ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ನಗರದಲ್ಲಿ ಕೈ ಬರಹದ 6 ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು, ಯಾವುದೇ ಫ್ಲೆಕ್ಸ್‌ಗಳ ಅಬ್ಬರ, ಪ್ರಚಾರದಾಡಂಬರವಿಲ್ಲದಿದ್ದರೂ ಸ್ವದೇಶಿ ತನಕ್ಕೆ ಶಿವಮೊಗ್ಗ ನಗರದ ಜನತೆ ಮನ್ನಣೆ ಕೊಟ್ಟಿದ್ದು, ಇದು ಸ್ವದೇಶಿ ಪ್ರಜ್ಞೆಗೆ ಸಾಕ್ಷಿಯಾಗಿದೆ. ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದರೂ ಕೂಡ ಮೇಳದ ಯಾವುದೇ ಭಾಗದಲ್ಲೂ ಧೂಳಿನ ವಾತಾವರಣವಿಲ್ಲದೇ, ಸ್ವಚ್ಛತೆಯಿಂದ ಕೂಡಿದ್ದು, ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಿರುವುದು ಮೇಳ ವಿಶೇಷ.
ಮೇಳಕ್ಕೆ ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಹೀಗೆ ಎಲ್ಲ ವಯೋಮಾನದ ಲಕ್ಷಾಂತರ ಜನರು ಭೇಟಿ ಭೇಟಿ ಕೊಟ್ಟಿದ್ದು, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿದರು. ಆಹಾರೋತ್ಪಾದನೆ, ಕೈಗಾರಿಕೆ, ಕೃಷಿ, ಸ್ವದೇಶಿ ಪರಂಪರೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪರವಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪರವಾಗಿ 18 ಮಳಿಗೆಗಳನ್ನು ಮಾರಾಟ, ವಿಸ್ತಾರ ಮತ್ತು ಕಾರ್ಯಾಗಾರ ಹೀಗೆ ಮೂರು ವಿಭಾಗಗಳಾಗಿ ಸ್ಥಾಪನೆ, ಬ್ಯಾಂಕ್ ಮಳಿಗೆಗಳಿಗೆ ಅವಕಾಶ ಹೀಗೆ ಒಟ್ಟು 280 ಮಳಿಗೆಗಳ ಸ್ಥಾಪನೆ ಮಾಡಲಾಗಿತ್ತು.ಪ್ರತಿ ದಿನವೂ ಖ್ಯಾ ತ ಕಲಾವಿದರಿಂದ ಹಾಡು, ಭರತನಾಟ್ಯ, ಯೋಗ, ಸಂಗೀತ, ಬಾನರಸುರಿ ವಾದನ, ಯಕ್ಷಗಾನ , ಡೊಳ್ಳು, ವೀರಗಾಸೆ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಮೆರಗು ತಂದುಕೊಟ್ಟಿತು.
ಇನ್ನು ಸ್ವದೇಶಿ ಕ್ರೀಡೆಗಳಾದ ಹಗ್ಗ ಜಗ್ಗಾಟ, ಲಗೋರಿ, ಕೋಲಾಟ, ಅವ್ವ ಅಪ್ಪಚ್ಚಿ ಆಟ, ಕುದುರೆ ಆಟ, ಚೆಂಡಾಟ, ರಿಂಗ್ ಆಟ, ಬುಗುರಿ, ಟೈರ್ ಗಾಲಿ ಆಟಗಳು ಮಕ್ಕಳಿಗೆ ಭರಪೂರ ಮನರಂಜನೆ ನೀಡಿದವು. ಪ್ಲಾಸ್ಟಿಕ್ ಕವರ್, ಬ್ಯಾಗ್ ಇಲ್ಲ, ಪೇಪರ್ ಕವರ್ ಕೂಡ ಇಲ್ಲ, ಊಟದ ತಟ್ಡೆ, ಲೋಟ ವ್ಯವಸ್ಥೆ, ಟೀ,ಕಾಫಿ ಕೂಟ ಲೋಟದಲ್ಲಿ ವ್ಯವಸ್ಥೆ, ಸ್ವಚ್ಛತೆ ಹೆಚ್ಚಿನ ಆದ್ಯತೆ, ಧೂಳು ಮುಕ್ತ, ಪರಿಸರ ಸ್ನೇಹಿ ವಾತಾವರಣವನ್ನು ಉಂಟು ಮಾಡಿದ್ದು ಮೇಳದ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಸ್ವದೇಶ ಮೇಳದ ಸಂಯೋಜಕ ಡಾ.ಧನಂಜಯ್ ಸರ್ಜಿ, ಸಂಘಟಕ ಹರ್ಷ ಕಾಮತ್, ಅಮೃತ್ ನೋನಿ ಶ್ರೀನಿವಾಸ್ ಮೂರ್ತಿ, ಅಖಿಲ ಭಾರತ ಸಂಘರ್ಷ ವಾಹಿನಿ ಪ್ರಮುಖ್ ಅನ್ನದಾ ಶಂಕ ಪಾಣಿಗ್ರಾಯಿ ಮತ್ತಿತರರು ಇದ್ದರು.
10ಎಸ್‌ಎಂಜಿಕೆಪಿ05