ಅದ್ಧೂರಿಯ ಶಾಲಾ ಪ್ರಾರಂಭೋತ್ಸವ, ಉತ್ಸಾಹದಿಂದ ಆಗಮಿಸಿದ ಚಿಣ್ಣರು

KannadaprabhaNewsNetwork |  
Published : Jun 02, 2026, 02:45 AM IST
ಭದ್ರಕಾಳಿ ಪೌಢಶಾಲೆಯಲ್ಲಿ ಮಕ್ಕಳನ್ನ ಸ್ವಾಗತಿಸುತ್ತಿರುವುದು  | Kannada Prabha

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿ ಸೋಮವಾರದಿಂದ ಪ್ರಾರಂಭವಾಗಿದ್ದು, ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಕರ್ಣ

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿ ಸೋಮವಾರದಿಂದ ಪ್ರಾರಂಭವಾಗಿದ್ದು, ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಅದ್ಧೂರಿಯಾಗಿ ನಡೆಯಿತು.

ಇಲ್ಲಿನ ಭದ್ರಕಾಳಿ ಪ್ರಾಥಮಿಕ ಹಾಗೂ ಪೌಢಶಾಲಾ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೂವು ಹಾಗೂ ಸಿಹಿ ನೀಡಿ ವಿದ್ಯಾರ್ಥಿಗಳನ್ನ ತರಗತಿಗೆ ಸ್ವಾಗತಿಸಲಾಯಿತು.

ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ ಮಾತನಾಡಿ, ಈ ವರ್ಷದಲ್ಲಿ ಮೊಬೈಲ್ ಬಳಕೆ, ಟಿವಿ ನೋಡುವುದು ಮತ್ತಿತರ ಚಟುವಟಿಕೆಯಿಂದ ದೂರವಿದ್ದು, ವಿದ್ಯಾಭ್ಯಾಸ ಮಾಡಿ ಒಳ್ಳೆಯ ಫಲಿತಾಂಶ ದಾಖಲಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ವೇಳೆ ಭದ್ರಕಾಳಿ ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕ ಎಂ.ಆರ್. ನಾಯ್ಕ, ಹಿರಿಯ ಶಿಕ್ಷಕರಾದ ಆರ್.ಜಿ. ನಾವಡ, ವಿವೇಕ್ ಕೆ. ಪಟಗಾರ, ಅಶ್ವಿನಿ ಚಿತ್ತಾಲ, ಸಹಜಾ ವಿ.ಸಿ., ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ. ನಾಯಕ್, ಟಿ.ಎನ್. ಲತಾ, ಪ್ರಜ್ಞಾ ಎ. ನಾಯಕ್, ಶ್ರೀಲಕ್ಷ್ಮೀ ಎಂ. ನಾಯಕ್, ತುಳಸಿ ಗೌಡ, ದ್ವಿತೀಯ ದರ್ಜೆಯ ಸಹಾಯಕರಾದ ಸುಭಾಸ ವಿ. ನಾಯ್ಕ, ಸಿಬ್ಬಂದಿ ಮಂಜು ಎನ್. ಮುಕ್ರಿ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಉಚಿತ ಪಠ್ಯ ಪುಸ್ತಕ ವಿತರಣೆ, ಮೊಟ್ಟೆ, ಬಾಳೆ ಹಣ್ಣು, ಹಾಲು ಕೊಡಲಾಯಿತು. ಮಧ್ಯಾಹ್ನದ ಭೋಜನೆಗೆ ವಿದ್ಯಾರ್ಥಿಗಳಿಗೆ ಪಾಯಸ ಸಹಿತ ವ್ಯವಸ್ಥೆ ಮಾಡಲಾಗಿತ್ತು. ಪ್ರವೇಶದ್ವಾರದಲ್ಲಿ ಮಾವಿನ ತೋರಣ, ಹೂವುಗಳಿಂದ ಶೃಂಗರಿಸಲಾಗಿತ್ತು.

ಆಡುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂವು ನಿಡಿ, ಮಕ್ಕಳಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು.

ಈ ವೇಳೆ ಶಾಲಾ ಅಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಕುಮಾರ ಮಾರ್ಕಾಂಡೆ, ಸದಸ್ಯ ಮಾಣು ಗೌಡ, ಗ್ರಾಪಂ ಮಾಜಿ ಸದಸ್ಯೆ ಸ್ಮಿತಾ ಅಡಿ, ಸುರೇಶ ನಾಯ್ಕ, ಪ್ರಭಾರಿ ಮುಖ್ಯಾಧ್ಯಾಪಕಿ ವಿದ್ಯಾ ಹಾಗೂ ಶಿಕ್ಷಕ ವೃಂದವರು ಪಾಲ್ಗೊಂಡಿದ್ದರು.

ಅದರಂತೆ ತಾರಮಕ್ಕಿ, ದಂಡೆಭಾಗ, ಬಿಜ್ಜೂರು ಗಂಗಾವಳಿ, ನಾಡುಮಾಸ್ಕೇರಿ, ಬಂಕಿಕೊಡ್ಲ, ಹನೇಹಳ್ಳಿ, ತೊರ್ಕೆ, ತದಡಿ ಮಾದನಗೇರಿ, ಹಿರೇಗುತ್ತಿ, ಬರ್ಗಿ ಭಾಗದ ಸರ್ಕಾರಿ, ಖಾಸಗಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ಸಂಭ್ರಮದಿಂದ ಪ್ರಾರಂಭೋತ್ಸವ ಆಚರಿಸಿ, ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಿ: ಟಿ.ಎಸ್.ಗೋಪಾಲ್
ಮಾನಸಿಕ ಕಾಯಿಲೆಗೆ ಓದು-ಸಂಗೀತವೇ ದಿವ್ಯೌಷಧ