ಶ್ರೀಶೈಲ ಜಗದ್ಗುರುಗಳ ಭವ್ಯ ಮೆರವಣಿಗೆ

KannadaprabhaNewsNetwork |  
Published : Sep 23, 2024, 01:17 AM IST
ಚಿತ್ರ 22ಬಿಡಿಆರ್9ಬೀದರ್‌ಲ್ಲಿ ಸಿದ್ಧಾಂಥ ಶಿಖಾಮಣಿ ಅಭಿಯಾನ ಹಾಗೂ ಶ್ರಾವಣ ಶಿವ ದರ್ಶನ ಸಂಚಾರ ಸಮಾರೋಪ ಪ್ರಯುಕ್ತ ಅಲಂಕೃತ ಸಾರೋಟದಲ್ಲಿ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಸಿದ್ಧಾಂಥ ಶಿಖಾಮಣಿ ಬೃಹತ್ ಗ್ರಂಥದ ಅದ್ಧೂರಿ ಮೆರವಣಿಗೆ ಜರುಗಿತು. | Kannada Prabha

ಸಾರಾಂಶ

ಅಲಂಕೃತ ಸಾರೋಟಿನಲ್ಲಿ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಭವ್ಯ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಸಿದ್ಧಾಂಥ ಶಿಖಾಮಣಿ ಅಭಿಯಾನ, ಶ್ರಾವಣ ಶಿವ ದರ್ಶನ ಸಂಚಾರ ಸಮಾರೋಪ ಹಾಗೂ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದ ನಿಮಿತ್ತ ನಗರದಲ್ಲಿ ಭಾನುವಾರ ಅಲಂಕೃತ ಸಾರೋಟಿನಲ್ಲಿ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಭವ್ಯ ಮೆರವಣಿಗೆ ನಡೆಯಿತು. ಇಲ್ಲಿನ ಪಾಪನಾಶ ದೇಗುಲದಿಂದ ಆರಂಭಗೊಂಡ ಮೆರವಣಿಗೆಯು ಬೀದರ್‌ - ಭಾಲ್ಕಿ ಮುಖ್ಯರಸ್ತೆ ಮೂಲಕ ಸಾಗಿ ಪ್ರತಾಪನಗರದ ಬೆಲ್ದಾಳೆ ಕನ್ವೆನ್ಷನ್‌ ಹಾಲ್‌ಗೆ ತಲುಪಿ ಸಮಾರೋಪಗೊಂಡಿತು.

ಸಾರೋಟಿನಲ್ಲಿ ಶ್ರೀಶೈಲ ಜಗದ್ಗುರು ಇದ್ದರು. ಮುಂಭಾಗದಲ್ಲಿ ಶ್ರೀ ಸಿದ್ಧಾಂಥ ಶಿಖಾಮಣಿ ಬೃಹತ್‌ ಗ್ರಂಥ, 21 ವಿವಿಧ ಭಾಷೆಗಳಿಗೆ ತರ್ಜುಮೆ ಮಾಡಲಾದ ಗಂಥದ ಪ್ರತಿ ಇಡಲಾಗಿತ್ತು. ಡೊಳ್ಳು ಕುಣಿತ, ವೀರಗಾಸೆ, ಹಲಿಗೆ, ಲಂಬಾಣಿ ನೃತ್ಯ, ಕೋಲಾಟ, ಭಜನೆ, ಮಹಾರಾಷ್ಟ್ರದ ವಾರಕಾರಿ ಕಲಾ ತಂಡ ಸೇರಿದಂತೆ ವಿವಿಧ ಕಲಾ ತಂಡಗಳು, ತಲೆ ಮೇಲೆ ಕುಂಭ ಕಳಸ, ಸಿದ್ಧಾಂಥ ಶಿಖಾಮಣಿ ಗ್ರಂಥದ ಪ್ರತಿ ಹೊತ್ತ ಮಹಿಳೆಯರು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದರು.

