ಗ್ರ್ಯಾಂಡ್‌ ಮರ್ಕ್ಯೂರ್‌ ಹೋಟೆಲ್‌ ವಾರ್ಷಿಕೋತ್ಸವ

KannadaprabhaNewsNetwork | Published : May 15, 2025 1:43 AM
Follow Us

ಸಾರಾಂಶ

ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್‌ ಸಹಯೋಗ

ಕನ್ನಡಪ್ರಭ ವಾರ್ತೆ ಮೈಸೂರುಬ್ರಿಗೇಡ್ ಹಾಸ್ಪಿಟಾಲಿಟಿಯ ಒಂದು ಅಂಗವಾದ ಗ್ರ್ಯಾಂಡ್ ಮರ್ಕ್ಯೂರ್ ಮೈಸೂರು ಹೋಟೆಲ್ ನ 9ನೇ ವಾರ್ಷಿಕೋತ್ಸವ ಅಂಗವಾಗಿ ಮೈಸೂರಿನಲ್ಲಿ ಅದ್ಧೂರಿಯಾಗಿ ವಿಂಟೇಜ್ ಕಾರ್ ರ್ಯಾ ಲಿ ಜರುಗಿತು.ಬೆಂಗಳೂರಿನ 30 ಮತ್ತು ಮೈಸೂರಿನ 10 ವಿಂಟೇಜ್ ಕಾರುಗಳು ಸೇರಿ ಒಟ್ಟು 40 ವಿಂಟೇಜ್ ಕಾರುಗಳು ಈ ರ್ಯಾ ಲಿಯಲ್ಲಿ ಭಾಗವಹಿಸಿದವು.ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರ್ ಕ್ಲಬ್‌ ಸಹಯೋಗದಲ್ಲಿ ನಡೆದ ಈ ರ್ಯಾ ಲಿಯು ಗ್ರ್ಯಾಂಡ್ ಮರ್ಕ್ಯೂರ್ ಮೈಸೂರು ಹೋಟೆಲ್ ನ ಆವರಣದಲ್ಲಿ ಫ್ಲಾಗ್ ಆಫ್ ಮಾಡುವ ಮೂಲಕ ಆರಂಭವಾಯಿತು. ರ್ಯಾ ಲಿ ನಗರದ ಮೂಲಕ ಸಾಗಿ ಮೈಸೂರು ಅರಮನೆಯಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಲಾಯಿತು. ಈ ವೇಳೆ ಭಾಗವಹಿಸಿದವರೆಲ್ಲರೂ ಮೈಸೂರಿನ ವಾಸ್ತುಶಿಲ್ಪದ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಆಸ್ವಾದಿಸಿದರು. ಬಳಿಕ ಎಲ್ಲರೂ ಹೋಟೆಲ್‌ ಗೆ ಮರಳಿದರು.ಫ್ಲಾಗ್ ಆಫ್ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುಟುಂಬಸ್ಥೆ ಸುಪ್ರಿಯಾ ಹರ್ಷೇಂದ್ರ ಕುಮಾರ್, ಅಕಾರ್ ಗ್ರೂಪ್ ನ ಕರ್ನಾಟಕ ವಲಯದ ಪ್ರಧಾನ ವ್ಯವಸ್ಥಾಪಕ ಸಂದೀಪ್ ಝೋರಿ ಮತ್ತು ಗ್ರ್ಯಾಂಡ್ ಮರ್ಕ್ಯೂರ್ ಮೈಸೂರು ಹೋಟೆಲ್ ನ ಪ್ರಧಾನ ವ್ಯವಸ್ಥಾಪಕಿ ರಾಧಿಕಾ ಟಾಟಾ ಪಾಲ್ಗೊಂಡಿದ್ದರು.