ಮಧುರವಳ್ಳಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಅದ್ಧೂರಿ ನವರಾತ್ರಿ

KannadaprabhaNewsNetwork |  
Published : Sep 25, 2025, 01:01 AM IST
 ನವರಾತ್ರಿ ಉತ್ಸವದ ಅಂಗವಾಗಿ ಮೂರನೇ ದಿನದ ಅಲಂಕಾರ | Kannada Prabha

ಸಾರಾಂಶ

ತಾಲೂಕಿನ ಬನವಾಸಿಯ ಮಧುರವಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮೂರನೇ ದಿನದ ಅಲಂಕಾರ ಪೂಜೆ ವಿಜೃಂಭಣೆ ಮತ್ತು ಭಕ್ತಿಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಶಿರಸಿ

ತಾಲೂಕಿನ ಬನವಾಸಿಯ ಮಧುರವಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮೂರನೇ ದಿನದ ಅಲಂಕಾರ ಪೂಜೆ ವಿಜೃಂಭಣೆ ಮತ್ತು ಭಕ್ತಿಯಿಂದ ನೆರವೇರಿತು.

ನವರಾತ್ರಿ ಒಂಭತ್ತು ದಿನಗಳ ಪೂಜೆಗೆ ಗ್ರಾಮದ ಒಟ್ಟು ಮನೆಗಳನ್ನು ತಂಡಗಳಾಗಿ ವಿಭಾಗಿಸಿ ಪೂಜಾ ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ಅದರ ಅಂಗವಾಗಿ ಬುಧವಾರ ನೆರೆವೇರಿದ ಅಲಂಕಾರ ಪೂಜೆ ಮಂಗಳಾರತಿ ನಂತರದಲ್ಲಿ ಹಲವು ವರ್ಷಗಳಿಂದ ಅರ್ಚಕರಾಗಿ ಶ್ರೀದೇವಿಯ ಪೂಜಾ ಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿರುವ ವಿಶ್ವಕರ್ಮ ಕುಟುಂಬದ ಸದಸ್ಯ ಮಧುಕೇಶ್ವರ ಅನಂತ ಆಚಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದೇ ವೇಳೆ ಊರಿನಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ, ಶುಭ ಅಶುಭ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಯಶಸ್ವಿಗೊಳಿಸಲು ತನು ಮನದಿಂದ ದುಡಿಯುವ ಕುಮಾರ ಬಿ. ನಾಯ್ಕ್ ಸಿದ್ಧೇರ್, ದೇವಸ್ಥಾನದ ನೂತನ ಸಮಿತಿಗೆ ಆಯ್ಕೆಯಾದ ಅಧ್ಯಕ್ಷ ಬಸವರಾಜ ನಾಯ್ಕ್ ಕ್ಯಾಸನ್, ಉಪಾಧ್ಯಕ್ಷ ಗಣಪತಿ ಎನ್. ನಾಯ್ಕ್ ನಿಲೇಕಣಿ, ಕಾರ್ಯದರ್ಶಿ ಅಶ್ವಥ್ ಜಿ. ನಾಯ್ಕ್ ಹಾಲೇರ್ ಅವರನ್ನೂ ಸಹ ಗೌರವಿಸಲಾಯಿತು.

ಬಳಿಕ ಮಹಾಮಂಗಳಾರತಿಯೊಂದಿಗೆ ಅಲಂಕಾರ ಪೂಜಾ ಕಾರ್ಯಕ್ರಮ ಸಂಪನ್ನಗೊಂಡವು. ಕಾರ್ಯಕ್ರಮದಲ್ಲಿ ಉದಯ ಎಚ್. ನಾಯ್ಕ್, ಚಾಮರಾಜ ಜಿ. ನಾಯ್ಕ್, ಅಣ್ಣಪ್ಪ ಬಿ. ನಾಯ್ಕ್, ಕಮಲಾಕರ ಜಿ. ನಾಯ್ಕ್, ರಮೇಶ ಬಿ. ನಾಯ್ಕ್, ಗಣಪತಿ ಐ. ನಾಯ್ಕ್ ಸೇರಿದಂತೆ ಮಹಿಳೆಯರು ಮಕ್ಕಳು ಸಾರ್ವಜನಿಕರು ಉಪಸ್ಥಿತರಿದ್ದರು.

ಇನ್ನು ಈ ವರ್ಷ ನವರಾತ್ರಿ ಉತ್ಸವ ಹನ್ನೊಂದು ದಿನಗಳ ಕಾಲ‌ ನಡೆಯುವುದರಿಂದ ಹತ್ತನೇ ದಿನದ ಅಲಂಕಾರ ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿ ವಿಜಯದಶಮಿಯಂದು ಶ್ರೀ ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