಸಿಂಹ, ಶಿವಣ್ಣ, ಎಚ್.ಆರ್‌. ಸುದರ್ಶನ್ ಬಾಬು, ಗುರು, ಜೈಪ್ರಕಾಶ್, ವಿ.ಎ. ಕೃಷ್ಣ, ಕೆ.ಎಂ.ಹೊನ್ನಪ್ಪ, ಜಗದೀಶ್, ಎಸ್. ಗೋಕುಲ್, ಕಡುವಿನಕೋಟೆಯ ನಿದರ್ಶನ್, ದರ್ಶನ್ ಹಾಗೂ ಲೋಕೇಶ್, ನಟರಾಜ್, ಮಯೂರ್ ಮಂಜು, ಚೇತನ್ ಮೂಡಲಹಿಪ್ಪೆ, ಗುಂಡ, ವಿವಿಧ ಸಂಘಟನೆಗಳ ಮುಖಂಡರು, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