ಈ ವೇಳೆ ಮಾತನಾಡಿದ ರಾಧಿಕಾ ಟಾಟಾ ಅವರು, ಆತಿಥ್ಯ ಕ್ಷೇತ್ರದಲ್ಲಿ ಒಂಬತ್ತು ವರ್ಷಗಳ ಶ್ರೇಷ್ಠ ಪ್ರಯಾಣವನ್ನು ಮಾಡಿದ್ದೇವೆ. ಇಷ್ಟು ವರ್ಷಗಳ ಕಾಲ ಮೈಸೂರಿನ ಅದ್ಭುತ ಸಾಂಸ್ಕೃತಿಕ ವೈವಿಧ್ಯದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮ ವಿಂಟೇಜ್ ಕಾರ್ ರ್ಯಾ ಲಿ ಮತ್ತು ಸಂಭ್ರಮಾಚರಣೆ ಈ ನಗರದ ಶ್ರೀಮಂತ ಪರಂಪರೆಯನ್ನು ಗೌರವಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ವಿಶ್ವದರ್ಜೆಯ ಆತಿಥ್ಯವನ್ನು ಒದಗಿಸುತ್ತಲೇ ನಮ್ಮ ಅತಿಥಿಗಳಿಗೆ ಮತ್ತು ಸಮಾಜಕ್ಕೆ ಇನ್ನಷ್ಟು ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.ಅಕಾರ್‌ಗ್ರೂಪ್‌ನ ಕರ್ನಾಟಕ ವಲಯದ ಪ್ರಧಾನ ವ್ಯವಸ್ಥಾಪಕ ಸಂದೀಪ್‌ ಝೋರಿ ಮಾತನಾಡಿ, ವೈವಿಧ್ಯಮಯ ಕಲೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುತ್ತಲೇ ಹೊಸತನವನ್ನು ಪಾಲಿಸಲು ಅಕಾರ್ ಗ್ರೂಪ್‌ಬದ್ಧವಾಗಿದೆ. ಈ ಮೂಲಕ ನಾವು ನಮ್ಮ ಅತಿಥಿಗಳಿಗೆ ಆನಂದದಾಯಕ ಮತ್ತು ಅದ್ಭುತ ಅನುಭವ ಒದಗಿಸಲು ಬಯಸುತ್ತೇವೆ. ಗ್ರ್ಯಾಂಡ್ ಮರ್ಕ್ಯೂರ್ ಮೈಸೂರ್ ಹೋಟೆಲಿನ ಒಂಬತ್ತನೇ ವಾರ್ಷಿಕೋತ್ಸವ ಪ್ರಯುಕ್ತ ಮೈಸೂರು ಅರಮನೆಯ ಸುತ್ತ ನಡೆದ ವಿಂಟೇಜ್ ಕಾರ್ ರ್ಯಾ ಲಿಯು ಬಹಳ ವೈಭವಯುತವಾಗಿ ನಡೆದಿದೆ ಎಂದು ತಿಳಿಸಿದರು.ಗ್ರ್ಯಾಂಡ್ ಮರ್ಕ್ಯೂರ್ ಮೈಸೂರು ಹೋಟೆಲ್ 2016ರಲ್ಲಿ ಉದ್ಘಾಟಿಸಲ್ಪಟ್ಟಿದ್ದು, ಅಂದಿನಿಂದ ಈವರೆಗೆ ಅತಿಥಿಗಳಿಗೆ ಸೊಗಸಾದ ಆತಿಥ್ಯ ನೀಡುತ್ತಾ ಬಂದಿದೆ. ಮೈಸೂರು ಅರಮನೆಯ ರಾಜವೈಭವದಿಂದ ಸ್ಫೂರ್ತಿಗೊಂಡಿರುವ ಹೋಟೆಲ್‌ನ ಒಳಾಂಗಣವು ಅದರ ಭವ್ಯವಾದ ಘನತೆಯನ್ನು ಎತ್ತಿ ತೋರಿಸುತ್ತದೆ. ನಿಜವಾದ ಸಾಂಸ್ಕೃತಿಕ ಅನುಭವವನ್ನು ಬಯಸುವ ಪ್ರವಾಸಿಗರಿಗೆ ಇದೊಂದು ಆದರ್ಶ ತಾಣವಾಗಿದೆ ಎಂದರು.