ಮಧುಗಿರಿಯಲ್ಲಿ ಅದ್ಧೂರಿ ವೈಕುಂಠ ಏಕಾದಶಿ ಆಚರಣೆ

KannadaprabhaNewsNetwork |  
Published : Jan 11, 2025, 12:45 AM IST
ಮಧುಗಿರಿಯಲ್ಲಿ  ವೈಕುಂಠ ಏಕಾದಶಿ ಪ್ರಯುಕ್ತ ನಡೆದ ದ್ರಾವದರ್ಶನ ಧಾರ್ಮಿಕ ಕಾರ್.ಕ್ರಮಕ್ಕೆ ಎಸಿ ಗೋಟೂರು ಶಿವಪ್ಪ ,ತಹಸೀಲ್ದಾರ್‌ ಶಿರಿನ್‌ತಾಜ್‌ ,ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಹಾಗೂ ಅಪಾರ ಭಕ್ತಾಧಿಗಳು ದೇವರ ಕೃಫೆಗೆ ಪಾತ್ರರಾದರು.  | Kannada Prabha

ಸಾರಾಂಶ

ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೃಕುಂಠ ಏಕಾದಶಿ ಪ್ರಯುಕ್ತ ಏರ್ಪಡಿಸಿದ್ದ ದ್ವಾರದರ್ಶನ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭವಾರ್ತೆ ಮಧುಗಿರಿ

ಪಟ್ಟಣದ ಐತಿಹಾಸಿಕ ಸುಪ್ರಸಿದ್ಧ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೃಕುಂಠ ಏಕಾದಶಿ ಪ್ರಯುಕ್ತ ಏರ್ಪಡಿಸಿದ್ದ ದ್ವಾರದರ್ಶನ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನೆರವೇರಿತು.

ಉಪವಿಭಾಗಿಧಾರಿ ಗೋಟೂರು ಶಿವಪ್ಪ , ತಹಸೀಲ್ದಾರ್‌ ಶಿರಿನ್‌ತಾಜ್, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು. ಶುಕ್ರವಾರ ಮುಂಜಾನೆ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೂರು ಬಾರಿ ಪ್ರಕಾರೋತ್ಸವ ಮಾಡಿ ಗೋಪುರದ ಮಧ್ಯ ಭಾಗದಲ್ಲಿ ಸಿದ್ದಪಡಿಸಿದ್ದ ದ್ವಾರದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಸಾವಿರಾರು ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ವೆಂಕಟೇಶ್ವರ ದರ್ಶನಕ್ಕೆ ಗೋವಿಂದ ನಾಮವಳಿ ಹಾಡುವ ಶ್ರದ್ಧಾ ಭಕ್ತಿಯಿಂದ ದರ್ಶನ ಪಡೆದರು. ಬೆಳಿಗ್ಗೆ 4ರಿಂದ ಮಹಿಳಾ ಸಂಘಟನೆ ಸದಸ್ಯರು ನಿರಂತರವಾಗಿ ದೇವರ ಮೇಲಿನ ಭಕ್ತಿಗೀತೆಗಳನ್ನು ಹಾಡಿದರು. ಪ್ರಧಾನ ಅರ್ಚಕ ಅನಂತ ಪದ್ಮನಾಭ ಭಟ್ಟ ಪೂಜೆ ಸೇವೆಗಳನ್ನು ನೆರವೇರಿಸಿದರು.

ಲಡ್ಡು ,ಸಿಹಿ ಮತ್ತು ಖಾರದ ಪೊಂಗಲ್‌ , ಬಿಸಿ ಬೆಳೆ ಬಾತು ಮೊಸರನ್ನವನ್ನು ಭಕ್ತರಿಗೆ ವಿತರಿಸಲಾಯಿತು. ಶ್ರೀವೆಂಕಟೇಶ್ವರನಿಗೆ ಮಾಡಿದ್ದ ವಜ್ರಾಂಗಿ ಅಲಂಕಾರ ಅತ್ಯಕರ್ಷಣೆಯಾಗಿತ್ತು. ತಾಲೂಕಿನಾದ್ಯಂತ ಶ್ರೀವೆಂಕಟೇಶ್ವ ಸ್ವಾಮಿ ದೇಗುಲಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಧಾರ್ಮಿಕ ಕಂಕೈರ್ಯಗಳು ನೆರವೇರಿದವು. ಭಕ್ತ ಮಂಡಳಿಯವರು ಈ ಸಲ ಅಚ್ಚು ಕಟ್ಟಾಗಿ ಭಕ್ತರಿಗೆ ದೇವರ ದರ್ಶನ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದನ್ನು ಕೊಂಡಾಡಿದರು.

ಕೇಂದ್ರ ಸಚಿವ ವಿ.ಸೋಮಣ್ಣ, ಎಂಎಲ್‌ಸಿ ಆರ್‌.ರಾಜೇಂದ್ರ, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ,ಮಧುಗಿರಿ ವಿದ್ಯಾ ಸಂಸ್ಥೆಯ ಖಜಾಂಚಿ ಎಂ.ಎಸ್‌. ಧರ್ಮವೀರ್‌, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ತುಮುಲ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ, ಸುವರ್ಣಮ್ಮ, ಡಿವೈಎಸ್‌ಪಿ ಶೇಖರ್‌, ಸಿಪಿಐ ಹನುಮಂತರಾಯಪ್ಪ, ಮುತ್ತಿರಾಜು, ಭಕ್ತ ಮಂಡಳಿಯ ಜಿ.ಆರ್‌.ಧನಪಾಲ್‌, ದೋಲಿಬಾಬು, ಪತ್ರಕರ್ತ ಜಿ.ನಾರಾಯಣ್‌ರಾಜು ಇತರರು ದರ್ಶನ ಪಡೆದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...