ಅರಸೀಕೆರೆಯಲ್ಲಿ ಬಜಾರ್ ಗಣಪತಿ ಅದ್ಧೂರಿ ವಿಸರ್ಜನಾ ಮಹೋತ್ಸವ: ಭರ್ಜರಿ ಮೆರವಣಿಗೆ

KannadaprabhaNewsNetwork |  
Published : Sep 21, 2026, 01:15 AM IST
ಅರಸೀಕೆರೆಯಲ್ಲಿ ಅದ್ಧೂರಿಯಾಗಿ ನಡೆದ ಬಜಾರ್ ಗಣಪತಿ ವಿಸರ್ಜನಾ ಮಹೋತ್ಸವ | Kannada Prabha

ಸಾರಾಂಶ

ನಗರದ ಪಿ.ಪಿ. ವೃತ್ತದಲ್ಲಿ ವಿಶೇಷ ಪಟಾಕಿ ಹಾಗೂ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿತ್ತು. ಮೆರವಣಿಗೆ ಕಂತೇನಹಳ್ಳಿ ಕೆರೆ ತಲುಪಿದ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿ ಹಾಗೂ ಗೌರಮ್ಮನವರ ವಿಸರ್ಜನೆ ನೆರವೇರಿಸಲಾಯಿತು.

ಕನ್ನಡಪ್ರಭವಾರ್ತೆ ಅರಸೀಕೆರೆ

ನಗರದ ಪೇಟೆ ಬೀದಿಯ ಶ್ರೀ ಬಜಾರ್ ಗಣಪತಿ ವಿಸರ್ಜನಾ ಮಹೋತ್ಸವ ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ಅದ್ಧೂರಿ ಮೆರವಣಿಗೆಯೊಂದಿಗೆ ನೆರವೇರಿತು. ವಿಶೇಷವಾಗಿ ಅಲಂಕರಿಸಲಾಗಿದ್ದ ಗಣಪತಿ ಹಾಗೂ ಗೌರಮ್ಮನವರ ಮೂರ್ತಿಗಳನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಂತೇನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಪೇಟೆ ಬೀದಿಯ ಶ್ರೀ ಬಜಾರ್ ಗಣಪತಿ ಆಸ್ಥಾನ ಮಂಟಪದಲ್ಲಿ ಮಹಾ ಮಂಗಳಾರತಿ ನೆರವೇರಿದ ಬಳಿಕ 108 ದೀಪಗಳ ಮಹಾ ಆರತಿ ಮೂಲಕ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪಂಡಿತ್ ಅಖಿಲೇಶ್ ಗುರೂಜಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಈ ಬಾರಿಯ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಬಾಂಬೆ ಮಹಾನಗರದಲ್ಲಿ ನಿರ್ಮಾಣಗೊಂಡು ಆಗಮಿಸಿದ್ದ ಶ್ರೀ ಬಜಾರ್ ಗಣಪತಿ ಹಾಗೂ ಶ್ರೀ ಗೌರಮ್ಮನವರ ಮೂರ್ತಿಗಳು ಗಮನ ಸೆಳೆದವು. ಎರಡನೇ ಬಾರಿಗೆ ಬಾಂಬೆಯಿಂದ ನಿರ್ಮಾಣಗೊಂಡ ಮೂರ್ತಿಗಳನ್ನು ತರಲಾಗಿದ್ದು, ಭಕ್ತರು ಹಾಗೂ ಸಾರ್ವಜನಿಕರನ್ನು ಆಕರ್ಷಿಸಿದವು.

ವಿಸರ್ಜನಾ ಮೆರವಣಿಗೆಯಲ್ಲಿ ಕೊಯಮತ್ತೂರಿನ ವಿಷ್ಣು ಟ್ಯಾಬ್ಲೋ, ಮಹಾರಾಷ್ಟ್ರದ ಅಗೋರಿ ಶೋ, ಕೇರಳದ ಕಾಳಿವೇಷ, ಗುಬ್ಬಿಯ ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಕೇರಳದ ಶ್ರೀ ವಿಷ್ಣು ವಾದ್ಯ ಸಂಘದ ಚಂಡೆ ವಾದ್ಯ, ತಮಟೆ, ಕರಡೆ ವಾದ್ಯ ಹಾಗೂ ಕಿರಣ್ ಸೌಂಡ್ಸ್‌ನ ಫ್ಲವರ್ ಬ್ಲಾಸ್ಟರ್ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.

ನಗರದ ಪಿ.ಪಿ. ವೃತ್ತದಲ್ಲಿ ವಿಶೇಷ ಪಟಾಕಿ ಹಾಗೂ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿತ್ತು. ಮೆರವಣಿಗೆ ಕಂತೇನಹಳ್ಳಿ ಕೆರೆ ತಲುಪಿದ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿ ಹಾಗೂ ಗೌರಮ್ಮನವರ ವಿಸರ್ಜನೆ ನೆರವೇರಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಮಾಜಿ ನಗರಸಭಾ ಅಧ್ಯಕ್ಷ ಸಮಿಉಲ್ಲಾ, ವಿದ್ಯಾಧರ್, ಸಿಕಂದರ್, ದರ್ಶನ್, ಭಾಸ್ಕರ್, ಹರೀಶ್, ಮನೋಹರ್, ವಿಭವ ಇಟಗಿ, ಬಿಜೆಪಿ ಮುಖಂಡರಾದ ಬಾಲಾಜಿ ಗಾಡಿಗೆ, ಚೇತನ್ ಜೈನ್, ಸಿಂಧು ಅರುಣ್, ಸಿದ್ದೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಿರಣ್ ಕುಮಾರ್, ಸಮಿತಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ನಿಖಿಲ್ ಚೋಪ್ರಾ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ನಗರದ ವರ್ತಕರು, ವಿವಿಧ ಸಮಾಜಗಳ ಮುಖಂಡರು ಮತ್ತು ಅಪಾರ ಸಂಖ್ಯೆ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾ ಬಲದಂಡೆ ನಾಲೆಗೆ ನೀರು: ಕುಂದೂರಲ್ಲಿ ರೇಣು ಬಾಗಿನ
ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸೋಣ: ಎನ್‌.ಎಸ್‌.ಬೋಸರಾಜು