ಗ್ರ್ಯಾಂಡ್‌ ಮರ್ಕ್ಯೂರ್‌ ಕುರಿತುಗ್ರ್ಯಾಂಡ್ ಮರ್ಕ್ಯೂರ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್ ವಿಶ್ವಾದ್ಯಂತ ಆತಿಥ್ಯವನ್ನು ಒದಗಿಸುವ ಮಹತ್ವದ ಸಂಸ್ಥೆಯಾಗಿದೆ. ಅತಿಥಿಗಳ ಅನ್ವೇಷಣೆಯ ಕುತೂಹಲ ತಣಿಸುತ್ತದೆ. ಪ್ರತಿ ತಾಣದ ವಿಶಿಷ್ಟತೆಯನ್ನು ಗೌರವಿಸುವ ಆತಿಥ್ಯ ಅನುಭವ ಒದಗಿಸುತ್ತದೆ. ಪ್ರತಿ ಗ್ರ್ಯಾಂಡ್ ಮರ್ಕ್ಯೂರ್ ಹೋಟೆಲ್ ಕೂಡ ತನ್ನ ದೇಶದ ಸ್ಥಳೀಯ ಸಂಸ್ಕೃತಿಯ ಸಾರವನ್ನು ದಾಟಿಸುತ್ತದೆ. ಸ್ಥಳೀಯ ಜೀವನಶೈಲಿಯಲ್ಲಿ ಬೇರೂರಿರುವ ಆಚರಣೆ ಮತ್ತು ಪಂಚೇಂದ್ರೀಯಗಳನ್ನು ತೃಪ್ತಗೊಳಿಸುವ ತಲ್ಲೀನಗೊಳಿಸುವ ಅನುಭವ ನೀಡುತ್ತದೆ.ಇದು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಪ್ರೀಮಿಯಂ ಆತಿಥ್ಯ ಮಾನದಂಡಕ್ಕೆ ಪೂರಕವಾಗಿ ಒದಗಿಸಲ್ಪಡುತ್ತವೆ. 1997ರಲ್ಲಿ ಸಾವೊ ಪಾಲೊದಲ್ಲಿ ಸ್ಥಾಪಿತವಾದ ಗ್ರ್ಯಾಂಡ್ ಮರ್ಕ್ಯೂರ್ ಜಾಲವು 13 ದೇಶಗಳಲ್ಲಿ 60ಕ್ಕೂ ಹೆಚ್ಚು ಹೋಟೆಲ್‌ ಗಳನ್ನು ಒಳಗೊಂಡಿದೆ. ಇದರ ಪ್ರಮುಖ ಆಸ್ತಿಗಳಲ್ಲಿ ಭಾರತದ ಗ್ರ್ಯಾಂಡ್ ಮರ್ಕ್ಯೂರ್ ಮೈಸೂರು, ಬ್ರೆಜಿಲ್‌ನ ಗ್ರ್ಯಾಂಡ್ ಮರ್ಕ್ಯೂರ್ ಸಾವೊ ಪಾಲೊ ವಿಲಾ ಒಲಿಂಪಿಯಾ, ಚೀನಾದ ಗ್ರ್ಯಾಂಡ್ ಮರ್ಕ್ಯೂರ್ ಶಾಂಘೈ ಹಾಂಗ್‌ ಕಿಯಾವೊ, ವಿಯೆಟ್ನಾಂನ ಗ್ರ್ಯಾಂಡ್ ಮರ್ಕ್ಯೂರ್ ಹನೋಯ್ ಮತ್ತು ನ್ಯೂಜಿಲೆಂಡ್‌ ನ ಗ್ರ್ಯಾಂಡ್ ಮರ್ಕ್ಯೂರ್ ವೆಲ್ಲಿಂಗ್ಟನ್ ಸೇರಿವೆ. ಗ್ರ್ಯಾಂಡ್ ಮರ್ಕ್ಯೂರ್ ಅಕಾರ್‌ಗ್ರೂಪ್ ನ ಭಾಗವಾಗಿದ್ದು, ಇದು 110ಕ್ಕೂ ಹೆಚ್ಚು ದೇಶಗಳಲ್ಲಿ 5,500ಕ್ಕೂ ಹೆಚ್ಚು ಆಸ್ತಿಗಳನ್ನು ಹೊಂದಿರುವ ವಿಶ್ವದ ಪ್ರಮುಖ ಹಾಸ್ಪಿಟಾಲಿಟಿ ಗ್ರೂಪ್ ಆಗಿದೆ ಎಂದರು.