ಯಕ್ಷಗಾನದಲ್ಲೂ ಮೇಳೈಸಿದ ಹೂವಿನ ಬಾಣದಂತೆ ಹಾಡು

KannadaprabhaNewsNetwork |  
Published : Sep 25, 2025, 01:01 AM IST
ತಾಮ್ರ ಗ್ಔರಿ ಮಂದಿರದಲ್ಲಿ ಭಕ್ತಿ ಸಂಗೀತ  | Kannada Prabha

ಸಾರಾಂಶ

ಶರನ್ನವರಾತ್ರಿ ಉತ್ಸದ ಪುಣ್ಯ ಕ್ಷೇತ್ರದಲ್ಲಿ ಪ್ರಾರಂಭವಾಗಿದ್ದು, ವಿವಿಧ ದೇವಿ ಮಂದಿರದಲ್ಲಿ ದೈವಿಕ ಕಾರ್ಯಕ್ರಮ, ಹಲವೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಶಾರದಾ ಮೂರ್ತಿ ಆರಧಾನೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸುತ್ತಿದ್ದು, ಜನರನ್ನ ಆಕರ್ಷಿಸುತ್ತಿದೆ.

ಶರನ್ನವರಾತ್ರಿ ಉತ್ಸದಲ್ಲಿ ದೈವಿಕ ಕಾರ್ಯದ ಜೊತೆ ಸಾಂಸ್ಕೃತಿಕ ಕಾರ್ಯಕ್ರಮದ ಝಲಕ್‌ಕನ್ನಡಪ್ರಭ ವಾರ್ತೆ ಗೋಕರ್ಣ

ಶರನ್ನವರಾತ್ರಿ ಉತ್ಸದ ಪುಣ್ಯ ಕ್ಷೇತ್ರದಲ್ಲಿ ಪ್ರಾರಂಭವಾಗಿದ್ದು, ವಿವಿಧ ದೇವಿ ಮಂದಿರದಲ್ಲಿ ದೈವಿಕ ಕಾರ್ಯಕ್ರಮ, ಹಲವೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಶಾರದಾ ಮೂರ್ತಿ ಆರಧಾನೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸುತ್ತಿದ್ದು, ಜನರನ್ನ ಆಕರ್ಷಿಸುತ್ತಿದೆ.

ಇಲ್ಲಿನ ರುದ್ರಪಾದ ಯುವಕ ಸಂಘ ಹಾಗೂ ಬೇಲೆಗದ್ದೆ ರುದ್ರಪಾದದ ಶ್ರೀ ಶಾರದೋತ್ಸವ ಸಮಿತಿಯವರು ಶಾರದೆಯನ್ನ ಪ್ರತಿಷ್ಠಾಪಿಸಿ ಪೂಜೆಸುತ್ತಿದ್ದು, ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದಾರೆ. ಸೋಮವಾರ ರಾತ್ರಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ನಡೆದ ಮಾಯಾ ಬಜಾರ(ಕನಕಾಂಗಿ ಕಲ್ಯಾಣ) ಯಕ್ಷಗಾನ ಪ್ರದರ್ಶನದಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದ ಮೈಸೂರಿನ ವಿದ್ಯಾರ್ಥಿನಿ ಹಾಡಿದ ಹೂವಿನ ಬಾಣದಂತೆ ಹಾಡು ಯಕ್ಷಗಾನದಲ್ಲೂ ಬಳಕೆಯಾಗಿದ್ದು, ಜನರ ಗಮನಸೆಳೆದು ಮನರಂಜಿಸಿತು. ಖ್ಯಾತ ಭಾಗವತರು ಹಾಗೂ ಕಲಾವಿದರಿಂದ ನಡೆದ ಪೌರಾಣಿಕ ಕಥನದಲ್ಲಿ ಪ್ರಸ್ತುತ ದಿನದ ವೈರಲ್ ಹಾಡಿನ ಮೋಡಿ ಯಕ್ಷಗಾನ ಕಲೆಯಲ್ಲೂ ಅನಾವರಣಗೊಂಡಿರುವುದು ವಿಶೇಷವಾಗಿತ್ತು. ಇದರಂತೆ ಭಾವಿಕೊಡ್ಲದ ಧರ್ಮದೇವಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ನಿತ್ಯ ಸ್ಥಳೀಯ ಕಲಾವಿದರಿಂದ ಕಲಾರಾಧನೆ ನಡೆಯುತ್ತಿದೆ.

ಭದ್ರಕಾಳಿ ಮಂದಿರದಲ್ಲಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ದಿನ ಸ್ಥಳೀಯ ಮಹಿಳೆಯರಿಂದ ಭಜನೆ, ಎರಡನೇ ದಿನ ದುಬ್ಬನಶಸಿಯ ಶ್ರೀಮುರ್ಕುಂಡೇಶ್ವರ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು.

ತಾಮ್ರಗೌರಿ ಮಂದಿರದಲ್ಲಿ ಮೊದಲನೇ ದಿನ ಮಹಿಳಾ ಮಂಡಳಿಯ ಭಕ್ತಿ ಸಂಗೀತ, ಎರಡನೇ ದಿನ ಸಾಂಘವಿ ನಿರ್ವಾಣೇಶ್ವರ ಅವರಿಂದ ನೃತ್ಯ ಸೇವೆ, ಸ್ಥಳೀಯ ಮಹಿಳೆಯರಿಂದ ಭಜನೆ ನಡೆಯಿತು. ಒಟ್ಟಾರೆ ಪುಣ್ಯ ಕ್ಷೇತ್ರದ ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