ಡಿಜೆದಲ್ಲಿ ಹೊರ ಹೊಮ್ಮಿದ ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಯುವಕರು ಸಂಭ್ರಮಿಸಿದರು. ಶ್ರೀಶೈಲ ಜಗದ್ಗುರುಗಳಿಗೆ ಜಯವಾಗಲಿ ಎಂಬ ಘೋಷಣೆ ಮೊಳಗಿಸಿದರು. ಮೆರವಣಿಗೆಯ ಮಾರ್ಗದಲ್ಲಿ ಅಲ್ಲಲ್ಲಿ ಭಕ್ತರಿಗೆ ಉಪಹಾರ, ತಂಪು ಪಾನೀಯ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಿವಶರಣಪ್ಪ ವಾಲಿ ಮೆರವಣಿಗೆಗೆ ಚಾಲನೆ ನೀಡಿದರು. ನೌಬಾದ್‌ನ ಜ್ಞಾನ ಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯರು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ವೈಜಿನಾಥ ಕಮಠಾಣೆ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಉಪಾಧ್ಯಕ್ಷ ತರುಣ್‌ ಎಸ್‌ ನಾಗಮಾರಪಳ್ಳಿ, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಲ್ಲಾಸಿನಿ ವಿಕ್ರಮ ಮುದಾಳೆ, ಜಿ.ಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಿವಯ್ಯ ಸ್ವಾಮಿ, ಉಪಾಧ್ಯಕ್ಷ ಆರ್‌ಜಿ ಮಠಪತಿ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ್‌ ಅಯಾಸಪುರ, ಕಾರ್ಯದರ್ಶಿ ವರದಯ್ಯ ಸ್ವಾಮಿ ಗಾದಗಿ, ವಕ್ತಾರ ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಕೋಶಾಧ್ಯಕ್ಷ ಕಂಟೆಪ್ಪ ಭಂಗೂರೆ, ಮೆರವಣಿಗೆ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ ಶೆಟಕಾರ್‌, ಅಧ್ಯಕ್ಷ ರಾಜಶೇಖರ ಮೆಟಕಾರಿ, ಕಾರ್ಯಾಧ್ಯಕ್ಷ ರಾಜಕುಮಾರ ಹೆಬ್ಬಾಳೆ, ಉಪಾಧ್ಯಕ್ಷ ಅರವಿಂದ ಶೀಲವಂತ, ಕಾರ್ಯದರ್ಶಿ ಶಿವಕುಮಾರ ಪಾಟೀಲ ತೇಗಂಪುರ, ಸಂಚಾಲಕ ಮಹೇಶ್ವರ ಸ್ವಾಮಿ, ಮಹಾದೇವ ಲದ್ದೆ, ಪ್ರಮುಖರಾದ ಬಾಪುರಾವ್‌ ದೇಶಮುಖ, ಓಂಪ್ರಕಾಶ ರೊಟ್ಟೆ, ಗುಣವಂತರಾವ್‌ ಶಿಂಧೆ, ಸಂಗಮೇಶ ಬಿರಾದಾರ, ಅಂಬರೀಷ್‌ ಸ್ವಾಮಿ, ಡಾ. ಬಂಡಯ್ಯ ಸ್ವಾಮಿ, ಆರ್.ಕೆ. ಚಾರಿ, ನಾಗರಾಜ ಮಠ, ಪ್ರವೀಣ ಸ್ವಾಮಿ, ಕಾಶೀನಾಥ ಹಿರೇಮಠ, ಸಂಗಮೇಶ ಹುಮನಾಬಾದೆ, ಶೋಭಾವತಿ ಫುಲಾರೆ, ರಾಣಿ ಸತ್ಯಮೂರ್ತಿ, ಲಕ್ಷ್ಮಿ ಆಲೂರೆ, ಕಾವೇರಿ ಸ್ವಾಮಿ, ಮಂಗಲಾ ಮರಕಲೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಕರ್ನಾಟಕ, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಹೂ ಮುಡಿದು ದೇವರ ದರ್ಶನ ಪಡೆದ ಭಾನು : ಬಳೆಯನ್ನು ತೊಟ್ಟು ಹಣೆಗೆ ಕುಂಕುಮ ಇಟ್ಟರು
ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ : ಗಣತಿ ಒತ್ತಡದಿಂದ ಆತ್ಮ*ತ್ಯೆ ?