-ವಿದ್ಯಾ ವಿಕಾಸ ಸಂಸ್ಥೆಯಲ್ಲಿ ಕಿಡ್ಡಿ ಫೀಟ್ ವಿಭಾಗದಿಂದ ಆಯೋಜಿಸಿದ್ದ ಅಜ್ಜಿ-ತಾತಂದಿರ ದಿನಾಚರಣೆ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಮಕ್ಕಳಿಗೆ ಅಜ್ಜಿ, ತಾತಂದಿರೆ ಬೆಸ್ಟ್ ಫ್ರೆಂಡ್. ಇಂತಹ ಸ್ನೇಹಿತರು ಎಲ್ಲರಿಗೂ ಸಿಗುವುದಿಲ್ಲವೆಂದು ವಿದ್ಯಾ ವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್ ಅಭಿಪ್ರಾಯಪಟ್ಟರು.ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಕಿಡ್ಡಿ ಫೀಟ್ ವಿಭಾಗದಿಂದ ಆಯೋಜಿಸಿದ್ದ ಅಜ್ಜಿ-ತಾತಂದಿರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅನಾದಿ ಕಾಲದಿಂದಲೂ ಮನೆಯಲ್ಲಿ ಅಜ್ಜಿಯರು ಮೊಮ್ಮಕ್ಕಳಿಗೆ ನೀತಿ ಕತೆಗಳ ಹೇಳುತ್ತಾ ಬದುಕಿನ ಮಾರ್ಗಗಳ ಪರಿಚಯ ಮಾಡಿಕೊಡುತ್ತಿದ್ದರು. ಮೊದಲ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆಗಳಲ್ಲಿ ಅಜ್ಜಿಯರೊಂದಿಗೆ ಒಡನಾಟಗಳು ಕಡಿಮೆಯಾಗುತ್ತಿರುವುದು ವಿಷಾಧನೀಯ ಎಂದರು.
ಐಸಿಎಸ್‌ಇ ಪ್ರಿನ್ಸಿಪಾಲ ಬಸವರಾಜಯ್ಯ ಮಾತನಾಡಿ, ಅಜ್ಜಿ ತಾತಂದಿರು ಎಂದರೆ ನಮಗೆ ವಿಶೇಷ ಗೌರವವಿರುತ್ತದೆ. ಪ್ರತಿದಿನ ಅವರು ಮನೆಯಲ್ಲಿ ಸಲಹೆ ಸೂಚನೆ ನೀಡಿ ಮನೆಯು ಅಚ್ಚು ಕಟ್ಟಾಗಿ ನಡೆಯಲು ಸಹಕರಿಸುತ್ತಾರೆ. ಅಜ್ಜಿ ತಾತಂದಿರು ಮನೆಯಲ್ಲಿ ಎಷ್ಟೇ ನೋವು ಇದ್ದರೂ ಸಹ ನಗುನಗುತ್ತಾ ಇರುತ್ತಾರೆ. ಇತರಿಗೆ ನಗುವುದನ್ನು ಕಲಿಸುವ ಮೂಲಕ ಜೀವನ ಪಾಠವನ್ನು ಹೇಳಿಕೊಡುತ್ತಾರೆ. ಇಳಿ ವಯಸ್ಸಿನಲ್ಲಿಯೂ ಮಕ್ಕಳನ್ನು ಬೆಳೆಸುತ್ತಾರೆ, ಬೆರೆಯುತ್ತಾರೆ, ಆ ಮೂಲಕ ಜಗತ್ತನ್ನು ಬೆಳಗುತ್ತಾರೆ. ಅಜ್ಜಿ ತಾತ ಮೊಮ್ಮಕ್ಕಳ ನಂಟು ಬಿಡಿಸಲಾರದ ಗಂಟು. ತಂದೆ ತಾಯಿಗಳ ಮಮತೆ ಅಕ್ಕರೆ ಒಂದೆಡೆಯಾದರೆ, ಪ್ರೀತಿ-ವಾತ್ಸಲ್ಯ ಮಮತೆ ಕರುಣೆ ಈ ಪದಗಳ ಪ್ರತಿ ರೂಪವೇ ಅಜ್ಜಿ ತಾತಂದಿರು ಎಂದರು.
---------------
ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಜ್ಜ-ಅಜ್ಜಿಯಂದಿರ ದಿನಾಚರಣೆಗೆ ಕಾರ್ಯದರ್ಶಿ ವಿಜಯಕುಮಾರ್ ಚಾಲನೆ ನೀಡಿದರು.
ಫೋಟೋ ಫೈಲ್ ನೇಮ್- 15 ಸಿಟಿಡಿ 2